ಮದ್ಯಪಾನ ಪ್ರಿಯರಿಗೆ ಶಾಕ್ ನೀಡಿರುವ ಹಿಮಾಚಲ ಪ್ರದೇಶ (Himachal Pradesh) ಸರ್ಕಾರ ಪ್ರತಿ ಬಾಟಲ್ ಮದ್ಯದ ಮೇಲೆ 10 ರೂ. ‘ಗೋ ತೆರಿಗೆ (Cow Cess)’ ವಿಧಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದೆ.

ಸಾಂದರ್ಭಿಕ ಚಿತ್ರ
ಶಿಮ್ಲಾ: ಮದ್ಯಪಾನ ಪ್ರಿಯರಿಗೆ ಶಾಕ್ ನೀಡಿರುವ ಹಿಮಾಚಲ ಪ್ರದೇಶ (Himachal Pradesh) ಸರ್ಕಾರ ಪ್ರತಿ ಬಾಟಲ್ ಮದ್ಯದ ಮೇಲೆ 10 ರೂ. ‘ಗೋ ತೆರಿಗೆ (Cow Cess)’ ವಿಧಿಸುವ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಿದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸುರೇಶ್ ಕುಮಾರ್ ಸುಖು ಮಾರ್ಚ್ 15ರಂದು ರಾಜ್ಯ ಬಜೆಟ್ ಮಂಡನೆ ಮಾಡಿದ್ದರು. ಇದರಲ್ಲಿ ‘ಗೋ ತೆರಿಗೆ’ ವಿಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದ ಆರ್ಥಿಕ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಹಸು ಸಾಕಾಣಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಇದರಿಂದ ವಾರ್ಷಿಕ ನೂರು ಕೋಟಿ ರೂಪಾಯಿ ಆದಾಯ ಸಂಗ್ರಹಿಸುವ ಗುರಿಯನ್ನು ಹಿಮಾಚಲ ಪ್ರದೇಶ ಸರ್ಕಾರ ಹೊಂದಿದೆ ಎನ್ನಲಾಗಿದೆ.
ಬಜೆಟ್ ಭಾಷಣ ಮಾಡಿದ ಸುಖು, ಈ ಮೊದಲು ಹಲವು ರಾಜ್ಯಗಳಲ್ಲಿ ಗೋ ಸಂಬಂಧಿ ತೆರಿಗೆ ಸಂಗ್ರಹಿಸಲಾಗುತ್ತದೆ. ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಚಂಡೀಗಢಗಳಲ್ಲಿ ಗೋ ತೆರಿಗೆ ಸಂಗ್ರಹಿಸಲಾಗುತ್ತಿದೆ. ಈ ರಾಜ್ಯಗಳಲ್ಲಿ ಮದ್ಯದ ಹೊರತಾಗಿ ಬೇರೆ ವಸ್ತುಗಳ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಈ ತೆರಿಗೆಯನ್ನು ಮದ್ಯದ ಮೇಲೆ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.