ಬೆಂಗಳೂರು: ಯುವತಿಗೆ ನಂಬಿಸಿ, ವಂಚಿಸಿದ ಆರೋಪದ ಪ್ರಕರಣದಲ್ಲಿ ಕ್ಲೀನ್ ಚಿಟ್​ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದೆ. ಸದ್ಯ ನಡೆಯುತ್ತಿರುವ ಸಂಪುಟ ಪುನರ್​ ರಚನೆ ಪ್ರಕ್ರಿಯೆಯಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಆದ್ರೆ ಪ್ರಕರಣದಲ್ಲಿ ಬಿ ರಿಪೋರ್ಟ್ ಪ್ರಕ್ರಿಯೆಯನ್ನ ಎಸ್ಐಟಿ ಮುಂದೂಡಿಕೆ ಮಾಡಿದೆ.

ಪ್ರಕರಣದ ಪ್ರಗತಿ ವರದಿಯನ್ನ ಹೈಕೋರ್ಟ್​​ಗೆ ನೀಡಲಾಗಿದ್ದು ಮುಂದಿನ 17 ನೇ ತಾರೀಕು ಮತ್ತೊಂದು ಸ್ಟೇಟಸ್ ರಿಪೋರ್ಟ್ ನೀಡಬೇಕಿದೆ. ಹೈಕೋರ್ಟ್ ಎಸ್ಐಟಿ ತನಿಖೆ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ರೆ ರೆಡಿ ಇರುವ ದಾಖಲೆಗಳ ಸಮೇತ ಎಸ್ಐಟಿ ರಿಪೋರ್ಟ್ ಸಲ್ಲಿಸಲಿದೆ ಎನ್ನಲಾಗಿದೆ.

ಹೈಕೋರ್ಟ್ ಪ್ರಶ್ನೆ ಮಾಡಿದ್ರೆ ಮತ್ತಷ್ಟು ಸಾಕ್ಷಿಗಳ ಸ್ಟೇಟಸ್ ರಿಪೋರ್ಟ್ ನೀಡಲಿದೆಯಂತೆ. ಆರೋಪಿಗಳ ಹಿಂದಿನ ಕೆಲ ಕೃತ್ಯಗಳ ಸಾಕ್ಷಿಗಳು ಲಭ್ಯವಾಗಿದ್ದು ಅವುಗಳನ್ನೂ ಸೇರಿಸಿ ಸಂಪೂರ್ಣ ವರದಿ ನೀಡಲು ಎಸ್​ಐಟಿ ಸಂಪೂರ್ಣ ವರದಿ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ನ್ಯೂಸ್ ಫಸ್ಟ್ ಗೆ ಎಸ್ಐಟಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

The post CD ಕೇಸ್: ಕ್ಲೀನ್​ ಚಿಟ್​ ಪಡೆಯೋ ಖುಷಿಯಲ್ಲಿದ್ದ ರಮೇಶ್ ಜಾರಕಿಹೊಳಿಗೆ ನಿರಾಸೆ appeared first on News First Kannada.

Source: newsfirstlive.com

Source link