
ವಿದ್ಯುತ್ ತಂತಿ ತಗುಲಿ ಲಾರಿ ಚಾಲಕ ಸಾವು, ಗೋಳಗುಮ್ಮಟದ ಎದುರು ಯುವ ಆಟೋ ಚಾಲಕನ ಹತ್ಯೆ
ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಸಾಮಾಗ್ರಿ ತಂದಿದ್ದ ಚಾಲಕ ಅವಘಡಕ್ಕೆ ತುತ್ತಾಗಿದ್ದಾನೆ. ಅನ್ ಲೋಡ್ ಮಾಡಿ, ವಾಪಸ್ ಹೋಗುವಾಗ ದುರ್ಘಟನೆ ನಡೆದಿದೆ.
ಯಾದಗಿರಿ: ಯಾದಗಿರಿ ನಗರದ ಹೊರ ಭಾಗದ ಮೆಡಿಕಲ್ ಕಾಲೇಜು ರಸ್ತೆಯಲ್ಲಿ ವಿದ್ಯುತ್ ತಂತಿ ತಗುಲಿ ಲಾರಿ ಚಾಲಕ ಮೃತಪಟ್ಟಿರುವ ಘಟನೆ ನಡೆದಿದೆ. ಮುಂಬೈ ಮೂಲದ ಚಾಲಕ ಮುರಳೀಧರ್ ಮೃತಪಟ್ಟ ದುರ್ದೈವಿ. ಮೆಡಿಕಲ್ ಕಾಲೇಜು ಕಟ್ಟಡ ಕಾಮಗಾರಿಗೆ ಸಾಮಾಗ್ರಿ ತಂದಿದ್ದ ಚಾಲಕ ಅವಘಡಕ್ಕೆ ತುತ್ತಾಗಿದ್ದಾನೆ. ಅನ್ ಲೋಡ್ ಮಾಡಿ, ವಾಪಸ್ ಹೋಗುವಾಗ ದುರ್ಘಟನೆ ನಡೆದಿದೆ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲಾರಿ ಚಾಲಕ ಬಲಿಯಾದ ಎಂದು ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗೋಳಗುಮ್ಮಟ ಸ್ಮಾರಕದ ಎದುರು ಹಾಡಹಗಲೇ ಯುವ ಆಟೋ ಚಾಲಕನ ಹತ್ಯೆ:
ವಿಜಯಪುರ ನಗರದ ಗೋಳಗುಮ್ಮಟ ಸ್ಮಾರಕದ ಎದುರು ಹಾಡಹಗಲೇ ಆಟೋ ಚಾಲಕನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ರೈಲ್ವೆ ಸ್ಟೇಷನ್ ನಿವಾಸಿ ವೀರೇಶ್ ಬಂಥನಾಳ(22) ಬರ್ಬರ ಹತ್ಯೆಗೀಡಾದವ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.