Crime News: ಒಂದು ಕೈಯಿಂದ ಸ್ಕೂಟಿ ಚಲಾಯಿಸುತ್ತಾ ಇನ್ನೊಂದು ಕೈಯಲ್ಲಿ ಸಿಗರೇಟ್ ಹಚ್ಚಲು ಹೋಗಿ ಪ್ರಾಣ ಕಳೆದುಕೊಂಡ ಯುವಕ – Crime News: A young man lost his life while driving a scooty with one hand and went to light a cigarette with the other hand kannada latest crime news


ವ್ಯಕ್ತಿಯೊಬ್ಬನ ಬೇಜವಾಬ್ದಾರಿ ವಾಹನ ಚಾಲನೆಯಿಂದ ಅಪಘಾತ ನಡೆದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯು ಇಂದೋರ್‌ನ ವಿಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಅಪಘಾತ ಸಂಭವಿಸಿದೆ.

Crime News: ಒಂದು ಕೈಯಿಂದ ಸ್ಕೂಟಿ ಚಲಾಯಿಸುತ್ತಾ ಇನ್ನೊಂದು ಕೈಯಲ್ಲಿ ಸಿಗರೇಟ್ ಹಚ್ಚಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಸಾಂದರ್ಭಿಕ ಚಿತ್ರ

ಮಧ್ಯಪ್ರದೇಶ: ವ್ಯಕ್ತಿಯೊಬ್ಬನ ಬೇಜವಾಬ್ದಾರಿ ವಾಹನ ಚಾಲನೆಯಿಂದ ಅಪಘಾತ ನಡೆದು ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆಯು ಇಂದೋರ್‌ನ ವಿಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಅಪಘಾತ ಸಂಭವಿಸಿದೆ. ಇದರಿಂದ ಯುವಕನೊಬ್ಬ ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಮತ್ತು ಮಹಿಳೆ ಗಾಯಗೊಂಡಿದ್ದಾರೆ.

ಮೊಹಮ್ಮದ್ ವಕಾರ್ ಎಂಬ ವ್ಯಕ್ತಿ ತನ್ನ ಸ್ನೇಹಿತರಾದ ಜೈದ್ ಅಹ್ಮದ್ ಮತ್ತು ಕಾಜಲ್ ಜೊತೆಗೆ ಆಕ್ಟಿವಾದಲ್ಲಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಬಾಪತ್ ಛೇದಕ ಕಡೆಗೆ ಹೋಗುತ್ತಿದ್ದ ಮೊಹಮ್ಮದ್ ವಕಾರ್ ಒಂದು ಕೈಯಿಂದ ಸ್ಕೂಟಿ ಚಲಾಯಿಸುತ್ತಾ ಇನ್ನೊಂದು ಕೈಯಲ್ಲಿ ಸಿಗರೇಟ್ ಹಚ್ಚಲು ಯತ್ನಿಸಿದ ಕಾರಣ ವಾಹನದ ಮೇಲೆ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಆಕ್ಟಿವಾ ಡಿವೈಡರ್‌ಗೆ ಡಿಕ್ಕಿ ಹೊಡೆದು ಮೂವರು ಭಂಡಾರಿ ಆಸ್ಪತ್ರೆ ಮುಂಭಾಗದ ರಸ್ತೆಗೆ ಬಿದ್ದಿದ್ದಾರೆ. ವಕಾರ್ ತಲೆಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.

ಅಪಘಾತದಲ್ಲಿ ಜೈದ್ ಮತ್ತು ಕಾಜಲ್ ಕೂಡ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ವಕಾರ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಎಂವೈ ಆಸ್ಪತ್ರೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.