Child Health: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ನಿರ್ಲಕ್ಷ್ಯಿಸಬೇಡಿ; ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಆಗಿರಬಹುದು ಎಚ್ಚರ! | Do not neglect child headache it can also symptoms of mental illness check in kannada


Child Health: ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ನಿರ್ಲಕ್ಷ್ಯಿಸಬೇಡಿ; ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಆಗಿರಬಹುದು ಎಚ್ಚರ!

ಸಂಗ್ರಹ ಚಿತ್ರ

ಮಕ್ಕಳಲ್ಲಿ ಆಗಾಗ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ ಅದು ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. ಈ ಸಮಸ್ಯೆಯಿಂದಾಗಿ ಮಕ್ಕಳಲ್ಲಿ ಆಯಾಸ, ದುರ್ಬಲತೆ ಕಂಡುಬರುತ್ತದೆ. ಸಾಮಾನ್ಯವಾಗಿ ಜನರು ತಲೆನೋವಿನ ಸಮಸ್ಯೆಯನ್ನು ನಿರ್ಲಕ್ಷ್ಯಿಸುತ್ತಾರೆ. ಆದರೆ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತಿದೆ ಎಂದಾದರೆ ನೀವು ತಡಮಾಡದೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ. ತಲೆನೋವಿನ ಸಮಸ್ಯೆಯಲ್ಲಿ ಎರಡು ವಿಧವಿದೆ. ಒಂದು ಸಾಮಾನ್ಯ ತಲೆ ನೋವು, ಇದು ವಿಶ್ರಾಂತಿ ಮತ್ತು ನೆಮ್ಮದಿ ಸಿಗುತ್ತಿದ್ದಂತೆಯೇ ವಾಸಿಯಾಗುತ್ತದೆ. ಆದರೆ ಮತ್ತೊಂದು ವಿಧದ ತಲೆ ನೋವು, ದೇಹ ಅಥವಾ ತಲೆಯ ಭಾಗದಲ್ಲಿನ ತೊಂದರೆಯಿಂದಾಗಿ ಕಾಣಿಸಿಕೊಳ್ಳುತ್ತದೆ. ಈ ತಲೆನೋವಿನ ಸಮಸ್ಯೆಯನ್ನು ನಿರ್ಲಕ್ಷ್ಯಿಸುವುದರಿಂದ ಗಂಭೀರ ಸಮಸ್ಯೆ ಕಾಡತೊಡಗಬಹುದು. ಹಾಗಾಗಿ ತಲೆನೋವಿನ ಸಮಸ್ಯೆಯನ್ನು ಎಂದಿಗೂ ನಿರ್ಲಕ್ಷ್ಯಿಸಬೇಡಿ.

ಆಹಾರ ಪದ್ಧತಿ
ವೈದ್ಯರ ಪ್ರಕಾರ, ಹೆಚ್ಚಿನ ಸಂದರ್ಭಗಳಲ್ಲಿ ಶೀತ, ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ತಲೆನೋವು ಬರುವುದು ಸಾಮಾನ್ಯ. ಇದರ ಹೊರತಾಗಿ ಕೆಟ್ಟ ಜೀವನಶೈಲಿ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸರಿಯಾದ ಸಮಯಕ್ಕೆ ಊಟ ಮಾಡದ ಕಾರಣ ಮಕ್ಕಳಿಗೆ ತಲೆನೋವಿನ ಸಮಸ್ಯೆ ಕಾಡಬಹುದು. ಹಾಗಾಗಿ ಮಕ್ಕಳ ಆಹಾರ ಪದ್ಧತಿಯ ಬಗ್ಗೆ ಗಮನವಿರಲಿ.

ಮಾನಸಿಕ ಅಸ್ವಸ್ಥತೆಯ ಲಕ್ಷಣವೂ ಆಗಿರಬಹುದು
ಮಕ್ಕಳ ಮಾನಸಿಕ ಆರೋಗ್ಯ ಚೆನ್ನಾಗಿಲ್ಲದೇ ಹೋದಲ್ಲಿ ತಲೆನೋವಿನ ಸಮಸ್ಯೆ ಕಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸಾಕಷ್ಟು ನಿದ್ರೆ ಪಡೆಯದ ಅಥವಾ ಒತ್ತಡ, ಆಯಾಸ, ಸುಸ್ತು, ದುರ್ಬಲತೆ, ಚಿಂತೆಯಿಂದಲೂ ತಲೆನೋವಿನ ಸಮಸ್ಯೆ ಕಾಡಬಹುದು. ಆದ್ದರಿಂದ ತಲೆನೋವಿನ ಸಮಸ್ಯೆಯನ್ನು ಎಂದಿಗೂ ನಿರ್ಲಕ್ಷ್ಯಿಸದಿರುವುದು ಉತ್ತಮ.

ಕೆಲವು ಸಲಹೆಗಳು
ಮಕ್ಕಳಲ್ಲಿ ತಲೆನೋವಿನ ಸಮಸ್ಯೆ ಕಂಡು ಬರುತ್ತಿದ್ದರೆ ಯಾವುದೇ ಕಾರಣಕ್ಕೂ ತಡಮಾಡದೇ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ. ಮನೆ ಮದ್ದುಗಳು, ಇತರ ಔಷಧಿಗಳನ್ನು ಮನೆಯಲ್ಲಿಯೇ ನೀಡುವುದನ್ನು ತಪ್ಪಿಸಿ ಮೊದಲು ವೈದ್ಯರಲ್ಲಿ ಸಲಹೆ ಪಡೆಯಿರಿ.  ವೈದ್ಯರ ಸಲಹೆಯ ಮೇರೆಗೆ ಆಹಾರ ಪದ್ಧತಿ ಮತ್ತು ಔಷಧಗಳನ್ನು ಅನುಸರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

TV9 Kannada


Leave a Reply

Your email address will not be published. Required fields are marked *