ಬೆಂಗಳೂರು: ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಸುದ್ದಿಗೋಷ್ಟಿ ನಡೆಸಿ.. ಇಂದು 10:30ಕ್ಕೆ ಶಿಸ್ತು ಸಮಿತಿ ಸಭೆ ನಡೆಸಿದ್ದೇವೆ. ಇತ್ತೀಚಿಗೆ ಕೆಲ ಶಾಸಕರ ಹೇಳಿಕೆಗಳ ಬಗ್ಗೆ ಚರ್ಚೆಯಾಗಿದೆ. ಮುಂದಿನ ಸಿಎಂ ಯಾರಾಗಬೇಕು ಎಂಬ ಬಗ್ಗೆ ಹೇಳಿಕೆಗಳ ಹಿನ್ನೆಲೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದೇವೆ ಅಂತಾ ಮಾಹಿತಿ ನೀಡಿದರು.

ಶಾಸಕರು ಮುಂದಿನ ಮುಖ್ಯಮಂತ್ರಿ ಹೇಳಿಕೆ ನೀಡಿದ್ದು ಅಶಿಸ್ತು. ಹೀಗಾಗಿ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ನೋಟಿಸ್ ಜಾರಿ ಮಾಡಿದ ನಂತರ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ. ಶಿಸ್ತು ಸಮಿತಿಯ ಸದಸ್ಯರೆಲ್ಲರೂ ಸಹ ಇದಕ್ಕೆ ಸಹಮತ ಸೂಚಿಸಿದ್ದಾರೆ ಎಂದರು.

ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್

ಸಿಎಂ ಮಾಡೋದು ಪಬ್ಲಿಕ್ ಅಲ್ಲ
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪತ್ರಿಕಾ ಹೇಳಿಕೆ ನೀಡಿದ್ದರೂ ಸಹ ಮುಂದಿನ ಸಿಎಂ ಹೇಳಿಕೆ ಮುಂದುವರಿದಿದ್ದನ್ನೂ ಗಮನಿಸಿದ್ದೇವೆ. ಮುಂದಿನ ಒಂದೆರಡು ವಾರಗಳಲ್ಲಿ ಮತ್ತೆ ಸಭೆ ಸೇರಿ ಹೇಳಿಕೆಗಳನ್ನ ಪರಿಶೀಲನೆ ಮಾಡ್ತೀವಿ. ಇಂದು ನಡೆದದ್ದು ವರ್ಚುವಲ್ ಮೀಟಿಂಗ್ ಆದ್ದರಿಂದ ಮುಂದಿನ ವಾರ ಮತ್ತೆ ಸಭೆ ಸೇರಲು ತೀರ್ಮಾನ ಮಾಡಲಾಗಿದೆ ಎಂದರು.

ಸಿಎಂ ಮಾಡೋದು ಪಬ್ಲಿಕ್ ಅಲ್ಲ, ಪಬ್ಲಿಕ್ ವೋಟ್ ಕೊಡೋದು ಪಾರ್ಟಿಗೆ. ಪಾರ್ಟಿ ಸಿಎಂನ ತೀರ್ಮಾನ ಮಾಡುತ್ತೆ. ಯಾರು ಮುಂದಿನ ಸಿಎಂ ಅಂತ ಹೇಳೋ ಅಧಿಕಾರ ನಿಮಗೆ ಇಲ್ಲ. ಪಕ್ಷದ ವಿಚಾರದಲ್ಲಿ ಪಕ್ಷದ ಸದಸ್ಯರು, ಶಾಸಕರು ಪಕ್ಷದ ಸಂವಿಧಾನ ಪಾಲಿಸಬೇಕು. ರಾಜ್ಯದ ಪ್ರಮುಖ ನಾಯಕರು ಒಗ್ಗಟ್ಟಾಗಿದ್ದರೆ ಅಧಿಕಾರಕ್ಕೆ ಬರಲು ಸಾಧ್ಯ ಎಂದರು.

The post CM ಮಾಡೋದು ಪಬ್ಲಿಕ್​ ಅಲ್ಲ; ಅಶಿಸ್ತಿನಿಂದ ಹೇಳಿಕೆ ನೀಡಿದವ್ರ ವಿರುದ್ಧ ಕ್ರಮ -ಕಾಂಗ್ರೆಸ್ ಶಿಸ್ತು ಸಮಿತಿ appeared first on News First Kannada.

Source: newsfirstlive.com

Source link