Crime News: ಚಲಿಸುವ ರೈಲಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; 4 ಕಾಮುಕರ ಬಂಧನ | Maharashtra Woman gang raped on Mumbai bound Pushpak Express Moving Train four Arrested

Crime News: ಚಲಿಸುವ ರೈಲಿನಲ್ಲೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; 4 ಕಾಮುಕರ ಬಂಧನ

ಅತ್ಯಾಚಾರ ತಡೆಯೋಣ

ಮುಂಬೈ: ಲಕ್ನೋ- ಮುಂಬೈ ಮಾರ್ಗದ ಪುಷ್ಪಕ್ ಎಕ್ಸ್​ಪ್ರೆಸ್ ರೈಲಿನಲ್ಲಿ 20 ವರ್ಷದ ಯುವತಿ ಮೇಲೆ ದರೋಡೆಕೋರರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಮಹಾರಾಷ್ಟ್ರದ ಇಗತ್ಪುರಿ ಮತ್ತು ಕಾಸರ ರೈಲ್ವೆ ನಿಲ್ದಾಣಗಳ ನಡುವೆ ಈ ಅತ್ಯಾಚಾರ ನಡೆಸಲಾಗಿದ್ದು, ಯುವತಿ ನೀಡಿದ ದೂರಿನ ಆಧಾರದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಶುಕ್ರವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದು, ಮುಂಬೈ ರೈಲ್ವೆ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಈ ಬಗ್ಗೆ ತಿಳಿಸಿರುವ ಮುಂಬೈ ಜಿಆರ್‌ಪಿಯ ಪೊಲೀಸ್ ಆಯುಕ್ತ ಕೈಸೆರ್ ಖಾಲಿದ್, ಪುಷ್ಪಕ್ ಎಕ್ಸ್‌ಪ್ರೆಸ್ ರೈಲು ಘಾಟ್ ವಿಭಾಗದಲ್ಲಿ ಸಂಚರಿಸುವಾಗ ಯುವತಿ ಮೇಲೆ ಅತ್ಯಾಚಾರ ನಡೆಸಲಾಗಿದೆ. ಆರೋಪಿಗಳು ಇಗತ್ಪುರಿಯಲ್ಲಿ (ಔರಂಗಾಬಾದ್ ರೈಲ್ವೇ ಜಿಲ್ಲೆ) ಲಕ್ನೋ-ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್‌ಗೆ ಸ್ಲೀಪರ್ ಬೋಗಿ ಡಿ -2 ನಲ್ಲಿ ಪ್ರಯಾಣಿಸುತ್ತಿದ್ದರು. ಘಾಟ್ ಪ್ರದೇಶದಲ್ಲಿ ರೈಲು ಚಲಿಸುತ್ತಿದ್ದಾಗ ಶುಕ್ರವಾರ ರಾತ್ರಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ.

ರೈಲು ಕಾಸರವನ್ನು ತಲುಪಿದಾಗ ಆ ಯುವತಿಯ ಸ್ಥಿತಿಯನ್ನು ನೋಡಿದ ಪ್ರಯಾಣಿಕರು ರೈಲ್ವೆ ಸಿಬ್ಬಂದಿ ಬಳಿ ಸಹಾಯ ಮಾಡುವಂತೆ ಕೋರಿದರು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು, ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.

ಸಂತ್ರಸ್ತೆಗೆ 20 ವರ್ಷವಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ನಾವು ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ. ಆರೋಪಿಗಳನ್ನು ನಮ್ಮ ತಂಡವು ಪ್ರಶ್ನಿಸುತ್ತಿದೆ. ನಾವು ಅವರ ಹಿಂದಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಉಪ ಪೊಲೀಸ್ ಆಯುಕ್ತರು ಮತ್ತು ಅಪರಾಧ ವಿಭಾಗದ ತಂಡವು ಆರೋಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳು ರೈಲು ಪ್ರಯಾಣಿಕರಿಂದ 96,390 ರೂ. ಮೌಲ್ಯದ ವಸ್ತುಗಳನ್ನು ಕದ್ದಿದ್ದಾರೆ. ದರೋಡೆ ಮಾಡಲೆಂದೇ ರೈಲು ಹತ್ತಿದ್ದ ಅವರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!

Gang Rape: ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ರೈಲ್ವೆ ಹಳಿ ಮೇಲೆ ಬಿಸಾಡಿದ ಕಾಮುಕರು

TV9 Kannada

Leave a comment

Your email address will not be published. Required fields are marked *