ಪ್ರಾತಿನಿಧಿಕ ಚಿತ್ರ
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3.47 ಲಕ್ಷಕ್ಕೂ ಹೆಚ್ಚು ಹೊಸ ಕೊರೊನಾವೈರಸ್ ಪ್ರಕರಣಗಳು (3,47,254) ವರದಿಯಾಗಿದೆ. 2.51 ಲಕ್ಷ ಹೊಸ (2,51,777) ಚೇತರಿಕೆಗಳೊಂದಿಗೆ, ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 20,18,825 ಆಗಿದೆ. ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 9,692 ಕ್ಕೆ ಏರಿದೆ, ಇದು ನಿನ್ನೆಯಿಂದ ಶೇಕಡಾ 4.36 ರಷ್ಟು ಹೆಚ್ಚಳವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 703 ಸಾವು ದಾಖಲಾಗಿದೆ. ಒಮಿಕ್ರಾನ್ ಉಲ್ಬಣ ಮುಂದುವರಿದಿದ್ದು ಇದು ಸಕ್ರಿಯ ಪ್ರಕರಣಗಳ ಏರಿಕೆಗೆ ಕಾರಣವಾಗಿದೆ. ಡೇಟಾ ಪ್ರಕಾರ, ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಇದು 5.23 ಪ್ರತಿಶತವನ್ನು ಒಳಗೊಂಡಿವೆ. ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ ಒಟ್ಟಾರೆ ಕೊವಿಡ್ ಪ್ರಕರಣಗಳ ಸಂಖ್ಯೆ ಈಗ 3,85,66,027 ಆಗಿದೆ. ಸಂಬಂಧಿತ ಸಾವಿನ ಸಂಖ್ಯೆ 4,88,396 ಆಗಿದೆ.
(ಹೆಚ್ಚಿನ ಮಾಹಿತಿ ಅಪ್ಡೇಟ್ ಆಗಲಿದೆ)