Covid 19 Karantaka Update: ಕರ್ನಾಟಕದಲ್ಲಿ 328 ಮಂದಿಗೆ ಕೊರೊನಾ ಸೋಂಕು, 9 ಮಂದಿ ಸಾವು | Coronavirus Covid 19 Karnataka Update 328 Infected 9 dead on November 10


Covid 19 Karantaka Update: ಕರ್ನಾಟಕದಲ್ಲಿ 328 ಮಂದಿಗೆ ಕೊರೊನಾ ಸೋಂಕು, 9 ಮಂದಿ ಸಾವು

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಟ್ಟು 328 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ 0.27 ಇದ್ದು, ಸಾವಿನ ಸರಾಸರಿ ಶೇ 2.74 ಇದೆ. ಸೋಂಕಿನಿಂದ ಚೇತರಿಸಿಕೊಂಡಿರುವ 247 ಮಂದಿ ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 8027 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ 38,131 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 29,90,856 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,44,669 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಬೆಂಗಳೂರು ನಗರದಲ್ಲಿ 176 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನಪ್ಪಿದ್ದಾರೆ. ಇಂದು 102 ಜನರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ನಗರದಲ್ಲಿ ಪ್ರಸ್ತುತ 6567 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ ಒಟ್ಟು 12,53,353 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,30,482 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 16,303 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 176, ಹಾಸನ 29, ಮೈಸೂರು 15, ಚಿಕ್ಕಮಗಳೂರು 14, ದಕ್ಷಿಣ ಕನ್ನಡ 13, ಬೆಂಗಳೂರು ಗ್ರಾಮಾಂತರ 11, ಶಿವಮೊಗ್ಗ 11, ಉತ್ತರ ಕನ್ನಡ 10, ಮಂಡ್ಯ, ತುಮಕೂರು 8, ಕೊಡಗು 7, ಬೆಳಗಾವಿ 6, ಬಳ್ಳಾರಿ 5, ಕೋಲಾರ 4, ಚಾಮರಾಜನಗರ, ಕಲಬುರಗಿ, ಉಡುಪಿ 2, ಚಿತ್ರದುರ್ಗ, ರಾಮನಗರ, ವಿಜಯಪುರ, ಯಾದಗಿರಿ, ಚಿಕ್ಕಬಳ್ಳಾಪುರ 1.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 5, ದಕ್ಷಿಣ ಕನ್ನಡ 2, ರಾಮನಗರ, ಬೆಂಗಳೂರು ಗ್ರಾಮಾಂತರ 1.

ಇದನ್ನೂ ಓದಿ: ಆತಂಕ ಶುರು! ವಿದೇಶಗಳಲ್ಲಿ ಹೊಸ ತಳಿಯ ಕೊರೊನಾ ವೈರಸ್ ಪತ್ತೆ
ಇದನ್ನೂ ಓದಿ: ‘ದೇಶದಲ್ಲಿ ಕೊರೊನಾ ವೈರಸ್​ 3ನೇ ಅಲೆ ಪ್ರಾರಂಭ; ಮಕ್ಕಳಿಗೆ ಇಲ್ಲ ಅಪಾಯ, ಮಾರಣಾಂತಿಕವೂ ಅಲ್ಲ

TV9 Kannada


Leave a Reply

Your email address will not be published. Required fields are marked *