ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಕೇಸ್​​ಗೆ ಸಂಬಂಧಿಸಿದಂತೆ ಎಸ್​ಐಟಿ ತನಿಖೆಯ ಕೋರ್ಟ್ ಮಾನಿಟರಿಂಗ್, ಇಲ್ಲವೇ ತನಿಖಾ ಸಂಸ್ಥೆ ಬದಲಾಯಿಸಲು ಕೋರಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ನಡೆಯಿತು.

ಮುಚ್ಚಿದ ಲಕೋಟೆಯಲ್ಲಿ ಎಸ್ಐಟಿಯ ತನಿಖಾ ಪ್ರಗತಿ ವರದಿಯನ್ನ ಸರ್ಕಾರದ ಎಜಿಯಿಂದ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠಕ್ಕೆ ಸಲ್ಲಿಕೆ ಮಾಡಲಾಯ್ತು.. ಈ ವರದಿಯನ್ನ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್​​ ಸಲ್ಲಿಸಿದ್ದರು. ಎಸ್​ಐಟಿ ಮುಖ್ಯಸ್ಥರಿಂದ ಅಧಿಕಾರ ಪಡೆದು ಸರ್ಕಾರದ ಎಜಿ ವರದಿ ಸಲ್ಲಿಕೆ ಮಾಡಿದರು.

ಕಳೆದ ವಿಚಾರಣೆ ವೇಳೆ ಸಂದೀಪ್ ಪಾಟೀಲ್​ ಸಲ್ಲಿಸಿದ್ದ ವರದಿಯನ್ನ ಪ್ರಶ್ನಿಸಿದ ಅರ್ಜಿದಾರರ ಪರ ವಕೀಲರು.. ಮುಚ್ಚಿದ ಲಕೋಟೆಯಲ್ಲಿ ವರದಿ ಕೊಡೋದು ಸರಿಯಲ್ಲ ಎಂದು ವಾದ ಮಾಡಿದ್ದರು. ಮುಚ್ಚಿದ ಲಕೋಟೆಯಲ್ಲಿ ವರದಿ ಕೊಡೋದು ಸರಿಯಲ್ಲ ಎಂದಿದ್ದರು.

ಸಂತ್ರಸ್ತೆ ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿ.. ಈ ವರದಿಯ ಬಗ್ಗೆಯೇ ನಮಗೆ ಆತಂಕ ಇದೆ ಯುವತಿ ಈಗಾಗಲೇ ಎಸ್ ಐಟಿಯ ಮೇಲೆ ನಂಬಿಕೆ ಇಲ್ಲ ಎಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಆಕೆಯ ಅರ್ಜಿ ವಿಚಾರಣೆಯೂ ಬಾಕಿ ಇದೆ ಎಂದು ವಾದಿಸಿದರು.

ತನಿಖಾ ಪ್ರಗತಿ ವರದಿ ಪರಿಶೀಲಿಸಿ ನ್ಯಾಯಪೀಠ ದಾಖಲಿಸಿಕೊಂಡಿತು, ಈ ವೇಳೆ ಎಸ್ಐಟಿ ತನಿಖೆ ಪ್ರಶ್ನಿಸಿ ಯುವತಿ ಸಲ್ಲಿಸಿದ್ದ ಅರ್ಜಿ ಸೇರಿ ವಿಚಾರಣೆಗೆ ಮನವಿ ಮಾಡಲಾಯ್ತು.. ಮುಂದಿನ ವಿಚಾರಣೆ ವೇಳೆ ಯುವತಿ ಅರ್ಜಿಯನ್ನೂ ಕ್ಲಬ್ ಮಾಡಲು ನ್ಯಾಯಪೀಠ ಸೂಚನೆ ನೀಡಿತು. ಈಗಾಗಲೇ ಏಕಸದಸ್ಯ ಪೀಠದಲ್ಲಿ ಸಂತ್ರಸ್ತ ಯುವತಿ ರಿಟ್ ಅರ್ಜಿ ಸಲ್ಲಿಸಿದ್ದು ಮುಂದಿನ ವಿಚಾರಣೆಗೆ ಮತ್ತೆ ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಲು ಸೂಚನೆ ನೀಡಿತು. 23 ನೇ ತಾರೀಖಿಗೆ ವಿಚಾರಣೆ ಮುಂದೂಡಲಾಯ್ತು.

ವಾದ ಪ್ರತಿವಾದ:
ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿದರು.. ಯುವತಿ ಪರವಾಗಿ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿ ತನ್ನನ್ನೂ ವಾದಿಯಾಗಿಸುವಂತೆ ಕೋರಿದರು. ಯುವತಿ ಎಸ್ಐಟಿ ತನಿಖೆ ಪ್ರಶ್ನಿಸಿ ರಿಟ್ ಸಲ್ಲಿಸಿದ್ದಾಳೆ.. ಅರ್ಜಿಯನ್ನೂ ಪಿಐಎಲ್ ನೊಂದಿಗೆ ವಿಚಾರಣೆ ನಡೆಸಿ ಎಂದು ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಮನವಿ ಮಾಡಿದರು. ಯುವತಿ ಕೊಟ್ಟಿರುವ ದೂರು ಮುಕ್ತಾಯಗೊಳಿಸುವ ಸಾಧ್ಯತೆಯಿದೆ.. ಹೈಕೋರ್ಟ್ ಉಸ್ತುವಾರಿಯಲ್ಲಿದ್ದಾಗ ತನಿಖೆ ಮುಕ್ತಾಯಗೊಳಿಸಬಾರದು ಎಂದು ಮನವಿ ಮಾಡಿದರು.

ಸರ್ಕಾರದ ಎಜಿಯವರು ವಾದ ಮಂಡಿಸಿ ತನಿಖೆ ಪ್ರಗತಿ ವರದಿಯನ್ನಷ್ಟೇ ಸಲ್ಲಿಸಲಾಗಿದೆ ತನಿಖೆ ಇನ್ನೂ ಪ್ರಗತಿಯಲ್ಲಿರುವುದಾಗಿ ಅಡ್ವೊಕೆಟ್ ಜನರಲ್ ಹೇಳಿಕೆ ನೀಡಿದರು.

The post CD ಕೇಸ್; ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆಗೆ ಯುವತಿ ಪರ ವಕೀಲೆ ವಿರೋಧ appeared first on News First Kannada.

Source: newsfirstlive.com

Source link