ಸಾಂದರ್ಭಿಕ ಚಿತ್ರ
ಮಾರಾಟದ ಒತ್ತಡದ ಹಿನ್ನೆಲೆಯಲ್ಲಿ ಭಾರತದ ಷೇರು ಮಾರುಕಟ್ಟೆ (Indian Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜನವರಿ 18ನೇ ತಾರೀಕಿನ ಮಂಗಳವಾರದಂದು ಇಳಿಕೆ ದಾಖಲಿಸಿವೆ. ಸೆನ್ಸೆಕ್ಸ್ (sensex) 554.05 ಪಾಯಿಂಟ್ಸ್ ಅಥವಾ ಶೇ 0.90 ಕುಸಿತ ಕಂಡು, 60,754.86 ಪಾಯಿಂಟ್ಸ್ನೊಂದಿಗೆ ದಿನಾಂತ್ಯದ ವಹಿವಾಟನ್ನು ಮುಗಿಸಿದೆ. ಇನ್ನು ನಿಫ್ಟಿ (nifty) 195.10 ಪಾಯಿಂಟ್ಸ್ ಅಥವಾ ಶೇ 1.07ರಷ್ಟು ನೆಲ ಕಚ್ಚಿ. 18,113 ಪಾಯಿಂಟ್ಸ್ನಲ್ಲಿ ವ್ಯವಹಾರ ಚುಕ್ತಾ ಮಾಡಿದೆ. ಇಂದಿನ ವಹಿವಾಟಿನಲ್ಲಿ 1007 ಕಂಪೆನಿಗಳ ಷೇರು ಗಳಿಕೆಯನ್ನು ಕಂಡರೆ, 2218 ಕಂಪೆನಿಗಳ ಷೇರು ಇಳಿಕೆಯಾಯಿತು. 59 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವ ಬದಲಾವಣೆ ಆಗಲಿಲ್ಲ. ಎಲ್ಲ ವಲಯದ ಷೇರುಗಳು ಸಹ ಕುಸಿತ ದಾಖಲಿಸಿದವು. ವಾಹನ, ಮಾಹಿತಿ ತಂತ್ರಜ್ಞಾನ, ಕ್ಯಾಪಿಟಲ್ ಗೂಡ್ಸ್, ಲೋಹ, ರಿಯಾಲ್ಟಿ, ಫಾರ್ಮಾ ಮತ್ತು ಎಫ್ಎಂಸಿಜಿ ಶೇ 1ರಿಂದ 2ರಷ್ಟು ನಷ್ಟ ಅನುಭವಿಸಿದವು. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಕುಸಿದವು.
ಜಾಗತಿಕ ಮಾರುಕಟ್ಟೆಯಲ್ಲಿ ದುರ್ಬಲತೆ ಕಂಡುಬಂತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತ್ರಿಕಾಗೋಷ್ಠಿ ಇದ್ದುದರಿಂದ ಭಾರೀ ಏರಿಳಿತದ ವಹಿವಾಟು ಇತ್ತು. ತೈಲ ಬೆಲೆಯಲ್ಲಿ ಏರಿಕೆಯಾಯಿತು ಮತ್ತು ವಿದೇಶೀ ಸಾಂಸ್ಥಿಕ ಹೂಡಿಕೆದಾರರು ನಿವ್ವಳ ಮಾರಾಟಗಾರರಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಏರಿಳಿತಕ್ಕೆ ಸಾಕ್ಷಿಯಾಯಿತು. ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಇತ್ತು. ಅಮೆರಿಕದ ಟ್ರೆಷರಿ ಯೀಲ್ಡ್ನಲ್ಲಿನ ಹೆಚ್ಚಳ, ಯುಎಇಯಲ್ಲಿ ನಡೆದ ಡ್ರೋಣ್ ದಾಳಿ ಹಿನ್ನೆಲೆಯಲ್ಲಿ ಪೂರೈಕೆ ಒತ್ತಡ ಸೃಷ್ಟಿಯಾಗಿ, ತೈಲ ಬೆಲೆ ಏರಿಕೆ ಆಗಬಹುದು ಎಂಬ ಆತಂಕ ಎದುರಾಯಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಆಕ್ಸಿಸ್ ಬ್ಯಾಂಕ್ ಶೇ 1.76
ಎಚ್ಡಿಎಫ್ಸಿ ಬ್ಯಾಂಕ್ ಶೇ 0.51
ಐಸಿಐಸಿಐ ಬ್ಯಾಂಕ್ ಶೇ 0.46
ಡಾ.ರೆಡ್ಡೀಸ್ ಲ್ಯಾಬ್ಸ್ ಶೇ 0.45
ಕೊಟಕ್ ಮಹೀಂದ್ರಾ ಬ್ಯಾಂಕ್ ಶೇ 0.24
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -4.40
ಮಾರುತಿ ಸುಜುಕಿ ಶೇ -4.24
ಅಲ್ಟ್ರಾ ಟೆಕ್ ಸಿಮೆಂಟ್ ಶೇ -3.99
ಐಷರ್ ಮೋಟಾರ್ಸ್ ಶೇ -3.80
ಟೆಕ್ ಮಹೀಂದ್ರಾ ಶೇ -3.58