Coronavirus cases in India: ದೇಶದಲ್ಲಿ 22,431 ಹೊಸ ಕೊವಿಡ್ ಪ್ರಕರಣ ಪತ್ತೆ, 318 ಮಂದಿ ಸಾವು | India reports 22,431 new COVID 19 cases in the last 24 hours Active cases declines

Coronavirus cases in India: ದೇಶದಲ್ಲಿ 22,431 ಹೊಸ ಕೊವಿಡ್ ಪ್ರಕರಣ ಪತ್ತೆ, 318 ಮಂದಿ ಸಾವು

ಪ್ರಾತಿನಿಧಿಕ ಚಿತ್ರ

ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 22,431 ಹೊಸ ಕೊವಿಡ್ -19 (Covid-19) ಪ್ರಕರಣ ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಸುಮಾರು 318 ಸಾವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಹೊಸ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದ ಕೊವಿಡ್ ಪ್ರಕರಣಗಳ ಸಂಖ್ಯೆ 3,38,94,312 ಕ್ಕೆ ತಲುಪಿದೆ, ಸಾವಿನ ಸಂಖ್ಯೆ 4,49,856 ಕ್ಕೆ ಏರಿದೆ. ಹೊಸ ಕೊರೊನಾವೈರಸ್ ಸೋಂಕಿನ ದೈನಂದಿನ ಏರಿಕೆ 13 ನೇ ದಿನಕ್ಕೆ 30,000 ಕ್ಕಿಂತ ಕಡಿಮೆಯಿದೆ. ಸಕ್ರಿಯ ಪ್ರಕರಣಗಳು 2,44,198 ಆಗಿದ್ದು ಒಟ್ಟು ಚೇತರಿಕೆ ಸಂಖ್ಯೆ 3,32,00,258ಕ್ಕೆ ತಲುಪಿದೆ. ಈವರೆಗೆ 92,63,68,608 ಮಂದಿಗೆ ಲಸಿಕೆ ನೀಡಲಾಗಿದೆ.

ಥಾಣೆಯಲ್ಲಿ 239 ಹೊಸ ಕೊವಿಡ್ -19 ಪ್ರಕರಣ, 3 ಸಾವು
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ 239 ಹೊಸ ಕೊರೊನಾವೈರಸ್ ಪ್ರಕರಣಗಳ ಸೇರ್ಪಡೆಯೊಂದಿಗೆ ಸೋಂಕಿತರ ಸಂಖ್ಯೆ 5,60,861 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಈ ಹೊಸ ಪ್ರಕರಣಗಳು ಬುಧವಾರ ವರದಿಯಾಗಿವೆ ಎಂದು ಅವರು ಹೇಳಿದರು. ಮೂರು ಜನರು ಕೊವಿಡ್ ರೋಗಕ್ಕೆ ಬಲಿಯಾದರು, ಇದು ಜಿಲ್ಲೆಯಲ್ಲಿ ಸಾವಿನ ಸಂಖ್ಯೆಯನ್ನು 11,427 ಕ್ಕೆ ಏರಿಸಿದೆ ಅವರು ಹೇಳಿದರು, ಥಾಣೆಯಲ್ಲಿ ಕೊವಿಜ್ ಸಾವಿನ ಪ್ರಮಾಣವು 2.03 ಶೇಕಡಾವಾಗಿದೆ. ನೆರೆಯ ಪಾಲ್ಘರ್ ಜಿಲ್ಲೆಯಲ್ಲಿ, ಕೊವಿಡ್ -19 ಪ್ರಕರಣಗಳ ಸಂಖ್ಯೆ 1,36,952 ಕ್ಕೆ ಏರಿಕೆಯಾಗಿದೆ, ಸಾವಿನ ಸಂಖ್ಯೆ 3,277 ಆಗಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ 800 ಕೊವಿಡ್ -19 ಪ್ರಕರಣ, 9 ಸಾವುಗಳು
ಆಂಧ್ರಪ್ರದೇಶದಲ್ಲಿ 800 ಹೊಸ ಕೊವಿಡ್ -19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸಂಖ್ಯೆ 20.54 ಲಕ್ಷಕ್ಕೆ ತಲುಪಿದೆ ಅದೇ ವೇಳೆ 9 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 14,228 ಕ್ಕೆ ಏರಿಕೆಯಾಗಿದೆ .
ಪೂರ್ವ ಗೋದಾವರಿ ಜಿಲ್ಲೆಯಲ್ಲಿ 126 ಪ್ರಕರಣಗಳು ದಾಖಲಾಗಿದ್ದು,ಚಿತ್ತೂರು (120) ಪ್ರಕರಣ ದಾಖಲಾಗಿದೆ. ಸಕ್ರಿಯ ಪ್ರಕರಣಗಳು 8,754 ರಷ್ಟಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 20,54,663. 1,178 ಜನರು ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆಗಳು 20,31,681 ಆಗಿದೆ.

ಕೇರಳದಲ್ಲಿ 12,616 ಹೊಸ ಕೊವಿಡ್ -19 ಪ್ರಕರಣ
ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ ಬುಧವಾರ ಗಣನೀಯವಾಗಿ ಕುಸಿದಿದ್ದು,ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,22,407 ಆಗಿದೆ, 14,516 ವ್ಯಕ್ತಿಗಳು ರೋಗದಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 98,782 ಮಾದರಿಗಳನ್ನು ಪರೀಕ್ಷಿಸಿದಾಗ ರಾಜ್ಯವು 12,616 ಹೊಸ ಕೊವಿಡ್ -19 ಪ್ರಕರಣಗಳನ್ನು ದಾಖಲಿಸಿದೆ. ಆರೋಗ್ಯ ಇಲಾಖೆಯ ಪ್ರಕಾರ, ಕೋವಿಡ್ ಮೊದಲ ಸಾಲಿನ/ಎರಡನೇ ಸಾಲಿನ ಚಿಕಿತ್ಸಾ ಕೇಂದ್ರಗಳಂತಹ ಆಸ್ಪತ್ರೆಗಳು ಅಥವಾ ಇತರ ಆಸ್ಪತ್ರೆಗಳಲ್ಲಿ ಕೇವಲ ಶೇ 11ಸಕ್ರಿಯ ಪ್ರಕರಣಗಳು ದಾಖಲಾಗುತ್ತವೆ.ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 134 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 25, 811ಕ್ಕೆ ತಲುಪಿದೆ.

ಇದನ್ನೂ ಓದಿ: Covid 19 Karnataka Update: ಕರ್ನಾಟಕದಲ್ಲಿ 523 ಮಂದಿಗೆ ಕೊವಿಡ್, 9 ಸಾವು

ಇದನ್ನೂ ಓದಿ: ನರೇಂದ್ರ ಮೋದಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟು 20ವರ್ಷ; ಇಂದು ಬಿಜೆಪಿಯಿಂದ ರಾಷ್ಟ್ರಾದ್ಯಂತ ಸೇವಾ ಕಾರ್ಯ

 

TV9 Kannada

Leave a comment

Your email address will not be published. Required fields are marked *