ಬೆಂಗಳೂರು: ಚಾಮರಾಜನಗರದಲ್ಲಿ ತಡರಾತ್ರಿ ಆಕ್ಸಿಜನ್ ಕೊರತೆಯಾದ ಪರಿಣಾಮ 24  ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್​ ಕೊರತೆಗೆ ಸರ್ಕಾರವೇ ಕಾರಣ ಎಂದು ಟೀಕಿಸಿರುವ ಕಾಂಗ್ರೆಸ್.​ ಆರೋಗ್ಯ ಇಲಾಖೆ ಸಚಿವ ಡಾ. ಕೆ. ಸುಧಾಕರ್ ವಿರುದ್ಧ ಕಿಡಿಕಾರಿದೆ.

ಡಾ. ಸುಧಾಕರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್.. ಸುಧಾಕರ್ ಅವರೇ, ಸಿ.ಡಿಗೆ ತಡೆಯಾಜ್ಞೆ ತರುವಲ್ಲಿ ತಾವು ತೋರಿದ ತರಾತುರಿಯನ್ನು ಆಕ್ಸಿಜನ್ ವಿಚಾರದಲ್ಲಿ ತೋರದಿದ್ದದ್ದು ಏಕೆ..? ಈ ಸಾವುಗಳ ಹೊಣೆ ನಿಮ್ಮದಲ್ಲದೆ ಇನ್ಯಾರದ್ದು ಎಂದು ಪ್ರಶ್ನಿಸಿದೆ. ಅಲ್ಲದೇ #ResignKillerSudhakar ಎಂದು ಹ್ಯಾಷ್​​ಟ್ಯಾಗ್ ಬಳಸಿದೆ.

ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾದ ಸಿ.ಡಿ ಬಿಡುಗಡೆಯಾದ ಬೆನ್ನಲ್ಲೇ ಡಾ. ಸುಧಾಕರ್ ಆದಿಯಾಗಿ ಹಲವು ಸಚಿವರು ಕೋರ್ಟ್​​ ಮೊರೆ ಹೋಗಿದ್ದರು. ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿಗಳನ್ನ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿದ್ದರು.

ಇದನ್ನೂ ಓದಿ:ಜಾರಕಿಹೊಳಿ CD ಪ್ರಕರಣ ಬೆನ್ನಲ್ಲೇ ಭೀತಿಯಿಂದ ಕೋರ್ಟ್​ ಮೊರೆ ಹೋದ 6 ಸಚಿವರು 

The post ‘CDಗೆ ತಡೆಯಾಜ್ಞೆ ತರುವಲ್ಲಿ ತೋರಿದ ತರಾತುರಿ ಆಕ್ಸಿಜನ್​ ವಿಚಾರದಲ್ಲಿ ಯಾಕಿಲ್ಲ..?’ -ಕಾಂಗ್ರೆಸ್ ಪ್ರಶ್ನೆ appeared first on News First Kannada.

Source: newsfirstlive.com

Source link