ಕುಖ್ಯಾತ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್ ನದೀಂ ಹಾಗೂ ಅಜಂ ಖಾನ್ ಬಂಧಿತ ಆರೋಪಿಗಳು.

ಪ್ರಾತಿನಿಧಿಕ ಚಿತ್ರ
ಮೈಸೂರು: ಬೆನ್ನು ನೋವಿನಿಂದ ಬೇಸತ್ತು ಎಎಸ್ಐ ಪತ್ನಿ ನೇಣಿಗೆ (hang) ಶರಣಾಗಿರುವಂತಹ ಘಟನೆ ನಜರ್ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಎಸ್ಐ ಮಂಜೇಗೌಡ ಪತ್ನಿ ಜ್ಯೋತಿ(40) ಮೃತ ಮಹಿಳೆ. ಕೆಎಸ್ಆರ್ಪಿಯಲ್ಲಿ ಎಎಸ್ಐ ಆಗಿರುವ ಮಂಜೇಗೌಡ, ದೇಹದ ತೂಕ ಹೆಚ್ಚಾದ ಕಾರಣ ತೀವ್ರ ಬೆನ್ನು ನೋವು ಉಂಟಾಗಿದ್ದು, ಚಿಕಿತ್ಸೆ ಪಡೆದಿದ್ದರೂ ಕಡಿಮೆಯಾಗಿರಲಿಲ್ಲ. ಹೀಗಾಗಿ ಬೇಸತ್ತು ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.