Crime News: ಆಲ್ಕೋಹಾಲ್ ತರಲಿಲ್ಲವೆಂದು ಹೊಡೆದ ಮಗನನ್ನೇ ಕೊಂದ ತಾಯಿ! | Crime News: Mumbai Murder Woman kills son after he hits her for not bringing liquor


Crime News: ಆಲ್ಕೋಹಾಲ್ ತರಲಿಲ್ಲವೆಂದು ಹೊಡೆದ ಮಗನನ್ನೇ ಕೊಂದ ತಾಯಿ!

ಸಾಂದರ್ಭಿಕ ಚಿತ್ರ

ಮುಂಬೈ: ತನ್ನ ತಾಯಿ ಮನೆಗೆ ಬರುವಾಗ ಆಲ್ಕೋಹಾಲ್ ತರಲಿಲ್ಲ ಎಂಬ ಕಾರಣಕ್ಕೆ ಹೊಡೆದಿದ್ದಕ್ಕೆ ಕೋಪಗೊಂಡ ತಾಯಿ ತನ್ನ ಮಗನನ್ನೇ ಕೊಲೆ ಮಾಡಿದ್ದಾಳೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿ 52 ವರ್ಷದ ಮಹಿಳೆಯೇ ತನ್ನ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ತನಗೆ ದೊಣ್ಣೆಯಿಂದ ಹೊಡೆದಿದ್ದಕ್ಕೆ ಕೋಪಗೊಂಡ ತಾಯಿ ಮಗನನ್ನು ಕೊಂದ ಆರೋಪದ ಮೇಲೆ ನಿನ್ನೆ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ವಶಿನಕಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಲೂರ್ತ್‌ಮೇರಿ ಮುರ್ಗೆಶನ್ ಮತ್ತು ಆಕೆಯ ಮಗ ಪ್ರವೀಣ್ ನಡುವೆ ಜಗಳ ನಡೆದ ನಂತರ ಕೊಲೆ ಮಾಡಲಾಗಿದೆ ಎಂದು ಆರ್‌ಸಿಎಫ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲು ಪ್ರವೀಣ್ ತನ್ನ ತಾಯಿ ಆಲ್ಕೋಹಾಲ್ ಬಾಟಲ್ ತರಲಿಲ್ಲ ಎಂದು ಆಕೆಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ಸುತ್ತಿಗೆಯಿಂದ ಮಗನ ತಲೆಯನ್ನು ಒಡೆದಿದ್ದಾಳೆ. ನಂತರ ಅವಳು ಫ್ಲಾಟ್‌ಗೆ ಬೀಗ ಹಾಕಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದಾಳೆ. ಫೋನ್​ನಲ್ಲಿ ತನ್ನ ಮಗ ಕಾಣೆಯಾಗಿದ್ದಾನೆ, ನಾಳೆ ಆತನನ್ನು ಹುಡುಕಬೇಕು ಎಂದು ಹೇಳಿದ್ದಾಳೆ. ನಂತರ ತನ್ನ ಗಂಡನಿಗೂ ತನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಆಕೆ ಹೇಳಿದಳು. ಆದರೆ, ಆತ ತನ್ನ ಹೆಂಡತಿಯ ಮಾತನ್ನು ನಂಬಲಿಲ್ಲ.

ಸೋಮವಾರ ಮಧ್ಯಾಹ್ನ ಆ ದಂಪತಿಗಳು ತಮ್ಮ ಫ್ಲಾಟ್​ಗೆ ಬಂದಾಗ ಅವರ ಮಗ ಪ್ರವೀಣನ ದೇಹವು ರಕ್ತದ ಮಡುವಿನಲ್ಲಿ ಬಿದ್ದಿತ್ತು. ನಂತರ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ವಿಚಾರಣೆ ಬಳಿಕ ಮೃತ ಯುವಕನ ತಾಯಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

TV9 Kannada


Leave a Reply

Your email address will not be published. Required fields are marked *