ಬೆಂಗಳೂರು: ಸಿ.ಡಿ ಕೇಸ್​ಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ನೇತೃತ್ವದಲ್ಲಿ  ನಿನ್ನೆ ಆರೋಪಿಗಳಾದ ನರೇಶ್​ ಹಾಗೂ ಶ್ರವಣ್ ವಿಚಾರಣೆ ನಡೆದಿದೆ. ಅದರ ಬೆನ್ನಲ್ಲೇ ಆರೋಪಿಗಳಿಗೆ ಮತ್ತೆ ವಿಚಾರಣೆಗೆ ಹಾಜರಾಗಲು ಎಸ್​​ಐಟಿ ನೋಟಿಸ್ ನೀಡಿದೆ.

ವಿಶೇಷ ಎಂದರೆ ನಿನ್ನೆ ಒಟ್ಟಿಗೆ ವಿಚಾರಣೆಗೆ ಹಾಜರಾಗಿದ್ದ ಇಬ್ಬರು ಆರೋಪಿಗಳಿಗೆ ನೋಟಿಸ್​ ನೀಡಿರುವ ಪೊಲೀಸರು, ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಕರೆದಿದ್ದಾರೆ. ಜೂನ್ 14ರ ಸೋಮವಾರ 11 ಗಂಟೆಗೆ ಆರೋಪಿ ನರೇಶ್​​ಗೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಇನ್ನು ಜೂನ್ 15ರ ಮಂಗಳವಾರ 11 ಗಂಟೆಗೆ ಹಾಜರಾಗುವಂತೆ ಆರೋಪಿ ಶ್ರವಣ್​ಗೆ ನೋಟಿಸ್​ ನೀಡಿದ್ದಾರೆ.

ನಿನ್ನೆ ಹಿರಿಯ ಅಧಿಕಾರಿಗಳು ನೀಡಿದ ಸಲಹೆ ಆಧಾರದಲ್ಲಿ ನಡೆದ ವಿಚಾರಣೆಯಲ್ಲಿ ಈಗಾಗಲೇ ಅರೋಪಿಗಳು ತಮ್ಮ ವಕೀಲರ ಜೊತೆ ಸಮಾಲೋಚನೆ ನಡೆಸಿರುವಂತೆಯೇ.. ವಕೀಲರು ನೀಡಿರುವ ಸಲಹೆಯಂತೆಯೇ ಉತ್ತರ ನೀಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ಇದನ್ನೂ ಓದಿ: CD ಕೇಸ್: ACP ಧರ್ಮೇಂದ್ರ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ರಾ ಆರೋಪಿಗಳು?

The post CD ಕೇಸ್​​; ಪ್ರತ್ಯೇಕ ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ನರೇಶ್​, ಶ್ರವಣ್​​ಗೆ SIT ನೋಟಿಸ್​​ appeared first on News First Kannada.

Source: newsfirstlive.com

Source link