CCI Penalty on Google: ಗೂಗಲ್​ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ – Googles Second Fine In India In Less Than A Week CCI imposed 936 Crores rupee fine for teck giant kannada news


ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್​ಗೆ ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗ ಇದೀಗ ಮತ್ತೊಮ್ಮೆ 936.44 ಕೋಟಿ ರೂ. ದಂಡ ವಿಧಿಸಿದೆ.

CCI Penalty on Google: ಗೂಗಲ್​ಗೆ ಮತ್ತೊಮ್ಮೆ ಭಾರಿ ದಂಡ ವಿಧಿಸಿದ ಸಿಸಿಐ, ಕಾರಣ ಇಲ್ಲಿದೆ

ಸಾಂದರ್ಭಿಕ ಚಿತ್ರ

ನವದೆಹಲಿ: ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಕೆಲವು ದಿನಗಳ ಹಿಂದಷ್ಟೇ ಗೂಗಲ್​ಗೆ (Google) ಭಾರಿ ಮೊತ್ತದ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗ (CCI) ಇದೀಗ ಮತ್ತೊಮ್ಮೆ ಅಂಥದ್ದೇ ಕಾರಣಕ್ಕಾಗಿ ದಂಡ ಹೇರಿದೆ. ಪ್ಲೇ ಸ್ಟೋರ್ (Play Store) ನೀತಿಗಳಿಗೆ ಸಂಬಂಧಿಸಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿರುವ ಸಿಸಿಐ 936.44 ಕೋಟಿ ರೂ. ದಂಡ ವಿಧಿಸಿದೆ. ಜತೆಗೆ, ನ್ಯಾಯೋಚಿತವಲ್ಲದ ವ್ಯಾಪಾರದ ಅಭ್ಯಾಸವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದೆ.

ನಿಗದಿತ ಕಾಲಮಿತಿಯ ಒಳಗೆ ತನ್ನ ನಡವಳಿಕೆಯನ್ನು ಮಾರ್ಪಡುವಂತೆ ಗೂಗಲ್​ಗೆ ಸೂಚಿಸಲಾಗಿದೆ ಎಂದು ಸಿಸಿಐ ಪ್ರಕಟಣೆ ತಿಳಿಸಿದೆ. ಒಂದು ವಾರದ ಅವಧಿಯಲ್ಲಿ ಗೂಗಲ್ ವಿರುದ್ಧ ಸಿಸಿಐ ಕಠಿಣ ನಿಲುವು ತಳೆದ ಎರಡನೇ ಪ್ರಕರಣ ಇದಾಗಿದೆ.

ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದ ಸ್ಪರ್ಧಾ ವಿರೋಧಿ ಅಭ್ಯಾಸಗಳಿಗಾಗಿ ಅಕ್ಟೋಬರ್ 20ರಂದು ಗೂಗಲ್​ಗೆ ಸಿಸಿಐ 1,337 ಕೋಟಿ ರೂ. ದಂಡ ವಿಧಿಸಿತ್ತು. ಜತೆಗೆ, ಸ್ಪರ್ಧಾ ವಿರೋಧಿ ಅಭ್ಯಾಸಗಳನ್ನು ಮುಂದುವರಿಸದಂತೆ ಸೂಚಿಸಿತ್ತು.

TV9 Kannada


Leave a Reply

Your email address will not be published.