Crime News: ಮದುವೆ ಆಗಿದ್ದರೂ ಫೇಸ್​ಬುಕ್ ಲವ್; ಯುವತಿ ರಂಪಾಟಕ್ಕೆ ನೊಂದು ಯುವಕ ಆತ್ಮಹತ್ಯೆ | Crime News Karnataka Police Facebook Love Man commits Suicide


Crime News: ಮದುವೆ ಆಗಿದ್ದರೂ ಫೇಸ್​ಬುಕ್ ಲವ್; ಯುವತಿ ರಂಪಾಟಕ್ಕೆ ನೊಂದು ಯುವಕ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ಯುವಕನೋರ್ವ ಮದುವೆ ಆಗಿದ್ದರೂ ಬೇರೆ ಯುವತಿ ಜತೆ ಫೇಸ್​​ಬುಕ್​ ಪ್ರೀತಿಯಲ್ಲಿ ಬಿದ್ದಿದ್ದಾನೆ. ಮದುವೆಯಾಗಿರುವ ವಿಚಾರ ತಿಳಿದು ಯುವತಿ ರಂಪಾಟ ಮಾಡಿದ ಹಿನ್ನೆಲೆಯಲ್ಲಿ ನೊಂದು ಚೇತನ್ (27) ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಘಟನೆ ನಡೆದಿದೆ. 4 ವರ್ಷದ ಹಿಂದೆ ತುಮಕೂರಿನ ನವ್ಯಾ ಜತೆ ಚೇತನ್​ಗೆ ವಿವಾಹವಾಗಿತ್ತು. ನವ್ಯಾ, ಚೇತನ್ ದಂಪತಿಗೆ 3 ವರ್ಷದ ಹೆಣ್ಣುಮಗುವಿದೆ. 1 ವರ್ಷದ ಹಿಂದೆ ಕೌಟುಂಬಿಕ ಕಲಹದಿಂದ ಚೇತನ್ ಪತ್ನಿಯನ್ನು ತೊರೆದಿದ್ದ. ನಂತರ ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್​ ಮೊರೆಹೋಗಿದ್ದ. ಈ ನಡುವೆ ಫೇಸ್​​ಬುಕ್​​ನಲ್ಲಿ ಯುವತಿ ಜೊತೆಗೆ ಪ್ರೀತಿಗೆ ಬಿದ್ದಿದ್ದು, ಮದುವೆಯಾಗಿದ್ದ ವಿಚಾರ ತಿಳಿದು ಯುವತಿ ರಂಪಾಟ ನಡೆಸಿದ್ದಾಳೆ. ಇದರಿಂದ ನೊಂದು ಚೇತನ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಉತ್ತರ ಕನ್ನಡ: ಮನೆಯಲ್ಲೇ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ
ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಮೇಲೆ ಶಿರಸಿ ಪೊಲೀಸರು ದಾಳಿ ನಡೆಸಿದ್ದಾರೆ. ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಶಿರಸಿ ಡಿವೈಎಸ್​ಪಿ ರವಿ ನಾಯ್ಕ್ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿ.ಎಸ್.ಐ. ರಾಜಕುಮಾರ ದಾಳಿ ನಡೆಸಿದ್ದಾರೆ.

ಬಾಗಲಕೋಟೆ: ಮದ್ಯ ಮಾರುತ್ತಿದ್ದ ಮನೆಗೆ ಪೊಲೀಸ್ ದಾಳಿ; ಅಪ್ಪ, ಮಗನಿಗೆ ಥಳಿತದ ಆರೋಪ
ಮದ್ಯ ಮಾರುತ್ತಿದ್ದ ಮನೆ ಮೇಲೆ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, ಮನೆಯಲ್ಲಿ ಪರಿಶೀಲನೆ ವೇಳೆ ಅಪ್ಪ, ಮಗನಿಗೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕನ್ನೊಳ್ಳಿ ಗ್ರಾಮದ ಹನುಮಂತ, ಸಂತೋಷ್​ ಮೇಲೆ ಜಮಖಂಡಿ ಅಬಕಾರಿ ಸಿಬ್ಬಂದಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿದೆ. ಸಂತೋಷ್ ಅವರಿಗೆ ಮರ್ಮಾಂಗಕ್ಕೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದ್ದು, ತಂದೆ, ಮಗನಿಗೆ ಜಮಖಂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿವಮೊಗ್ಗ: ರೈಲು ಇಳಿಯುವಾಗ ನಿಯಂತ್ರಣ ತಪ್ಪಿ ಬಿದ್ದ ಮಹಿಳೆಯ ರಕ್ಷಣೆ
ರೈಲು ಇಳಿಯುವಾಗ ನಿಯಂತ್ರಣ ತಪ್ಪಿ ಬಿದ್ದ ಮಹಿಳೆಯೋರ್ವರನ್ನು ರಕ್ಷಿಸಲಾಗಿದೆ. ಶಿವಮೊಗ್ಗ ನಗರದ ರೈಲು ನಿಲ್ದಾಣದಲ್ಲಿ ರೈಲು ಇಳಿಯುವಾಗ ನಿಯಂತ್ರಣ ತಪ್ಪಿ ಫ್ಲ್ಯಾಟ್ ಫಾರ್ಮ್ ಮೇಲೆ 50 ವರ್ಷದ ವಹಿಳೆ ಬಿದ್ದರು. ರೈಲ್ವೇ ಪೊಲೀಸ್ ಹಾಗೂ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದೆ. ರೈಲ್ವೆ ಪೊಲೀಸ್ ಪಿ.ಸಿಗಳಾದ ಅಣ್ಣಪ್ಪ, ಸಂತೋಷ್, ಆರ್ಪಿಎಫ್ ಸಿಬ್ಬಂದಿ ಜಗದೀಶ್​ ರಕ್ಷಣಾ ಕಾರ್ಯದಲ್ಲಿ ಭಾಗವಹಸಿದ್ದರು.

ಇದನ್ನೂ ಓದಿ: ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವು

ಇದನ್ನೂ ಓದಿ: ಮೈಸೂರು: ವಾಟರ್ ಫಿಲ್ಟರ್ ಹೌಸ್​ನಲ್ಲಿ ಅನಿಲ ಸೋರಿಕೆ; ವಿಷ ಅನಿಲ ಸೇವಿಸಿ ಐವರು ಅಸ್ವಸ್ಥ

TV9 Kannada


Leave a Reply

Your email address will not be published. Required fields are marked *