CDS Bipin Rawat Death: ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ; ವಿವರ ಇಲ್ಲಿದೆ | CDS Bipin Rawat Death Funeral Final Rituals to be performed on Friday details here


CDS Bipin Rawat Death: ಶುಕ್ರವಾರ ದೆಹಲಿಯಲ್ಲಿ ಬಿಪಿನ್ ರಾವತ್ ಅಂತ್ಯಕ್ರಿಯೆ; ವಿವರ ಇಲ್ಲಿದೆ

ಬಿಪಿನ್​ ರಾವತ್​

ದೆಹಲಿ: ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ಬುಧವಾರ ನಿಧನ ಹೊಂದಿದ್ದಾರೆ. ತಮಿಳುನಾಡಿನ ಕುನೂರ್​​ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸೇನಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್​ ರಾವತ್ (Bipin Rawat) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವಿನ ಹೋರಾಟದಲ್ಲಿ ಇದ್ದ ಬಿಪಿನ್​ ರಾವತ್ ಮರಣವನ್ನು ಭಾರತೀಯ ವಾಯುಸೇನೆ ದೃಢಪಡಿಸಿದೆ. ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಹೆಲಿಕಾಪ್ಟರ್​​ನಲ್ಲಿದ್ದ ಇತರ 11 ಮಂದಿ ಇಂದಿನ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಹೇಳಿದೆ.

ಚಾಪರ್ ಅಪಘಾತದಲ್ಲಿ ದುರ್ಮರಣವನ್ನಪ್ಪಿರುವ ಬಿಪಿನ್ ರಾವತ್ ಅಂತ್ಯಕ್ರಿಯೆ ನಾಡಿದ್ದು (ಡಿಸೆಂಬರ್ 10) ದೆಹಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಡೆಯಲಿದೆ. ನಾಳೆ (ಡಿಸೆಂಬರ್ 9) ಸಂಜೆ ಬಿಪಿನ್‌ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥಿವ ಶರೀರವನ್ನು ದೆಹಲಿಗೆ ಶಿಫ್ಟ್‌ ಮಾಡಲಿದ್ದಾರೆ. ನಾಡಿದ್ದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿಡಿಎಸ್‌ ಬಿಪಿನ್‌ ರಾವತ್‌, ಪತ್ನಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುವ ಬಗ್ಗೆ ಮಾಹಿತಿ ನೀಡಲಾಗಿದೆ.

ಬಳಿಕ ಮೆರವಣಿಗೆಯ ಮೂಲಕ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಬಿಪಿನ್‌ ನಿವಾಸ ಕಾಮರಾಜ್‌ ಮಾರ್ಗದಿಂದ ಮೆರವಣಿಗೆ ಶುರು ಆಗಲಿದೆ. ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಮೆರವಣಿಗೆ ನಡೆಯಲಿದೆ. ನಾಡಿದ್ದು ಸಂಜೆ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದೆಹಲಿಯ ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.

ಹೆಲಿಕಾಪ್ಟರ್​ ದುರಂತದ ಬಗ್ಗೆ ಸಂಸತ್​ನಲ್ಲಿ ನಾಳೆ ವಿವರಣೆ ನೀಡಲಾಗುವ ಬಗ್ಗೆ ತಿಳಿಸಲಾಗಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ವಿವರಣೆ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ನಾಳೆ ವಿವರಣೆ ನೀಡಲಿದ್ದಾರೆ. ಘಟನೆಯ ಬಗ್ಗೆ ವಿವರಣೆ ನೀಡಲಿದ್ದಾರೆ. ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ನಿಧನ ಹಿನ್ನೆಲೆಯಲ್ಲಿ ಉತ್ತರಾಖಂಡ್‌ನಲ್ಲಿ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಣೆ ಮಾಡಲಾಗಿದೆ. ಉತ್ತರಾಖಂಡ್​ನ ಪೌರಿಯಲ್ಲಿ ಬಿಪಿನ್ ರಾವತ್ ಜನಿಸಿದ್ದರು. ಹೀಗಾಗಿ ಉತ್ತರಾಖಂಡ್​ನಲ್ಲಿ ಮೂರು ದಿನಗಳ ಶೋಕಾಚರಣೆ ಇರಲಿದೆ.

TV9 Kannada


Leave a Reply

Your email address will not be published. Required fields are marked *