Constipation: ನೀವು ಮಲಬದ್ಧತೆಯಿಂದ ಬಳಲುತ್ತಿದ್ದೀರಾ? ಈ ಪದಾರ್ಥಗಳ ಸೇವನೆ ಬಿಟ್ಟುಬಿಡಿ | Constipation Problem : Foods to Eat, Foods to Avoid


Constipation:ಮಲಬದ್ಧತೆ(Constipation) ಎಂಬುದು ಕ್ರಮೇಣವಾಗಿ ಮೂಲವ್ಯಾಧಿಗೂ ಕಾರಣವಾಗುತ್ತದೆ. ಸಿಕ್ಕ ಸಿಕ್ಕ ಆಹಾರವನ್ನು ಸೇವಿಸುವುದು, ಒತ್ತಡದ ಜೀವನಶೈಲಿಯು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ.

ಮಲಬದ್ಧತೆ(Constipation) ಎಂಬುದು ಕ್ರಮೇಣವಾಗಿ ಮೂಲವ್ಯಾಧಿಗೂ ಕಾರಣವಾಗುತ್ತದೆ. ಸಿಕ್ಕ ಸಿಕ್ಕ ಆಹಾರವನ್ನು ಸೇವಿಸುವುದು, ಒತ್ತಡದ ಜೀವನಶೈಲಿಯು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ. ಇದರಿಂದ ಮೊಡವೆ , ಗ್ಯಾಸ್ , ಯಕೃತ್ತಿನ ಸಮಸ್ಯೆ ಎದುರಾಗುತ್ತದೆ. ಮಲಬದ್ಧತೆಯ ನಿವಾರಣೆಗೆ ಅನೇಕ ಜನರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ಮನೆಮದ್ದುಗಳನ್ನು ಬಳಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.

ಹೊಟ್ಟೆ ಸರಿಯಾಗಿ ಸ್ವಚ್ಛ ವಾಗಿಲ್ಲ ಎಂದಾದರೆ, ಆಗ ಅದನ್ನು ಮಲಬದ್ಧತೆಯ ಸಮಸ್ಯೆ ಎಂದು ಕರೆಯಲಾಗುತ್ತದೆ. ಹೊಟ್ಟೆ ಕ್ಲೀನ್ ಆಗಿಲ್ಲ ಎಂದಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಇಂದಿನ ಕಾಲದಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಮಲಬದ್ಧತೆಯಿಂದಾಗಿ, ಹೊಟ್ಟೆ ನೋವು, ತಲೆನೋವು, ಹಸಿವು ಕಡಿಮೆಯಾಗುವುದು, ವಾಕರಿಕೆ ಮುಂತಾದ ಸಮಸ್ಯೆಗಳು ಉಂಟುಮಾಡುತ್ತದೆ.

ಈ ಪದಾರ್ಥಗಳ ಬಳಕೆ ಬೇಡ
ಜೀರಿಗೆ: ಜೀರಿಗೆ ಒಂದು ರೀತಿಯ ಮಸಾಲೆ. ಇದು ಆಹಾರದಲ್ಲಿನ ರುಚಿಯನ್ನು ಹೆಚ್ಚಿಸುವುಡು ಮಾತ್ರವಲ್ಲ, ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ. ಆದರೆ ಮಲಬದ್ಧತೆ ಇರುವವರು ಜೀರಿಗೆಯನ್ನು ಬಳಸಬೇಡಿ ಎಂದು ಆಯುರ್ವೇದ ಸಲಹೆ ನೀಡುತ್ತದೆ.

ಕಾಫಿ: ಮಲಬದ್ಧತೆ ಸಮಸ್ಯೆ ಇರುವ ಜನರು ಕಾಫಿ ಸೇವಿಸಬಾರದು ಎಂದು ಆಯುರ್ವೇದ ಹೇಳುತ್ತದೆ, ಕಾಫಿ ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತದೆ. ಕಾಫಿಯಿಂದ ಡಿಹೈಡ್ರೇಷನ್ ಸಮಸ್ಯೆ ಉಂಟಾಗುತ್ತದೆ. ದಿನ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾವನ್ನು ಕುಡಿಯುವುದನ್ನು ತಪ್ಪಿಸಿ ಎಂದು ವೈದ್ಯರು ಹೇಳುತ್ತಾರೆ.

ಮೊಸರು: ಮೊಸರು ಬಹುಬೇಗ ಜೀರ್ಣವಾಗುವುದಿಲ್ಲ, ಮೊಸಲು ನಾಲಿಗೆ ರುಚಿಯನ್ನು ಹೆಚ್ಚಿಸುತ್ತೆ, ಉಷ್ಣ, ವಾತದ ಸಮತೋಲನವನ್ನು ಕಾಪಾಡುತ್ತೆ, ಆದರೆ ಮಲಬದ್ಧತೆ ಇರುವವರು ಮಾತ್ರ ಮೊಸರನ್ನು ಹೆಚ್ಚು ಸೇವಿಸಬೇಡಿ.

ಯಾವುದು ಆರೋಗ್ಯಕ್ಕೆ ಒಳ್ಳೆಯದು
ಹಸಿ ಈರುಳ್ಳಿ : ಹಸಿ ಈರುಳ್ಳಿಯಲ್ಲಿ ಫೈಬರ್ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ, ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈರುಳ್ಳಿ ಸೇವನೆಯು ಮಲಬದ್ಧತೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ .

ನಿಂಬೆ: ನಿಂಬೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಂಬೆ ರಸವು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ದೇಹದಲ್ಲಿರುವ ವಿಷಕಾರಿ ಕಣಗಳನ್ನು ತೆಗೆದುಹಾಕುತ್ತದೆ. ತಾಜಾ ನಿಂಬೆ ಪಾನಕ ಅಥವಾ ನಿಂಬೆ ಚಹಾವನ್ನು ಬೆಳಿಗ್ಗೆ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.

ಹೆಚ್ಚು ನೀರು ಕುಡಿಯಿರಿ
ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾದರೆ ಕೇವಲ ಮಲಬದ್ಧತೆ ಮಾತ್ರವಲ್ಲದೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ನೀರಿನ ಅಂಶ ಕಡಿಮೆ ಆದಾಗ ಎದುರಾಗುವ ಮಲಬದ್ಧತೆ ಸಮಸ್ಯೆ ಕೂಡ ಸಾಕಷ್ಟು ತೊಂದರೆ ಕೊಡುತ್ತದೆ.

ನಿಮಗೆ ಮಲಬದ್ಧತೆ ಸಮಸ್ಯೆ ತುಂಬಾ ದೀರ್ಘ ಕಾಲದಿಂದ ಕಾಡುತ್ತಿದ್ದರೆ, ನೀವು ಬೆಳಗಿನ ಸಮಯದಲ್ಲಿ ನಿಮ್ಮ ಖಾಲಿ ಹೊಟ್ಟೆಯಲ್ಲಿ ಪ್ರತಿ ದಿನವೂ ಕನಿಷ್ಠ ಎರಡು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ದಿನದಲ್ಲಿ ಆಗಾಗ ಸುಮಾರು ಎರಡು – ಮೂರು ಲೀಟರ್ ನೀರು ಕುಡಿಯುತ್ತಿರಿ.

ಕರುಳಿನ ಭಾಗದಲ್ಲಿ ಮಲ ಹೆಚ್ಚು ಗಟ್ಟಿಯಾಗಿ ಹೊರಬರಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಹೆಚ್ಚಿಗೆ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ನಿಮಗೆ ಸಾಧ್ಯ ಆದರೆ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಪ್ರತಿಬಾರಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಕೊಬ್ಬರಿ ಎಣ್ಣೆ ಬಳಕೆ ಮಾಡಿ
ಕೋಕನಟ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಮೀಡಿಯಂ ಚೈನ್ ಫ್ಯಾಟಿ ಆಸಿಡ್ ಅಂಶಗಳು ಸಾಕಷ್ಟಿವೆ. ಇವು ನಿಮ್ಮ ಕರುಳಿನ ಭಾಗದಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಕರುಳಿನ ಚಲನೆಯನ್ನು ಸರಾಗಗೊಳಿಸಿ, ಕರುಳಿನಲ್ಲಿ ಮಲ ಸರಳವಾಗಿ ಚಲಿಸುವಂತೆ ಮಾಡುತ್ತವೆ. ಇದರಿಂದ ಮಲಬದ್ಧತೆ ಸಮಸ್ಯೆ ಬಗೆಹರಿಯುತ್ತದೆ.

ದೇಹದಿಂದ ಅತಿಯಾದ ವಿಷಕಾರಿ ತ್ಯಾಜ್ಯವನ್ನು ತೆಗೆದು ಹಾಕುವಲ್ಲಿ ಸಹ ತೆಂಗಿನ ಎಣ್ಣೆಯ ಪಾತ್ರವನ್ನು ಮರೆಯುವಂತಿಲ್ಲ. ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ರತಿ ದಿನ 1 ಅಥವಾ 2 ಟೀ ಚಮಚ ತೆಂಗಿನ ಎಣ್ಣೆಯನ್ನು ಸೇವಿಸುವ ಅಭ್ಯಾಸ ಇಟ್ಟುಕೊಳ್ಳುವುದು ಒಳ್ಳೆಯದು.

ಶುಂಠಿ ಬಳಕೆ ಮಾಡಿ
ನೀವು ಮನೆಯಲ್ಲಿ ತಯಾರು ಮಾಡುವ ಬಹುತೇಕ ಅಡುಗೆಗಳಲ್ಲಿ ಶುಂಠಿಯನ್ನು ಬಳಕೆ ಮಾಡುತ್ತೀರಿ.ಈ ಮಸಾಲೆ ಪದಾರ್ಥದಲ್ಲಿ ಅತಿ ಹೆಚ್ಚಿನ ಆರೋಗ್ಯ ಪ್ರಯೋಜನಗಳು ಸಿಗುವ ಕಾರಣ ಮತ್ತು ನೈಸರ್ಗಿಕವಾದ ಕೆಲವೊಂದು ವಿಶೇಷ ಬಗೆಯ ಗುಣಲಕ್ಷಣಗಳಿಂದ ಕರುಳಿನ ಚಲನೆ ಉತ್ತಮವಾಗಿ

ನಡೆಯುವ ಮೂಲಕ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ನಿಮಗೆ ಬೇಕಾದರೆ ಶುಂಠಿಯನ್ನು ಹಾಗೆ ಹಸಿಯಾಗಿ ಸ್ವಲ್ಪ ಸ್ವಲ್ಪವೇ ಜಿಗಿದು ತಿನ್ನಬಹುದು ಅಥವಾ ವಿಪರೀತ ಖಾರ ಎನಿಸಿದ ಪಕ್ಷದಲ್ಲಿ ಶುಂಠಿ ಚಹಾ ತಯಾರು ಮಾಡಿ ಸೇವನೆ ಮಾಡಬಹುದು.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *