Crime News: ಖಿನ್ನತೆಗೆ ಒಳಗಾಗಿ ಬೆಂಕಿ ಹಚ್ಚಿಕೊಂಡು 8 ತಿಂಗಳ ಮಗು ಸಮೇತ ತಾಯಿ ಆತ್ಮಹತ್ಯೆ | Mother commits suicide with her 8 month old Baby by setting fire to herself in depression


Crime News: ಖಿನ್ನತೆಗೆ ಒಳಗಾಗಿ ಬೆಂಕಿ ಹಚ್ಚಿಕೊಂಡು 8 ತಿಂಗಳ ಮಗು ಸಮೇತ ತಾಯಿ ಆತ್ಮಹತ್ಯೆ

ಮಗು ಮತ್ತು ತಾಯಿ ಸಿಂಧು

4 ಭಾರಿ ಗರ್ಭಪಾತವಾದ ಬಳಿಕ ಗಂಡು ಮಗುವಿಗೆ ಸಿಂಧು ಜನ್ಮ ನೀಡಿದ್ದಳು. ಗಂಡು ಮಗುವಿನ ಜನ್ಮ ನೀಡಿದ ಬಳಿಕ ಸಿಂಧು ಖಿನ್ನತೆಗೆ ಒಳಗಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೈಸೂರು: ಮಾನಸಿಕ ಖಿನ್ನತೆಗೆ ಒಳಗಾಗಿ 8 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ತಾನು ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಅಮಾನವೀಯ ಘಟನೆ ಜಿಲ್ಲೆಯ ನಂಜನಗೂಡು ತಾಳೂಕಿನ ದಾಸನೂರು ಗ್ರಾಮದಲ್ಲಿ ನಡೆದಿದೆ. ಖಿನ್ನತೆಗೆ ಒಳಗಾಗಿದ್ದ ತಾಯಿ ಸಿಂಧು(24) ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮೊದಲು ತನ್ನ 8 ತಿಂಗಳ ಮಗುವಿಗೆ ಬೆಂಕಿ ಹಚ್ಚಿ ಬಳಿಕ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಕೊಂಡಿದ್ದಾಳೆ. ಚಾಮರಾಜನಗರ ಮೂಲದ ಸಿಂಧು, 9 ವರ್ಷಗಳ ಹಿಂದೆ ದಾಸನೂರಿನ ಮಹದೇವಸ್ವಾಮಿ ಜತೆ ಮದುವೆ ಆಗಿದ್ದರು. 4 ಭಾರಿ ಗರ್ಭಪಾತವಾದ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಗಂಡು ಮಗುವಿನ ಜನ್ಮ ನೀಡಿದ ಬಳಿಕ ಸಿಂಧು ಖಿನ್ನತೆಗೆ ಒಳಗಾಗಿದ್ದಳು. ತಾಯಿ ಮಗುವನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ 8 ತಿಂಗಳ ಮಗು, ತಾಯಿ ಸಿಂಧು ಸಾವನ್ನಪ್ಪಿದ್ದಾರೆ. ದೊಡ್ಡ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *