
ಸಾಂದರ್ಭಿಕ ಚಿತ್ರ
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ತೂಪನಕೊಲ್ಲಿ ಎಸ್ಟೇಟ್ನಲ್ಲಿ ಗೃಹಿಣಿ ಚೈತ್ರಾ(26) ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಗ್ರಾಮದಲ್ಲಿರುವ ಬೃಂದಾವನ ಕಾಲೇಜು ಹಾಸ್ಟೆಲ್ನಲ್ಲಿ ನೇಣುಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಓಮನ್ ದೇಶದ ವಿದ್ಯಾರ್ಥಿ ಅಬ್ದುಲ್ ರಶೀದ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಕೊಂದ ಆರೋಪಿ ಅರೆಸ್ಟ್
ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿಯಲ್ಲಿ ಮೇ 20ರಂದು ಮದ್ಯ ಸೇವಿಸುವಾಗ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಸ್ನೇಹಿತನನ್ನು ಕೊಲೆಗೈದಿದ್ದ ಘಟನೆ ನಡೆದಿತ್ತು. ಸದ್ಯ ಪೊಲೀಸರು ಬಿಹಾರ ಮೂಲದ ಕಾರ್ಪೆಂಟರ್ ಬೈಜುಶರ್ಮಾನನ್ನು ಬಂಧಿಸಿದ್ದಾರೆ. ತುಮಕೂರಿನ ಪಾವಗಡ ಮೂಲದ ಪಾತಲಿಂಗ (32) ಕೊಲೆಯಾದ ವ್ಯಕ್ತಿ.
ಆರೋಪಿ ಬೈಜುಶರ್ಮಾ ಮತ್ತು ಕೊಲೆಯಾದ ಪಾತಲಿಂಗ ಇಬ್ಬರೂ ಆವಲಹಳ್ಳಿಯ ವುಡ್ ವರ್ಕ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರು. ಆದ್ರೆ ಕಳೆದ ಶುಕ್ರವಾರ ಸಂಜೆ ಎಣ್ಣೆ ಹೊಡೆಯುವ ವೇಳೆ ಕಿರಿಕ್ ನಡೆದು ಕೊಲೆ ನಡೆದಿದೆ. ಅಂಗಡಿ ಮಾಲೀಕನ ನೂತನ ನಿರ್ಮಾಣ ಹಂತದ ಮನೆ ಮೇಲೆ ಕೊಲೆ ನಡೆದಿದೆ. ಕೊಲೆ ನಂತರ ಆರೋಪಿ ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದ ಇದೀಗ ಆರೋಪಿಯನ್ನ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.