Covid Updates: ರಾಜ್ಯದಲ್ಲಿ ಇಂದು 1,692 ಜನರಿಗೆ ಕೊರೊನಾ ಸೋಂಕು ದೃಢ | 1,692 People tested covid Positive today in State


ರಾಜ್ಯದಲ್ಲಿ ಇಂದು (ಜುಲೈ 31) 1,692 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Covid Updates: ರಾಜ್ಯದಲ್ಲಿ ಇಂದು 1,692 ಜನರಿಗೆ ಕೊರೊನಾ ಸೋಂಕು ದೃಢ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇಂದು (ಜುಲೈ 31) 1,692 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 11,105 ಇದ್ದು, ರಾಜ್ಯದಲ್ಲಿ ಕೊರೊನಾ​ ಪಾಸಿಟಿವಿಟಿ ದರ​ ಶೇಕಡಾ 5.07 ರಷ್ಟಿದೆ. ಬೆಂಗಳೂರಿನಲ್ಲಿಂದು 1,154 ಜನರಲ್ಲಿ ಕೊರೊನಾ ಸೋಂಕು  ಕಾಣಸಿಕೊಂಡಿದೆ.

ಭಾರತದಲ್ಲಿ 19,673 ಮಂದಿ ಕೊರೊನಾ ಸೋಂಕಿತರು ಪತ್ತೆ 

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 19,673 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.  ಸಕ್ರಿಯ ಪ್ರಕರಣಗಳು 1,43,676 ಇದ್ದು ಪಾಸಿಟಿವಿಟಿ ದರ ಶೇ.4.96 ರಷ್ಟಿದೆ. ದೇಶದಲ್ಲಿ ಒಂದೇ ದಿನದಲ್ಲಿ 31,36,029 ಮಂದಿ ಕೊರೊನಾ ಲಸಿಕೆ ನೀಡಲಾಗಿದೆ. ಇದುವರೆಗೂ ಒಟ್ಟು 204.25ಕೋಟಿ  ಕೊರೊನಾ ಲಸಿಕೆ ಹಾಕಲಾಗಿದೆ.

ಕಳೆದ 24 ಗಂಟೆಗಳಲ್ಲಿ 19,336 ಮಂದಿ ಗುಣಮುಖರಾಗಿರುವುದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,33,49,778 ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *