1/4
1. ಕಠೋರ ಮಾತು ಅಥವಾ ಕಹಿ ಮಾತು: ಹಣ ಬಂತು ಅಂದರೆ ಸಾಮಾನ್ಯವಾಗಿ ಜನರ ಜೀವನಶೈಲಿಯೇ ಬದಲಾಗಿಬಿಡುತ್ತದೆ. ಅವರ ಹಮ್ಮುಬಿಮ್ಮು ಹೆಚ್ಚಾಗುತ್ತದೆ. ಮಾತು ಸಹ ಬದಲಾಗಿಬಿಡುತ್ತದೆ. ಆದರೆ ಚಾಣಕ್ಯ ಇಂತಹ ವಿಷಯದಲ್ಲಿಯೇ ಜನರನ್ನು ಎಚ್ಚರಿಸುವುದು. ಸಿರಿ ಬಂದಾಗ ಯಾರನ್ನೂ ಅಪಮಾನ ಮಾಡಬೇಡಿ. ಅಪ್ಪಿತಪ್ಪಿಯೂ ಇನ್ನೊಬ್ಬರ ಬಗ್ಗೆ ಕಠೋರ ಮಾತುಗಳನ್ನು ಹೇಳಬೇಡಿ. ಸೌಜನ್ಯದಿಂದ ವರ್ತಿಸಿ, ಸುಮಧುರ ಮಾತುಗಳನ್ನಾಡಿ.
2/4
2. ಕೋಪ: ಈ ಕೋಪ ಎಂಬುದು ಮನುಷ್ಯನ ಅತ್ಯಂತ ದೊಡ್ಡ ಶತ್ರು. ಕ್ರೋಧ ಮನುಷ್ಯನನ್ನು ಭಸ್ಮಗೊಳಿಸುತ್ತದೆ. ಆರ್ಥಿಕ ಸ್ಥಿತಿ ಉತ್ತಮಗೊಂಡಾಗ ಮನುಷ್ಯನಾದವನು ಧೈರ್ಯದಿಂದ ಕೆಲಸ ಕಾರ್ಯಗಳನ್ನು ಸಂಭಾಳಿಸಿಕೊಂಡು ನಡೆಯಬೇಕು. ಇಲ್ಲವಾದಲ್ಲಿ ಹೀಗೆ ಬಂದ ಹಣ ಹಾಗೆ ನಿಕಾಲಿಯಾಗಿಬಿಡುತ್ತದೆ.
3/4
3. ಅಭಿಮಾನ: ಸಹ ಮನುಷ್ಯರನ್ನು ಸದಾ ಅಭಿಮಾನದಿಂದ ಕಾಣಬೇಕು. ಅಪಮಾನ ಪಡಿಸಬಾರದು. ಧನ ಸಂಪತ್ತು ಬಂದುಬಿಡ್ತೂ ಅಂದರೆ ಅಭಿಮಾನ ಶೂನ್ಯರಾಗಿ ಬೇರೆಯವರನ್ನು ತೃಣಸಮಾನರಾಗಿ ಕಂಡು ಅಪಮಾನ ಮಾಡುವುದನ್ನೇ ಜನ ರೂಢಿಸಿಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಮನುಷ್ಯರನ್ನು ಅಪಮಾನಪಡಿಸದೆ, ಉತ್ತಮರಾಗಿ ನಡೆದುಕೊಳ್ಳುವವನೇ ರೂಢಿಯೊಳಗುತ್ತಮನು.
4/4
4. ಕೆಟ್ಟ ಚಟಗಳು: ಗಣ ಬಂತೂ ಅಂದರೆ ಸಾಕು ಕೆಟ್ಟ ಚಟಗಳನ್ನುರೂಢಿಸಿಕೊಂಡು ಅದರಿಂದಲೇ ಅದಃಪತನಗೊಳ್ಳುತ್ತಾರೆ. ಇದರಿಂದ ತಾಯಿ ಲಕ್ಷ್ಮಿ ಕ್ರೋಧಗೊಂಡು ನಿಮ್ಮ ಕೈಬಿಡುತ್ತಾಳೆ. ಚಾಣಕ್ಯ ನೀತಿಯ ಪ್ರಕಾರ ಮನುಷ್ಯ ತನ್ನ ನಿಜವಾದ ಮನುಷ್ಯ ಗುಣವನ್ನು ಧನಸಂಪತ್ತು ಬಂದಾಗಲೇ ತೋರಬೇಕಾಗಿರುವುದು. ಹಾಗಾಗಿ ಕೆಟ್ಟ ಚಟಗಳು, ದುರ್ಗುಣಗಳನ್ನು ಹೊಂದಬಾರದು.