Closing Bell: ಜಾಗತಿಕ ಒತ್ತಡದಿಂದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 433 ಪಾಯಿಂಟ್ಸ್, ನಿಫ್ಟಿ 144 ಪಾಯಿಂಟ್ಸ್ ಕುಸಿತ | Closing Bell Indian Stock Market Index BSE Sensex Down By 433 Points And Nifty By 144 Points


Closing Bell: ಜಾಗತಿಕ ಒತ್ತಡದಿಂದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 433 ಪಾಯಿಂಟ್ಸ್, ನಿಫ್ಟಿ 144 ಪಾಯಿಂಟ್ಸ್ ಕುಸಿತ

ಪ್ರಾತಿನಿಧಿಕ ಚಿತ್ರ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಮೂರನೇ ವಹಿವಾಟು, ನವೆಂಬರ್ 11ನೇ ತಾರೀಕಿನ ಗುರುವಾರದಂದು ಒತ್ತಡಕ್ಕೆ ಸಿಲುಕಿದವು. ದಿನದ ಅಂತ್ಯಕ್ಕೆ ಬಿಎಸ್​ಇ ಸೆನ್ಸೆಕ್ಸ್ 433.33 ಪಾಯಿಂಟ್ಸ್ ಅಥವಾ ಶೇ 0.72ರಷ್ಟು ಇಳಿಕೆಯಾಗಿ 59,919.69ರಲ್ಲಿ ವಹಿವಾಟು ಮುಗಿಸಿತು. ಇನ್ನು ನಿಫ್ಟಿ 143.60 ಪಾಯಿಂಟ್ಸ್ ಅಥವಾ ಶೇ 0.80ರಷ್ಟು ಇಳಿಕೆ ಕಂಡು, 17,873.60 ಪಾಯಿಂಟ್ಸ್​ನಲ್ಲಿ ವ್ಯವಹಾರ ಚುಕ್ತಾ ಮಾಡಿತು. ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಇಂದು ಮಾರುಕಟ್ಟೆಯ ವ್ಯವಹಾರದ ಆರಂಭ ನಕಾರಾತ್ಮಕವಾಗಿ ಶುರುವಾಯಿತು. ಆದರೆ ಸೆನ್ಸೆಕ್ಸ್ 60 ಸಾವಿರ ಪಾಯಿಂಟ್ಸ್​ಗಿಂತ ಕೆಳಗೆ ಮತ್ತು ನಿಫ್ಟಿ 17,900 ಪಾಯಿಂಟ್ಸ್​ಗಿಂತ ಕೆಳಗೆ ವಹಿವಾಟು ಮುಕ್ತಾಯಗೊಳಿಸಿರುವುದು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣ ಆಗಿದೆ. ಜಾಗತಿಕ ಮಟ್ಟದ ಹಣದುಬ್ಬರದ ಒತ್ತಡವು ಅಮೆರಿಕದ ಹಣದುಬ್ಬರದಿಂದ ಪ್ರಭಾವಕ್ಕೆ ಒಳಗಾಗಿದೆ. ಅಂದಹಾಗೆ ಮೂವತ್ತು ವರ್ಷಗಳ ಗರಿಷ್ಠ ಮಟ್ಟವಾದ ಶೇ 6.2ರಷ್ಟನ್ನು ತಲುಪಿದೆ.

ಬಿಎಸ್​ಇ ಮಿಡ್​ಕ್ಯಾಪ್​ ಮತ್ತು ಸ್ಮಾಲ್​ಕ್ಯಾಪ್ ಸೂಚ್ಯಂಕಗಳು ತಲಾ ಶೇ 0.5ರಷ್ಟು ಕುಸಿದವು. ವಲಯವಾರು ಗಮನಿಸಿದಾಗ ನಿಫ್ಟಿ ಬ್ಯಾಂಕ್, ಫಾರ್ಮಾ, ವಾಹನ ಮತ್ತು ಪಿಎಸ್​ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತಗೊಂಡರೆ, ಲೋಹದ ಷೇರುಗಳಲ್ಲಿ ಖರೀದಿ ಕಂಡುಬಂತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟೈಟನ್ ಕಂಪೆನಿ ಶೇ 1.75
ಹಿಂಡಾಲ್ಕೋ ಶೇ 0.93
ಜೆಎಸ್​ಡಬ್ಲ್ಯು ಸ್ಟೀಲ್ ಶೇ 0.75
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 0.55
ರಿಲಯನ್ಸ್ ಶೇ 0.18

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಐಒಸಿ ಶೇ -4.41
ಟೆಕ್ ಮಹೀಂದ್ರಾ ಶೇ -2.85
ಎಸ್​ಬಿಐ ಶೇ -2.82
ಒಎನ್​ಜಿಸಿ ಶೇ -2.66
ಎಸ್​ಬಿಐ ಲೈಫ್ ಇನ್ಷೂರೆನ್ಸ್ ಶೇ -2.58

ಇದನ್ನೂ ಓದಿ: T+1 Settlement Cycle: ಷೇರುಪೇಟೆಯಲ್ಲಿ T+1 ತೀರುವಳಿ ಫೆಬ್ರವರಿ 25ರಿಂದ ಹಂತ ಹಂತವಾಗಿ ಪರಿಚಯ

TV9 Kannada


Leave a Reply

Your email address will not be published.