ಬೆಂಗಳೂರು: ಕಾಂಗ್ರೆಸ್​ನಲ್ಲಿ ಮುಂದಿನ ‘ಸಿಎಂ ವಿಚಾರ’ ಮತ್ತೆ ಮತ್ತೆ ಚರ್ಚೆಯಾಗುತ್ತಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ಮುಂದಿನ ಸಿಎಂ ಡಿಕೆಎಸ್​ ಅಂತಿದ್ರೆ, ಸಿದ್ದರಾಮಯ್ಯ ಬೆಂಬಲಿಗರು ಮುಂದಿನ ಸಿಎಂ ಸಿದ್ದರಾಮಯ್ಯ ಅಂತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಡಿರುವ ಮಾತು ಹೊಸ ಚರ್ಚೆಯನ್ನ ಹುಟ್ಟುಹಾಕಿದೆ.

ಜಮೀರ್ ಅಹಮ್ಮದ್ ಪದೇ ಪದೇ ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿಕೆ ನೀಡ್ತಿರೋದಕ್ಕೆ ವಾರ್ನ್​ ಮಾಡಿದ ಡಿಕೆಎಸ್​..ನಾನು ಕೆಪಿಸಿಸಿ ಅಧ್ಯಕ್ಷನಾಗಿ ಇಲ್ಲಿ ಇದ್ದೇನೆ.. ನಮ್ಮ ಡ್ಯೂಟಿ ಚೀಫ್ ಮಿನಿಸ್ಟರ್ ಆಗುವುದಲ್ಲ. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರುವುದೇ ಡ್ಯೂಟಿ..

ಕಾಂಗ್ರೆಸ್ ಸಂಘಟಿತ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಯಾರೇ ಲೀಡರ್​ಗೂ ಆಸೆ ಆಕಾಂಕ್ಷೆಗಳು ಇರಬಹುದು.. ಸಿದ್ದರಾಮಯ್ಯಗೂ ಅಭಿಮಾನ ಇರುತ್ತೆ, ಅಭಿಮಾನಿಗಳು ಇರುತ್ತಾರೆ. ನಾನು, ಮಲ್ಲಿಕಾರ್ಜುನ ಖರ್ಗೆ ಇಲ್ಲವೇ ಪರಮೇಶ್ವರ್ ಇರಬಹುದು.. ಎಲ್ಲರಿಗೂ ಆಸೆ, ‌ಆಕಾಂಕ್ಷೆಗಳು ಇರುತ್ತೆ.. ಯಾರೂ ಹದ್ದು ಮೀರಿ ಹೋಗಬಾರದು ಅಂತ ಈಗಾಗಲೇ ಹೇಳಿದ್ದೇವೆ ಅಂತಾ ಹೇಳಿದ್ದಾರೆ.

ಸಿಎಂ ಆಗಲು ಎಲ್ಲರಿಗೂ ಆಸೆ, ಆಕಾಂಕ್ಷೆಗಳು ಇರುತ್ತದೆ ಅನ್ನೋ ಮೂಲಕ ಡಿಕೆಎಸ್​, ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್​ ಹೆಸರನ್ನ ಎಳೆದು ತಂದಿರೋದು ಹೊಸ ಚರ್ಚೆಯನ್ನ ಹುಟ್ಟುಹಾಕಿದೆ. ಕೆಲ ನಾಯಕರು ಮುಖ್ಯಮಂತ್ರಿ ರೇಸ್​ನಲ್ಲಿ ಸಿದ್ದರಾಮಯ್ಯರನ್ನ ಪದೇ ಪದೇ ಎಳೆದು ತರ್ತಿರೋದಕ್ಕೆ ಕೋಪಿಸಿಕೊಂಡು ಹೀಗೆ ಹೇಳಿದ್ರಾ? ಈ ಮೂಲಕ ಸಿದ್ದರಾಮಯ್ಯಗೆ ಹಾಗೂ ಅವರ ಬೆಂಬಲಿಗರಿಗೆ ಬೇರೆಯದ್ದೇ ಆದ ಸಂದೇಶವನ್ನ ನೀಡಿದ್ದರಾ ಅನ್ನೋ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

The post CM ಆಗಲು ಎಲ್ರಿಗೂ ಆಸೆ ಇದೆ.. ಖರ್ಗೆ, ಪರಮೇಶ್ವರ್​ಗೂ ಇರಬಹುದು -DKS​ ಹೊಸ ಗೇಮ್? appeared first on News First Kannada.

Source: newsfirstlive.com

Source link