Coronavirus: ರಾಜ್ಯದಲ್ಲಿ ಹೊಸದಾಗಿ 648 ಜನರಲ್ಲಿ ಸೋಂಕು ಪತ್ತೆ, ಮಹಾರಾಷ್ಟ್ರ ಗಡಿಯಲ್ಲಿ 4 ಸಾವಿರದ ಗಡಿ ದಾಟಿದ ಕೊರೊನಾ | Coronavirus Updates more than 648 tested positive in Karnataka and 4,024 in maharashtra


Coronavirus: ರಾಜ್ಯದಲ್ಲಿ ಹೊಸದಾಗಿ 648 ಜನರಲ್ಲಿ ಸೋಂಕು ಪತ್ತೆ, ಮಹಾರಾಷ್ಟ್ರ ಗಡಿಯಲ್ಲಿ 4 ಸಾವಿರದ ಗಡಿ ದಾಟಿದ ಕೊರೊನಾ

ಸಾಂಕೇತಿಕ ಚಿತ್ರ

ಬೆಂಗಳೂರಲ್ಲಿ ಇಂದು ಹೊಸದಾಗಿ 615 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರು: 4 ತಿಂಗಳಿನಿಂದ ಮಾಯವಾಗಿದ್ದ ಕೊರೊನಾ(Coronavirus) ಈಗ ಮತ್ತೆ ತನ್ನ ಆಟ ಶುರುಮಾಡಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದ್ದು ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಕೇಕೆ ಹಾಕ್ತಿದೆ. ನಿನ್ನೆ ಬೆಂಗಳೂರಿನ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಸ್ಫೋಟಗೊಂಡಿತ್ತು. ಇಂದು ರಾಜ್ಯದಲ್ಲಿ ಹೊಸದಾಗಿ 648 ಜನರಲ್ಲಿ ಸೋಂಕು ದೃಢಪಟ್ಟಿದೆ.

ಬೆಂಗಳೂರಲ್ಲಿ ಇಂದು ಹೊಸದಾಗಿ 615 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 3,997 ಇದೆ. ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 2.76ರಷ್ಟಿದೆ.

TV9 Kannada


Leave a Reply

Your email address will not be published.