Crime News: ಕೋರ್ಟ್​ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕೊಲೆ ಆರೋಪಿ! | Crime News: Murder Accused Throws Slipper At Judge At Maharashtra Kalyan Court Misses Booked


Crime News: ಕೋರ್ಟ್​ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕೊಲೆ ಆರೋಪಿ!

ಸಾಂಕೇತಿಕ ಚಿತ್ರ

ಥಾಣೆ: ತನ್ನ ವಿಚಾರಣೆಯ ದಿನದಂದು ತನ್ನನ್ನು ನ್ಯಾಯಾಲಯಕ್ಕೆ ಕರೆತರುತ್ತಿಲ್ಲ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಕೊಲೆ ಪ್ರಕರಣದ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸ್ಥಳೀಯ ನ್ಯಾಯಾಲಯದಲ್ಲಿ ನಡೆದಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ. ಕಲ್ಯಾಣ್‌ನ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು, ರೋಷನ್ ಘೋರ್ಪಡೆ ತಮ್ಮ ಹೆಂಡತಿ ಮತ್ತು ತಾಯಿಯನ್ನು ಹತ್ಯೆಗೈದ ಆರೋಪದ ಮೇಲೆ ವಿಚಾರಣೆ ನಡೆಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಾರಣೆ ವೇಳೆ ಘೋರ್ಪಡೆ ಚಪ್ಪಲಿ ಎತ್ತಿಕೊಂಡು ನ್ಯಾಯಾಧೀಶರತ್ತ ಎಸೆದಿದ್ದಾರೆ. ಆದರೆ, ಆತ ಎಸೆದ ಚಪ್ಪಲಿಗಳು ನ್ಯಾಯಾಧೀಶರಿಗೆ ತಾಗಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಈ ಘಟನೆ ನಡೆದ ಕೂಡಲೆ ನ್ಯಾಯಾಲಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ತಕ್ಷಣ ವಿಚಾರಣೆಗೆ ಒಳಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಘೋರ್ಪಡೆ ತನ್ನ ವಿಚಾರಣೆಯ ದಿನಾಂಕದಂದು ನ್ಯಾಯಾಲಯಕ್ಕೆ ಕರೆತರುತ್ತಿಲ್ಲ ಎಂದು ಬೇಸರಗೊಂಡಿದ್ದರು. ಆರೋಪಿಯ ವಿರುದ್ಧ ಐಪಿಸಿಯ ಸೆಕ್ಷನ್ 353 ಮತ್ತು 504 ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ಕಲ್ಯಾಣ್‌ನ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದ್ದು, ರೋಷನ್ ಘೋರ್ಪಡೆ ಅವರ ಪತ್ನಿ ಮತ್ತು ತಾಯಿಯ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದರು ಎಂದು MFC ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಚಾರಣೆ ವೇಳೆ ಘೋರ್ಪಡೆ ಚಪ್ಪಲಿ ಎತ್ತಿಕೊಂಡು ನ್ಯಾಯಾಧೀಶರತ್ತ ಎಸೆದಿದ್ದಾರೆ. ಆದರೆ, ಪಾದರಕ್ಷೆಗಳು ನ್ಯಾಯಾಧೀಶರಿಗೆ ತಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಪೊಲೀಸ್ ಸಮವಸ್ತ್ರ ಧರಿಸಿ ದರೋಡೆ ಮಾಡುತ್ತಿದ್ದ ಆರು ಮಂದಿಯ ಬಂಧನ

ಉತ್ತರ ಪ್ರದೇಶ: ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ಕರೆಸಲಾಗಿದ್ದ ಯುವಕ ಪೊಲೀಸ್ ಠಾಣೆಯೊಳಗೆ ಶವವಾಗಿ ಪತ್ತೆ

TV9 Kannada


Leave a Reply

Your email address will not be published.