ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಯ ಬ್ಲಾಕ್ ಮೇಲ್ ಆರೋಪ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರವಣ್, ನರೇಶ್​ಗೆ ಬಂಧನ ಭೀತಿ ಎದುರಾಗಿದೆ.

ಆರೋಪಿಗಳಿಗೆ ಕೋರ್ಟ್ ನೀಡಿರುವುದು ಷರತ್ತುಬದ್ಧ ನಿರೀಕ್ಷಣಾ ಜಾಮೀನಾಗಿದ್ದು ಅಗತ್ಯ ಬಿದ್ದರೆ ಬಂಧಿಸಿ ವಿಚಾರಣೆಗೆ ಒಳಪಡಿಸಲು ತನಿಖಾಧಿಕಾರಿಗಳಿಗೆ ಕೋರ್ಟ್ ಅನುಮತಿ ನೀಡಿದೆ. ವಿಚಾರಣೆಯಲ್ಲಿ ಬಂಧನ ಅತ್ಯಗತ್ಯವಾಗಿದ್ದರೆ ಬಂಧಿಸಬಹುದು.. ಸೂಕ್ತ ಮಾಹಿತಿ ಆಧರಿಸಿ ವಸ್ತು/ದಾಖಲೆ ವಶಪಡಿಸಿಕೊಳ್ಳಬಹುದು ಎಂದು ಗೇಲುವ ಮೂಲಕ ಸೆಷನ್ಸ್ ಕೋರ್ಟ್​ ತನಿಖಾಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದೆ.

ಹೀಗಾಗಿ ನಿರೀಕ್ಷಣಾ ಜಾಮೀನು ಸಿಕ್ಕರೂ ಆರೋಪಿಗಳಿಗೆ ಬಂಧನ ಭೀತಿ ತಪ್ಪಿಲ್ಲ. ಇನ್ನು ಆರೋಪಿಗಳು ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲ. 5 ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಶರಣಾಗಬೇಕು.. ಸಾಕ್ಷಿಗಳಿಗೆ ಬೆದರಿಕೆ, ಆಮಿಷ ಒಡ್ಡುವಂತಿಲ್ಲ. ತನಿಖಾಧಿಕಾರಿ ಕರೆದಾಗಲೆಲ್ಲ ವಿಚಾರಣೆಗೆ ಹಾಜರಾಗಬೇಕು.. ಇಂಥದ್ದೇ ಬೇರೆ ಕೃತ್ಯಗಳಲ್ಲಿ ತೊಡಗುವಂತಿಲ್ಲ.. ಯಾವುದೇ ಷರತ್ತು ಉಲ್ಲಂಘಿಸಿದರೂ ಜಾಮೀನು ರದ್ದಾಗಲಿದೆ.. ತಾನೇತಾನಾಗಿ ಜಾಮೀನು ರದ್ದಾಗಲಿದೆ ಎಂದು ಸಿಸಿಹೆಚ್ 91 ರ ನ್ಯಾಯಾಧೀಶ ಶ್ರೀಧರ್ ಗೋಪಾಲಕೃಷ್ಣ ಭಟ್ ಆದೇಶ ಹೊರಡಿಸಿದ್ದಾರೆ.

The post CD ಕೇಸ್: ಜಾಮೀನು ಸಿಕ್ಕಿದ್ರೂ ಶ್ರವಣ್, ನರೇಶ್​ಗೆ ತಪ್ಪಿಲ್ಲ ಬಂಧನ ಭೀತಿ.. ಯಾಕೆ ಗೊತ್ತಾ..? appeared first on News First Kannada.

Source: newsfirstlive.com

Source link