CDS Bipin Rawat ಸಿಡಿಎಸ್ ಬಿಪಿನ್ ರಾವತ್ ವೃತ್ತಿಜೀವನ: ಸರ್ಜಿಕಲ್ ಸ್ಟ್ರೈಕ್ ಕಾರ್ಯಗತಗೊಳಿಸಿದ್ದ ಗುಡ್ಡಗಾಡು ಸಂಘರ್ಷ ಪರಿಣಿತ | Counter insurgency Expert Defence Chief Gen Bipin Rawat Profile


CDS Bipin Rawat ಸಿಡಿಎಸ್ ಬಿಪಿನ್ ರಾವತ್ ವೃತ್ತಿಜೀವನ: ಸರ್ಜಿಕಲ್ ಸ್ಟ್ರೈಕ್ ಕಾರ್ಯಗತಗೊಳಿಸಿದ್ದ ಗುಡ್ಡಗಾಡು ಸಂಘರ್ಷ ಪರಿಣಿತ

ಬಿಪಿನ್ ರಾವತ್

ಇಂದು (08 ಡಿಸೆಂಬರ್ 2021) ತಮಿಳುನಾಡಿನ ಕೂನೂರಿನಲ್ಲಿ (Coonoor) ಸೇನಾ ಹೆಲಿಕಾಪ್ಟರ್ (IAF Helicopter Crash) ಪತನಗೊಂಡಿದೆ. ಇದರಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ (Bipin Rawat )ಮತ್ತು ಅವರ ಪತ್ನಿ ಸೇರಿದಂತೆ 14 ಮಂದಿ ಪ್ರಯಾಣಿಸುತ್ತಿದ್ದರು.  ಹೆಲಿಕಾಪ್ಟರ್ ದುರಂತದಲ್ಲಿ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಬಿಪಿನ್ ರಾವತ್ ಮೃತಪಟ್ಟಿದ್ದಾರೆ.  ಸಿಡಿಎಸ್ ಬಿಪಿನ್ ರಾವತ್ ಅವರ ವೃತ್ತಿಜೀವನವು ಭಾರತೀಯ ಸೇನೆಯ ಸೇವೆಯಲ್ಲಿ ದೀರ್ಘಕಾಲದ್ದಾಗಿದೆ. ಅವರು ಎತ್ತರದಲ್ಲಿ ಯುದ್ಧಗಳನ್ನು ಹೋರಾಡುವಲ್ಲಿ ಪರಿಣತರಾಗಿದ್ದಾರೆ. ಅವರ ಪರಿಣಿತಿ ಮತ್ತು ಕೌಶಲದ ಬಗ್ಗೆ ಇಲ್ಲಿದೆ ಮಾಹಿತಿ

ಬಿಪಿನ್ ರಾವತ್ ಅವರು ಎತ್ತರದ ಪ್ರದೇಶಗಳಲ್ಲಿ ಯುದ್ಧಗಳನ್ನು ಹೋರಾಡುವಲ್ಲಿ ಮತ್ತು ಬಂಡುಕೋರರ ನಿಗ್ರಹ ಕಾರ್ಯಾಚರಣೆಗಳಲ್ಲಿ (Counter insurgency) ಪರಿಣಿತರಾಗಿ ಸೈನ್ಯದಲ್ಲಿ ಹೆಸರುವಾಸಿಯಾಗಿದ್ದಾರೆ.
2016ರಲ್ಲಿ ಉರಿ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೇತೃತ್ವದಲ್ಲಿ 29 ಸೆಪ್ಟೆಂಬರ್ 2016ರಂದು ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲು ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. ಇದನ್ನು ಬಿಪಿನ್ ರಾವತ್ ಅವರು ಟ್ರೆಂಡ್ ಪ್ಯಾರಾ ಕಮಾಂಡೊಗಳ ಮೂಲಕ ಕಾರ್ಯಗತಗೊಳಿಸಿದ್ದಾರೆ.   ಉರಿ ಸೇನಾ ಶಿಬಿರ ಮತ್ತು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ದಾಳಿಯಲ್ಲಿ ಹಲವಾರು ಯೋಧರು ಹುತಾತ್ಮರಾದ ನಂತರ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.ಸೇನಾ ಸೇವೆಯ ಸಮಯದಲ್ಲಿ, ಅವರು LOC ಚೀನಾ ಗಡಿ ಮತ್ತು ಈಶಾನ್ಯದಲ್ಲಿ ದೀರ್ಘಕಾಲ ಕಳೆದಿದ್ದಾರೆ.

ಬಿಪಿನ್ ರಾವತ್ ಅವರು ಕಾಶ್ಮೀರ ಕಣಿವೆಯಲ್ಲಿ ಮೊದಲ ರಾಷ್ಟ್ರೀಯ ರೈಫಲ್ಸ್‌ನಲ್ಲಿ ಬ್ರಿಗೇಡಿಯರ್
ನಂತರ ಅವರು ಮೇಜರ್-ಜನರಲ್ ಆಗಿ ಪದಾತಿಸೈನ್ಯದ ವಿಭಾಗದ ನಾಯಕತ್ವ ವಹಿಸಿದರು.  ದಕ್ಷಿಣ ಕಮಾಂಡ್‌ಗೆ ಕಮಾಂಡ್ ಮಾಡುವಾಗ, ಅವರು ಪಾಕಿಸ್ತಾನದ ಪಶ್ಚಿಮ ಗಡಿಯಲ್ಲಿ ಯಾಂತ್ರಿಕೃತ-ಯುದ್ಧದ ಜೊತೆಗೆ ವಾಯುಪಡೆ ಮತ್ತು ನೌಕಾಪಡೆಯೊಂದಿಗೆ ಉತ್ತಮವಾಗಿ ಸಂಯೋಜಿಸಿದರು.   ಬಿಪಿನ್ ರಾವತ್ ಅವರು ಚೀನಾದ ಗಡಿಯಲ್ಲಿ ಕರ್ನಲ್ ಆಗಿ ಪದಾತಿದಳದ ಬೆಟಾಲಿಯನ್‌ಗೆ ಕಮಾಂಡ್ ಮಾಡಿದ್ದಾರೆ.

ಬಿಪಿನ್ ರಾವತ್ ಅವರಿಗೆ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಯಲ್ಲಿ ‘ಸ್ವರ್ಡ್ ಆಫ್ ಆನರ್’ ಪ್ರಶಸ್ತಿ ನೀಡಲಾಗಿದೆ.  ರಾವತ್ ಅವರು ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರಾಗಿ ಮತ್ತು ಭಾರತೀಯ ಸೇನೆಯ ಸೇನಾ ಸಿಬ್ಬಂದಿಯ 27 ನೇ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಗಡ್ವಾಲಿ ರಜಪೂತ  ಕುಟುಂಬದವರು
ಮಾರ್ಚ್ 16, 1958 ರಂದು ಉತ್ತರಾಖಂಡದ ಪೌರಿಯಲ್ಲಿ ಗಡ್ವಾಲಿ ರಜಪೂತ ಕುಟುಂಬದಲ್ಲಿ ಜನಿಸಿದ ಬಿಪಿನ್ ರಾವತ್  1978ರಲ್ಲಿ ಸೇನೆಗೆ ಸೇರಿದ್ದರು. ಬಿಪಿನ್ ರಾವತ್ ಅವರು 2011 ರಲ್ಲಿ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದಿಂದ ಮಿಲಿಟರಿ ಮಾಧ್ಯಮ ಅಧ್ಯಯನದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.

ಸೇನಾ ಮುಖ್ಯಸ್ಥರಿಂದ ಸಿಡಿಎಸ್‌ವರೆಗೆ ಪಯಣ
ಬಿಪಿನ್ ರಾವತ್ ಅವರು 01 ಸೆಪ್ಟೆಂಬರ್ 2016 ರಂದು ಸೇನೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 31 ಡಿಸೆಂಬರ್ 2016 ರಂದು ಭಾರತೀಯ ಸೇನೆಯ 26 ನೇ ಮುಖ್ಯಸ್ಥರ ಜವಾಬ್ದಾರಿಯನ್ನು ಪಡೆದರು. ಅದೇ ಸಮಯದಲ್ಲಿ, 30 ಡಿಸೆಂಬರ್ 2019 ರಂದು, ಅವರು ಭಾರತದ ಮೊದಲ ಸಿಡಿಎಸ್ ಆಗಿ ನೇಮಕಗೊಂಡಿದ್ದು 01 ಜನವರಿ 2020 ರಂದು ಸಿಡಿಎಸ್ ಉಸ್ತುವಾರಿ ವಹಿಸಿಕೊಂಡರು.

TV9 Kannada


Leave a Reply

Your email address will not be published. Required fields are marked *