ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲಾಕ್ ಮೇಲ್ ಆರೋಪ‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಶಂಕಿತ ಆರೋಪಿ ನರೇಶ್ ಹಾಗೂ ಶ್ರವಣ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ನಿರೀಕ್ಷಣಾ ಜಾಮೀನು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು.. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಪೊಲೀಸರು ಕಾಲಾವಕಾಶ ಕೋರಿದರು. ಆಕ್ಷೇಪಣೆ ಸಲ್ಲಿಸದೇ ಇರೋದಕ್ಕೆ ಗರಂ ಆದ ಕೋರ್ಟ್.. ಎಸ್ ಐ ಟಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿ ಬುಧವಾರ ಆಕ್ಷೇಪಣೆ ಸಲ್ಲಿಸಲೇಬೇಕು ಎಂದರು. ವಿಚಾರಣೆಯನ್ನ ಜೂನ್​ 2 ಕ್ಕೆ ಮುಂದೂಡಲಾಯ್ತು. 91 ನೇ ಸಿಟಿ ಸಿವಿಲ್ ಕೋರ್ಟ್​ನಿಂದ ಈ ಆದೇಶ ಹೊರಬಿದ್ದಿದೆ.

ಬ್ಲಾಕ್ ಮೇಲ್‌ ಸಂಬಂಧರಮೇಶ್ ಜಾರಕಿಹೊಳಿ ದೂರು ನೀಡಿದ್ದರು.. ಬಂಧನ ಭೀತಿಯಿಂದ ಆರೋಪಿಗಳು ಕೋರ್ಟ್ ಮೆಟ್ಟಿಲೇರಿದ್ದರು.

The post CD ಕೇಸ್: ನರೇಶ್ & ಶರಣ್​ಗೆ ಸದ್ಯಕ್ಕಿಲ್ಲ ರಿಲೀಫ್.. ಜಾಮೀನು ಅರ್ಜಿ ಮುಂದೂಡಿಕೆ appeared first on News First Kannada.

Source: newsfirstlive.com

Source link