Crime News: ಮಹಿಳೆಗೆ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ, ಅಶ್ಲೀಲ ವಿಡಿಯೋ ಮೂಲಕ ಬ್ಲಾಕ್‌ಮೇಲ್ – Woman drugged, gang-raped, blackmailed through obscene video


ನೀರಿನಲ್ಲಿ ಅಮಲು ಪದಾರ್ಥಗಳನ್ನು ಮಿಶ್ರಣ ಮಾಡಿ ನಂತರ ಹೋಟೆಲ್‌ನಲ್ಲಿ ನಾಲ್ವರು ವ್ಯಕ್ತಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ.

Crime News: ಮಹಿಳೆಗೆ ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ, ಅಶ್ಲೀಲ ವಿಡಿಯೋ ಮೂಲಕ ಬ್ಲಾಕ್‌ಮೇಲ್

ಸಾಂದರ್ಭಿಕ ಚಿತ್ರ

ಫಿರೋಜಾಬಾದ್‌: ನೀರಿನಲ್ಲಿ ಅಮಲು ಪದಾರ್ಥಗಳನ್ನು ಮಿಶ್ರಣ ಮಾಡಿ ನಂತರ ಹೋಟೆಲ್‌ನಲ್ಲಿ ನಾಲ್ವರು ವ್ಯಕ್ತಿಗಳು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ನಡೆದಿದೆ. ಆರೋಪಿಗಳು ತನಗೆ ನಿದ್ರಾಜನಕ ಬೆರೆಸಿದ ನೀರು ಕುಡಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ನೀಡಲು ತುಂಡ್ಲಾ ಪೊಲೀಸ್ ಠಾಣೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ತನಗೆ ಈಗಾಗಲೇ ಪರಿಚಯವಿದ್ದ ದೀಪಕ್ ಯಾದವ್ ನವೆಂಬರ್ 7 ರಂದು ತುಂಡ್ಲಾ ನಿಲ್ದಾಣದ ಬಳಿ ತನ್ನನ್ನು ಕರೆದು ಕಾರಿನಲ್ಲಿ ಆಗ್ರಾ ಕಡೆಗೆ ಕರೆದೊಯ್ದಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ದಾರಿಯಲ್ಲಿ ಹೋಗುತ್ತಿದ್ದಾಗ ದೀಪಕ್ ಆಕೆಗೆ ನಿದ್ರಾಜನಕ ಬೆರೆಸಿದ ನೀರನ್ನು ಕುಡಿಸಿ 10 ನಿಮಿಷಗಳ ನಂತರ ಪ್ರಜ್ಞಾಹೀನಳಾಗಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಮಹಿಳೆಯನ್ನು ಆಗ್ರಾ ಬಸಾಯಿ ಚೌಕಿ ಬಳಿಯ ಹೋಟೆಲ್‌ಗೆ ಕರೆದೊಯ್ದಿದ್ದು, ಅಲ್ಲಿ ನಾಲ್ವರು ಆರೋಪಿಗಳಾದ ಅಭಯ್ ಪಂಡಿತ್, ದೀಪಕ್, ಸಾಗರ್ ಮತ್ತು ಸೌರವ್ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಅಶ್ಲೀಲ ವೀಡಿಯೊದೊಂದಿಗೆ ಬ್ಲ್ಯಾಕ್‌ಮೇಲ್

ಆರೋಪಿಯು ತನ್ನ ಅಶ್ಲೀಲ ವೀಡಿಯೊವನ್ನು ಸಹ ಮಾಡಿದ್ದಾನೆ ಮತ್ತು ತನ್ನ ಫೋನ್‌ನಿಂದ ವೀಡಿಯೊವನ್ನು ಅಳಿಸಲು 20,000 ರೂ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಮರುದಿನ, ಅಭಯ್ ಸಂತ್ರಸ್ತೆಗೆ ಮತ್ತೆ ಕರೆ ಮಾಡಿ, ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಅಶ್ಲೀಲ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಿ ಮತ್ತೆ ಅತ್ಯಾಚಾರವೆಸಗಿದ್ದಾನೆ. ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಠಾಣಾ ಉಸ್ತುವಾರಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *