Crime News: ಬೇರೆ ಗುಂಪಿನ ರಕ್ತ ನೀಡಿದ ವೈದ್ಯರ ಎಡವಟ್ಟಿಂದ ಮಹಿಳೆ ಸಾವು! | Crime News: Woman Patient Dies Allegedly After Wrong Blood Group Transfusion in Odisha


Crime News: ಬೇರೆ ಗುಂಪಿನ ರಕ್ತ ನೀಡಿದ ವೈದ್ಯರ ಎಡವಟ್ಟಿಂದ ಮಹಿಳೆ ಸಾವು!

ಸಾಂದರ್ಭಿಕ ಚಿತ್ರ

ರೌರ್ಕೆಲಾ: ವೈದ್ಯರನ್ನು ದೇವರು ಎಂದು ಹೇಳಲಾಗುತ್ತದೆ. ಆದರೆ, ಆ ವೈದ್ಯರು ಕೆಲವೊಮ್ಮೆ ಮಾಡುವ ಎಡವಟ್ಟಿನಿಂದ ರೋಗಿಗಳು ಪ್ರಾಣವನ್ನೇ ಕಳೆದುಕೊಂಡ ಉದಾಹರಣೆಗಳು ಕೂಡ ಸಾಕಷ್ಟಿವೆ. ಒಡಿಶಾದ ಸುಂದರ್‌ಗಢ ಜಿಲ್ಲೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ 25 ವರ್ಷದ ಮಹಿಳೆಯೊಬ್ಬರಿಗೆ ಬೇರೆ ಗುಂಪಿನ ರಕ್ತವನ್ನು ನೀಡಿದ್ದರಿಂದ ಆಕೆ ಸಾವನ್ನಪ್ಪಿದ್ದಾರೆ. ಕುಟ್ರಾ ಬ್ಲಾಕ್‌ನ ಬುಡಕಟಾ ಗ್ರಾಮದ ನಿವಾಸಿ ಸರೋಜಿನಿ ಕಾಕು ಅವರನ್ನು ಗುರುವಾರ ಮಧ್ಯಾಹ್ನ ರೌರ್ಕೆಲಾ ಸರ್ಕಾರಿ ಆಸ್ಪತ್ರೆಗೆ (ಆರ್‌ಜಿಹೆಚ್) ಸೇರಿಸಲಾಗಿತ್ತು. ಆ ರೋಗಿಯು ರಕ್ತಹೀನತೆಯಿಂದ ಬಳಲುತ್ತಿದ್ದರು. ಆಕೆಗೆ ರಕ್ತ ವರ್ಗಾವಣೆ ಮಾಡಲಾಗಿತ್ತು.

ಆದರೆ, ಆ ಮಹಿಳೆಯ ಬ್ಲಡ್ ಗ್ರೂಪಿನ ಬದಲಾಗಿ ಬೇರೆ ಗ್ರೂಪಿನ ರಕ್ತವನ್ನು ನೀಡಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ. ಆ ಮಹಿಳೆಯ ರಕ್ತದ ಗ್ರೂಪ್ ಒ ಪಾಸಿಟಿವ್ ಆಗಿದ್ದು, ಆಕೆಗೆ ವೈದ್ಯರು ತಪ್ಪಾಗಿ ಬಿ ಪಾಸಿಟಿವ್ ರಕ್ತವನ್ನು ನೀಡಿದ್ದರು. ಮಹಿಳೆಗೆ ವೈದ್ಯರು ತಪ್ಪು ಗುಂಪಿನ ರಕ್ತ ನೀಡಿದ್ದರಿಂದ ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆಕೆಯ ರಕ್ತದ ಗುಂಪು ಒ ಪಾಸಿಟಿವ್. ಆದರೆ, ಆಕೆಗೆ ಬಿ ಪಾಸಿಟಿವ್ ರಕ್ತವನ್ನು ನೀಡಲಾಗಿತ್ತು ಎಂದು ಸಂಬಂಧಿಯೊಬ್ಬರು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಗಾಗಿ ಮೃತದೇಹವನ್ನು ಸಂರಕ್ಷಿಸಿದ್ದಾರೆ ಎಂದು ಕುತ್ರಾ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಬಿ.ಕೆ. ಬಿಹಾರಿ ತಿಳಿಸಿದ್ದಾರೆ.

ಈ ವಿಚಾರವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿದೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವೈದ್ಯರು ಭರವಸೆ ನೀಡಿದ್ದಾರೆ. ತಮ್ಮ ಆಸ್ಪತ್ರೆಯಿಂದ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಿರುವುದು ಖಚಿತವಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ RGH ಸೂಪರಿಂಟೆಂಡೆಂಟ್ ಜಗದೀಶ್ಚಂದ್ರ ಬೆಹೆರಾ ಹೇಳಿದ್ದಾರೆ.

ರೋಗಿಯ ಬ್ಲಡ್ ಗ್ರೂಪಿನೊಂದಿಗೆ ಮ್ಯಾಚ್ ಆದರೆ ಮಾತ್ರ ರಕ್ತವನ್ನು ನೀಡಲಾಗುತ್ತದೆ. ದಾನಿಗಳ ರಕ್ತವು ರೋಗಿಯ ರಕ್ತದೊಂದಿಗೆ ಹೊಂದಾಣಿಕೆಯಾಗುತ್ತದೆಯೇ ಎಂದು ಪರೀಕ್ಷಿಸಲು ರಕ್ತ ವರ್ಗಾವಣೆಯ ಮೊದಲು ಪರೀಕ್ಷೆ ಮಾಡಲಾಗುತ್ತದೆ. ಇದು ತಪ್ಪು ರಕ್ತದ ಗುಂಪಿನ ಪ್ರಕರಣವಾಗಿದ್ದರೆ, ರೋಗಿಯು 10ರಿಂದ15 ನಿಮಿಷಗಳಲ್ಲಿ ಸಾಯುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Crime News: ಕೋರ್ಟ್​ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಕೊಲೆ ಆರೋಪಿ!

Murder: ಸ್ನಾನಕ್ಕೆ ಹೋದ ಗಂಡನಿಗೆ ಟವೆಲ್ ಕೊಡಲು ತಡವಾಗಿದ್ದಕ್ಕೆ ಹೆಂಡತಿಯ ಬರ್ಬರ ಹತ್ಯೆ

TV9 Kannada


Leave a Reply

Your email address will not be published. Required fields are marked *