ಪೋಷಕ ಪಾತ್ರಗಳಿಂದ ಕ್ಯಾಪ್ಟನ್ ಚಲಪತಿ ಚೌದ್ರಿ ಜನಪ್ರಿಯರಾಗಿದ್ದರು. ಹಲವು ಭಾಷೆಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ತೆಲುಗು ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಚಿತ್ರರಂಗದ ಅನೇಕರು ನಿಧನ ಹೊಂದುತ್ತಿರುವುದು ಬೇಸರದ ಸಂಗತಿ. ಈಗ ಈ ಸಾಲಿಗೆ ಹಿರಿಯ ನಟ ಕ್ಯಾಪ್ಟನ್ ಚಲಪತಿ ಚೌದ್ರಿ (Captain Chalapathi Chowdary) ಕೂಡ ಸೇರ್ಪಡೆ ಆಗಿದ್ದಾರೆ. ಅವರು ಇಂದು (ಮೇ 19) ರಾಯಚೂರಿನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಕ್ಯಾಪ್ಟನ್ ಚಲಪತಿ ಚೌದ್ರಿ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಪೋಷಕ ಪಾತ್ರಗಳಿಂದ ಕ್ಯಾಪ್ಟನ್ ಚಲಪತಿ ಚೌದ್ರಿ ಜನಪ್ರಿಯರಾಗಿದ್ದರು. ಹಲವು ಭಾಷೆಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದರು. ಅವರ ನಿಧನದಿಂದ ಬಣ್ಣದ ಲೋಕಕ್ಕೆ ನಷ್ಟ ಉಂಟಾಗಿದೆ.