Coronavirus 4th Wave: ಭಾರತದಲ್ಲಿ 2927 ಜನರಿಗೆ ಕೊರೊನಾ ಸೋಂಕು, 32 ಮಂದಿ ಸಾವು | Coronavirus India Numbers 2927 fresh Covid 19 cases Karnataka Increases Testing


Coronavirus 4th Wave: ಭಾರತದಲ್ಲಿ 2927 ಜನರಿಗೆ ಕೊರೊನಾ ಸೋಂಕು, 32 ಮಂದಿ ಸಾವು

ಕೊವಿಡ್-19

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,927 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು 32 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪ್ರಸ್ತುತ 16,279 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಸೋಂಕಿತರ ಒಟ್ಟು ಸಂಖ್ಯೆ 4,30,65,496ಕ್ಕೆ ಮುಟ್ಟಿದೆ. ದೇಶದಲ್ಲಿ ಈವರೆಗೆ ಕೊವಿಡ್​ನಿಂದಾಗಿ ಒಟ್ಟು 5,23,654 ಜನರು ಸಾವನ್ನಪ್ಪಿದ್ದಾರೆ. 2,252 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಿನ್ನೆ ದೇಶದಲ್ಲಿ 2,483 ಮಂದಿಯಲ್ಲಿ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈವರೆಗೆ ಒಟ್ಟು 4,25,25,563 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣವು ಶೇ 98.75 ಇದೆ.

ದೇಶದಲ್ಲಿ ಪಾಸಿಟಿವಿಟಿ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳವಾರದ ಪಾಸಿಟಿವಿಟಿ ಪ್ರಮಾಣ ಶೇ 0.55 ಇದ್ದರೆ, ಬುಧವಾರ ಶೇ 0.58 ಇತ್ತು. ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ 0.59 ಇದೆ. ಕಳೆದ 24 ಗಂಟೆಗಳಲ್ಲಿ 5,05,565 ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಈವರೆಗೆ 83.59 ಮಾದರಿಗಳನ್ನು ಸೋಂಕಿಗಾಗಿ ಪರೀಕ್ಷಿಸಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 188,19,40,971 (188 ಕೋಟಿ) ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಭಾರತದಲ್ಲಿ ಕೊವಿಡ್ 19 ಪ್ರಕರಣಗಳ ಸಂಖ್ಯೆ ಆಗಸ್ಟ್ 7, 2020ರಂದು 20 ಲಕ್ಷದ ಗಡಿದಾಟಿತ್ತು. ಸೆಪ್ಟೆಂಬರ್ 16ಕ್ಕೆ 50 ಲಕ್ಷಕ್ಕೂ ಹೆಚ್ಚು ಬಂದಿ ಸೋಂಕಿಗೆ ಒಳಗಾಗಿದ್ದರು. ಡಿಸೆಂಬರ್ 19, 2020ರ ಹೊತ್ತಿಗೆ ದೇಶದಲ್ಲಿ ಸೋಂಕಿತರ ಶಂಖ್ಯೆ 1 ಕೋಟಿ ದಾಟಿತ್ತು. 2021ರ ಮೇ 4ರಲ್ಲಿ 2 ಕೋಟಿ, ಜೂನ್ 23ರಂದು ಮೂರು ಕೋಟಿ ಸೋಂಕುಗಳು ವರದಿಯಾಗಿದ್ದವು.

ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧೆಡೆ ವರದಿಯಾಗಿರುವ 32 ಸಾವುಗಳ ಪೈಕಿ 26 ಮಂದಿ ಕೇರಳದಿಂದ, ನಾಲ್ವರು ಮಹಾರಾಷ್ಟ್ರ ಮತ್ತು ದೆಹಲಿ ಹಾಗೂ ಮಿಝೊರಾಂಗಳ ತಲಾ ಒಬ್ಬರು ಸೇರಿದ್ದಾರೆ. ದೇಶದಲ್ಲಿ ಈವರೆಗೆ 5,23,654 ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ 1,47,838, ಕೇರಳದಲ್ಲಿ 68,916, ಕರ್ನಾಟಕದಲ್ಲಿ 40,057, ತಮಿಳುನಾಡಿನಲ್ಲಿ 38,025, ದೆಹಲಿಯಲ್ಲಿ 26,169, ಉತ್ತರ ಪ್ರದೇಶದಲ್ಲಿ 23,505 ಮತ್ತು ಪಶ್ಚಿಮ ಬಂಗಾಳದಲ್ಲಿ 21,201 ಮಂದಿ ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ 7171 ಮಾದರಿಗಳ ಪರೀಕ್ಷೆ

ಕರ್ನಾಟದಲ್ಲಿ ಮಂಗಳವಾರ 85 ಮಂದಿಯಲ್ಲಿ ಕೊವಿಡ್ ದೃಢಪಟ್ಟಿದ್ದು, 70 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 1,686 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 1.18 ಇದೆ. ಮಂಗಳವಾರ ಒಂದೇ ದಿನ 7,171 ಮಾದರಿಗಳನ್ನು ಪರೀಕ್ಷಿಸಲಾಗಿದೆ.

TV9 Kannada


Leave a Reply

Your email address will not be published. Required fields are marked *