ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬ್ಲಾಕ್ ಮೇಲ್ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​​ ಲಭಿಸಿದ್ದು, ಸಂತ್ರಸ್ತ ಯುವತಿ ಹೊಸ ಅರ್ಜಿ ಸಮೇತ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸದಾಶಿವನಗರ ಪೊಲೀಸ್ ಠಾಣೆಯ ಕ್ರೈಂ ನಂ. 21 /2021 ಕುರಿತು ಸಂತ್ರಸ್ತೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯಲ್ಲಿ ಸಚಿವ ರಮೇಶ್​ ಜಾರಕಿಹೊಳಿ‌ ಕೊಟ್ಟ ದೂರನ್ನು ಚಾಲೆಂಜ್ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸುಪ್ರೀಂ ಕೋರ್ಟ್ ವಕೀಲ ಸಂಕೇತ ಏಣಗಿ ಮೂಲಕ ಯುವತಿ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠ, ವಿಶೇಷ ತನಿಖಾದಳ (ಎಸ್​​ಐಟಿ) ಹಾಗೂ ರಮೇಶ್​ ಜಾರಕಿಹೊಳಿ ಅವರಿಗೆ ತುರ್ತು ನೋಟಿಸ್​ ಜಾರಿ ಮಾಡಿದೆ. ಜೂನ್ 21ರ ಒಳಗೆ ಉತ್ತರಿಸಲು ನೋಟಿಸ್​​ನಲ್ಲಿ ಸೂಚನೆ ನೀಡಿ, ಅರ್ಜಿ ವಿಚಾರಣೆಯನ್ನು ಜೂ. 21ಕ್ಕೆ ಮುಂದೂಡಿದೆ.

ಅರ್ಜಿಯಲ್ಲಿ ಯುವತಿ ಆರೋಪಗಳು..
ಅರ್ಜಿಯಲ್ಲಿ ಸಂತ್ರಸ್ತೆ ಎಸ್​​ಐಟಿ ತನಿಖೆಯ ಬದ್ಧತೆ ಹಾಗೂ ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡಿದ್ದು, ತಾನು ಮತ್ತು ದಿನೇಶ್ ಕಲ್ಲಹಳ್ಳಿ ಕೊಟ್ಟ ದೂರನ್ನ ಮುಚ್ಚಿ ಹಾಕ್ತಿದ್ದಾರೆ. ಸರ್ಕಾರದ ದುರುದ್ದೇಶದ ಪ್ರತಿಯೊಂದು ಪ್ರಯತ್ನ ಇದ್ದಾಗಿದ್ದು, ತನಿಖೆ ಪ್ರತಿ ಹಂತದಲ್ಲೂ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಅಲ್ಲದೇ ಪ್ರಕರಣದಲ್ಲಿ ರಮೇಶ್​ ಜಾರಕಿಹೊಳಿ ಅವರಿಗೆ ಕ್ಲೀನ್​ ಚಿಟ್​ ನೀಡಲು ಸರ್ಕಾರ ಮತ್ತು ಎಸ್​​​ಐಟಿ ಸಿದ್ಧತೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

The post CD ಕೇಸ್​​ಗೆ ಮತ್ತೊಂದು ಬಿಗ್​​ ಟ್ವಿಸ್ಟ್​​- ಹೈಕೋರ್ಟ್​ ಮೆಟ್ಟಿಲೇರಿದ ಸಂತ್ರಸ್ತೆ appeared first on News First Kannada.

Source: newsfirstlive.com

Source link