ತುಮಕೂರು: ಮಾಜಿ ಸಚಿವರ ಸಿಡಿ ಪ್ರಕರಣದ ಶಂಕಿತ ಆರೋಪಿಯಾಗಿರುವ ನರೇಶ್ ಗೌಡಗೆ ಶಿರಾ ಪಟ್ಟಣದಲ್ಲಿ ಅದ್ಧೂರಿ ಸ್ವಾಗತ ಮಾಡಲಾಗಿದೆ.

ಶಿರಾ ಪಟ್ಟಣಕ್ಕೆ ಆಗಮಿಸಿದ ನರೇಶ್ ಗೌಡಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಮಾಡಿದ್ದು ಶಿರಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಟಾಕಿ ಸಿಡಿಸಿ ಹೆಗಲ ಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡಿದ್ದಾರೆ.

ಇತ್ತೀಚೆಗಷ್ಟೇ ಸಿಡಿ ಪ್ರಕರಣದಲ್ಲಿ ನರೇಶ್ ಗೌಡಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ನೀಡಿತ್ತು. ಸಿಡಿ ಕೇಸ್​ ಬಂದ ಬಳಿಕ ಭೂಗತನಾಗಿದ್ದುಕೊಂಡೇ ನರೇಶ್ ಗೌಡ ಹೇಳಿಕೆ ಬಿಡುಗಡೆ ಮಾಡುತ್ತಿದ್ದ ಎನ್ನಲಾಗಿತ್ತು.. ಇನ್ನು ನಗರದಲ್ಲಿ ನರೇಶ್​ಗೌಡಗೆ ಸುಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಕಾಂಗ್ರೆಸ್ ಚಿಹ್ನೆ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪೋಟೊ ಹಾಕಿ ಸ್ವಾಗತ ಮಾಡಲಾಗಿದೆ. ಈ ಮೂಲಕ ಶಿರಾದಲ್ಲಿ ರಾಜಕೀಯವಾಗಿ ಗುರುತಿಸಿಕೊಳ್ಳುವ ಯತ್ನದಲ್ಲಿ ನರೇಶ್ ಗೌಡ ಇದ್ದಾರೆ ಎನ್ನಲಾಗಿದೆ.

 

The post CD ಕೇಸ್ ಶಂಕಿತ ಆರೋಪಿ ನರೇಶ್​ ಗೌಡಗೆ ಭರ್ಜರಿ ಸ್ವಾಗತ; ಯುವ ಕಾಂಗ್ರೆಸ್ ಮುಖಂಡ ಅಂತ ಫ್ಲೆಕ್ಸ್ appeared first on News First Kannada.

Source: newsfirstlive.com

Source link