Covid-19 Updates: ಭಾರತದಲ್ಲಿ 24 ಗಂಟೆಯಲ್ಲಿ 6,594 ಕೊವಿಡ್ ಕೇಸ್ ದಾಖಲು; ಮಹಾರಾಷ್ಟ್ರದಲ್ಲಿ ಬಿಎ.5 ರೂಪಾಂತರಿ ಪತ್ತೆ | Covid 19 Updates: India Logs 6594 New Coronavirus Cases In 24 Hours BA.5 Variant Found in Maharashtra


ಭಾರತದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ 4,32,36,695ಕ್ಕೆ ತಲುಪಿದೆ. ಮಂಗಳವಾರ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‌ನ ಬಿಎ.5 ರೂಪಾಂತರದ ಎರಡು ಪ್ರಕರಣಗಳು ವರದಿಯಾಗಿವೆ.

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 6,594 ಹೊಸ ಕೊರೊನಾವೈರಸ್ ಪ್ರಕರಣಗಳು (Coronavirus Cases) ದಾಖಲಾಗಿದ್ದು, ಕೊವಿಡ್-19 ಸೋಂಕಿತರ ಸಂಖ್ಯೆ 4,32,36,695ಕ್ಕೆ ತಲುಪಿದೆ. ಮಂಗಳವಾರ ಒಂದೇ ದಿನದಲ್ಲಿ 6,594 ಕೊವಿಡ್ ಕೇಸುಗಳು ಪತ್ತೆಯಾಗಿದ್ದು, 4,035 ಚೇತರಿಕೆ ಹೊಂದುವ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,26,61,370ಕ್ಕೆ ತಲುಪಿದೆ.

ಭಾರತದಾದ್ಯಂತ ನೀಡಲಾದ ಕೋವಿಡ್ ಲಸಿಕೆಯ ಪ್ರಮಾಣ 195.35 ಕೋಟಿ ಮೀರಿದೆ. ನಿನ್ನೆ ತಮಿಳುನಾಡಿನಲ್ಲಿ 332 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ತಮಿಳುನಾಡಿನಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 34,57,969ಕ್ಕೆ ತಲುಪಿದೆ. ಮಧ್ಯಪ್ರದೇಶದಲ್ಲಿ 43 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿ, ಓರ್ವ ಸಾವನ್ನಪ್ಪಿದ್ದಾನೆ. ಮಧ್ಯಪ್ರದೇಶದಲ್ಲಿ ಇಂದು 43 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 10,43,221ಕ್ಕೆ ಏರಿದೆ. ನಿನ್ನೆ 1 ಕೋವಿಡ್ ಸಂಬಂಧಿತ ಸಾವು ವರದಿಯಾದ ನಂತರ ಸಾವಿನ ಸಂಖ್ಯೆ 10,739ಕ್ಕೆ ತಲುಪಿದೆ.

ಗುಜರಾತ್​​ನಲ್ಲಿ 165 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ನಿನ್ನೆ ಗುಜರಾತ್​ನಲ್ಲಿ ಕೊರೊನಾವೈರಸ್​ನಿಂದ ಯಾವುದೇ ರೋಗಿ ಸಾವನ್ನಪ್ಪಿಲ್ಲ. ಗುಜರಾತ್​​ನಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 12,26,528ಕ್ಕೆ ತಲುಪಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಅಹಮದಾಬಾದ್ ಜಿಲ್ಲೆಯಲ್ಲಿ ಮಂಗಳವಾರ ಅತಿ ಹೆಚ್ಚು 92 ಪ್ರಕರಣಗಳು, ವಡೋದರಾ 22, ಸೂರತ್ 12 ಮತ್ತು ಗಾಂಧಿನಗರ 10 ಕೊವಿಡ್ ಕೇಸುಗಳು ವರದಿಯಾಗಿದೆ.

TV9 Kannada


Leave a Reply

Your email address will not be published.