Corbevax Vaccine: ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ ಕಾರ್ಬ್​ವ್ಯಾಕ್ಸ್​ ಲಭ್ಯ; ಬೆಲೆ, ವಿಶೇಷತೆಗಳು ಹೀಗಿವೆ | Corbevax likely to be available at vaccination centres from today know price features


ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್​ನ ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆದು 6 ತಿಂಗಳ ನಂತರ ಹೆಟೆರೊಲಾಜಸ್ ಕೊವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬ್​​ವ್ಯಾಕ್ಸ್ ಅನ್ನು ಅನುಮೋದಿಸಲಾಗಿದೆ.

Corbevax Vaccine: ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ ಕಾರ್ಬ್​ವ್ಯಾಕ್ಸ್​ ಲಭ್ಯ; ಬೆಲೆ, ವಿಶೇಷತೆಗಳು ಹೀಗಿವೆ

ಕಾರ್ಬ್​ವ್ಯಾಕ್ಸ್​ ಲಸಿಕೆ

ನವದೆಹಲಿ: ಇತ್ತೀಚೆಗೆ ಅನುಮೋದಿಸಲಾದ ಬಯೋಲಾಜಿಕಲ್ ಇ ಲಿಮಿಟೆಡ್ (ಬಿಇ)ನ ಕೊವಿಡ್ ಲಸಿಕೆಯಾದ ಕಾರ್ಬ್​​ವ್ಯಾಕ್ಸ್ ಸಾರ್ವಜನಿಕ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಇಂದಿನಿಂದ (ಆಗಸ್ಟ್ 12) ಲಭ್ಯವಾಗಲಿದೆ. ಈ ಕಾರ್ಬ್​ವ್ಯಾಕ್ಸ್​ ಬೂಸ್ಟರ್​ ಡೋಸ್​ COWIN ಆ್ಯಪ್​ನಲ್ಲಿ ಲಭ್ಯವಿರಲಿದೆ. ಕೋವ್ಯಾಕ್ಸಿನ್ (Covaxin) ಅಥವಾ ಕೋವಿಶೀಲ್ಡ್​ನ (Covishield) ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆದು 6 ತಿಂಗಳ ನಂತರ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಾದವರಿಗೆ ಹೆಟೆರೊಲಾಜಸ್ ಕೊವಿಡ್-19 ಬೂಸ್ಟರ್ ಡೋಸ್ ಆಗಿ ಕಾರ್ಬ್​​ವ್ಯಾಕ್ಸ್ (Corbevax) ಅನ್ನು ಅನುಮೋದಿಸಲಾಗಿದೆ.

ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಕೊವಿಡ್-19 ವರ್ಕಿಂಗ್ ಗ್ರೂಪ್ ಇತ್ತೀಚೆಗೆ ಮಾಡಿದ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಬ್​ವ್ಯಾಕ್ಸ್ ಅನ್ನು ತುರ್ತು ಬಳಕೆಗಾಗಿ ಅನುಮೋದಿಸಿದೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಜೂನ್ 4ರಂದು 18 ವರ್ಷ ವಯಸ್ಸಿನ ವ್ಯಕ್ತಿಗಳಿಗೆ COVID-19 ಬೂಸ್ಟರ್ ಡೋಸ್ ಆಗಿ ತುರ್ತು ಬಳಕೆಗಾಗಿ ಲಸಿಕೆಯನ್ನು ಅನುಮೋದಿಸಿದ ನಂತರ ಈ ಅನುಮೋದನೆಯನ್ನು ನೀಡಲಾಗಿದೆ.

TV9 Kannada


Leave a Reply

Your email address will not be published. Required fields are marked *