Crime News: ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟವನನ್ನೇ ಚಾಕು ಇರಿದು ಪರಾರಿಯಾದ ಸುಪಾರಿ ಕಿಲ್ಲರ್, ಕಾರಣವೇನು ಗೊತ್ತಾ? – Karnataka Crime news Supari killer knife attack on who gave murder deal in koppal


ಹಣಕಾಸಿನ ವಿಚಾರಕ್ಕೆ ಕಿಲ್ಲರ್ ಮತ್ತು ಯೋಗೇಶ ನಡುವೆ ಗಲಾಟೆಯಾಗಿದೆ. ಈ ವೇಳೆ ತಂದೆ-ತಾಯಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಯೋಗೇಶ್ ದೇಸಾಯಿಗೆ ಚಾಕು ಇರಿದು ಕಿಲ್ಲರ್​ಗಳು ಪರಾರಿಯಾಗಿದ್ದಾರೆ.

Crime News: ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟವನನ್ನೇ ಚಾಕು ಇರಿದು ಪರಾರಿಯಾದ ಸುಪಾರಿ ಕಿಲ್ಲರ್, ಕಾರಣವೇನು ಗೊತ್ತಾ?

ಸಾಂದರ್ಭಿಕ ಚಿತ್ರ

ಕೊಪ್ಪಳ: ಸುಪಾರಿ ಪಡೆದವರೇ ಸುಪಾರಿ ಕೊಟ್ಟವನಿಗೆ ಚಾಕು ಇರಿದಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯ ಜಯ ನಗರದಲ್ಲಿ ನಡೆದಿದೆ. ಸುಪಾರಿ ಕಿಲ್ಲರ್ ಯೋಗೇಶ್ ದೇಸಾಯಿ ಎಂಬುವವರಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಯೋಗೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ವೃತ್ತಿಯಲ್ಲಿ ವಕೀಲನಾಗಿರುವ ಯೋಗೇಶ್ ದೇಸಾಯಿ, ತಮ್ಮ ತಂದೆ ಕೊಲೆಗೆ ಸುಪಾರಿ ನೀಡಿದ್ದ ಎಂಬ ಸ್ಪೋಟಕ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆಸ್ತಿ ವಿಚಾರಕ್ಕೆ ಮಲತಾಯಿ ಹಾಗೂ ತಂದೆ ಕೊಲೆ ಮಾಡಲು ಯೋಗೇಶ್ ಬೆಂಗಳೂರಿನಿಂದ ಇಬ್ಬರನ್ನು ಕರೆ ತಂದಿದ್ದ. ಆದ್ರೆ ಹಣಕಾಸಿನ ವಿಚಾರಕ್ಕೆ ಕಿಲ್ಲರ್ ಮತ್ತು ಯೋಗೇಶ ನಡುವೆ ಗಲಾಟೆಯಾಗಿದೆ. ಈ ವೇಳೆ ತಂದೆ-ತಾಯಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಯೋಗೇಶ್ ದೇಸಾಯಿಗೆ ಚಾಕು ಇರಿದು ಕಿಲ್ಲರ್​ಗಳು ಪರಾರಿಯಾಗಿದ್ದಾರೆ. ಯೋಗೇಶ್​ನ ಈ ಪ್ಲಾನ್​ಗೆ ತಂಗಿ ರೂಪ ಮತ್ತು ಅಳಿಯ ಆನಂದ ಕೈ ಜೋಡಿಸಿದ್ದರು ಎಂದು ತಿಳಿದು ಬಂದಿದೆ. ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV9 Kannada


Leave a Reply

Your email address will not be published.