Coronavirus: ಸಿಎಂ ಬಸವರಾಜ ಬೊಮ್ಮಾಯಿ ಒಎಸ್​ಡಿಗೆ ಕೊರೊನಾ ಪಾಸಿಟಿವ್, ಗೃಹ ಕಚೇರಿ ಕೃಷ್ಣಾದಲ್ಲಿ ಸ್ಯಾನಿಟೈಸೇಶನ್ | CM Basavaraj Bommai OSD tested Positive for coronavirus bengaluru

Coronavirus: ಸಿಎಂ ಬಸವರಾಜ ಬೊಮ್ಮಾಯಿ ಒಎಸ್​ಡಿಗೆ ಕೊರೊನಾ ಪಾಸಿಟಿವ್, ಗೃಹ ಕಚೇರಿ ಕೃಷ್ಣಾದಲ್ಲಿ ಸ್ಯಾನಿಟೈಸೇಶನ್

ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆನ್ನು ಬಿಡದ ಬೇತಾಳದಂತೆ ತನ್ನ ರಕ್ಕಸ ರೂಪ ತೋರಿಸಿದ್ದ ಮಹಾಮಾರಿ ಕೊರೊನಾ ಸದ್ಯ ಎರಡನೇ ಅಲೆ ಬಳಿಕ ಕೊಂಚ ತಣ್ಣಗಾಗಿದೆ. ಆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ಸಾವುಗಳು, ಕೊರೊನಾ ಕೇಸ್​ಗಳು ಕಂಡುಬರುತ್ತಿವೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಎಸ್​ಡಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಎಸ್​ಡಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಿಎಂ ಗೃಹಕಚೇರಿ ಕೃಷ್ಣಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಧಿಕಾರಿಗೆ ಸೋಂಕು ತಗುಲಿದೆ. ಸಿಎಂ ಒಎಸ್ಡಿ ಸೇರಿ ಕೆಲ ಸಿಬ್ಬಂದಿಗೂ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿದ್ದ ಸಭೆ ಸರ್ಕಾರಿ ನಿವಾಸಕ್ಕೆ ಶಿಫ್ಟ್ ಮಾಡಲಾಗಿದೆ. ಹಾಗೂ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಆಗುತ್ತಿರುವ ಮಳೆಯಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ಕಳೆದ ಎರಡು ದಿನಗಳಿಂದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜನ ಸಾಮಾನ್ಯರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ನಿನ್ನೆ ಕೋಲಾರಕ್ಕೆ ಭೇಟಿ ನೀಡಿ ತೋಟ, ಗದ್ದೆ ಸೇರಿದಂತೆ ಮಳೆಗೆ ಹಾನಿಯಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ಇಂದು ಬೆಂಗಳೂರಿನ ಯಲಹಂಕ ಸುತ್ತಾಮುತ್ತಾ ಪರಿಶೀಲನೆ ನಡೆಸಿದ್ದಾರೆ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌, ಜವಾಹರ್‌ಲಾಲ್‌ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗೂ ಪರಿಹಾರ ಸಂಬಂಧ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಚರಂಡಿಗಳಲ್ಲಿ ನೀರು ಹರಿಯದ ಬಗ್ಗೆ 2 ತಿಂಗಳ ಹಿಂದೆಯೇ ಮಾಹಿತಿಯಿತ್ತು: ನೆಹರು ಕ್ಯಾಂಪಸ್ ಬಳಿ ಸಿಎಂ ಬೊಮ್ಮಾಯಿ ಹೇಳಿಕೆ

TV9 Kannada

Leave a comment

Your email address will not be published. Required fields are marked *