ಮೃತ ಮಹಿಳೆ ತನ್ನ ಗಂಡನ ಸಾವಿನ ನಂತರ ಮಲ್ಲಿ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದರಿಂದ ಕೋಪಗೊಂಡಿದ್ದ ಅತ್ತೆ ತನ್ನ ಸೊಸೆಗೆ ಸದಾ ಬೈಯುತ್ತಿದ್ದರು.
ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಸೊಸೆಯ ಕತ್ತರಿಸಿ, ಆ ತಲೆಯೊಂದಿಗೆ ಪೊಲೀಸ್ ಠಾಣೆಗೆ ಬಂದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ (Andhra Pradesh) ಅಣ್ಣಮಯ್ಯ ಜಿಲ್ಲೆಯಲ್ಲಿ ನಡೆದಿದೆ. ಆಂಧ್ರದ ರಾಯಚೋಟಿ ಪುರಸಭಾ ವ್ಯಾಪ್ತಿಯ ಕೊತ್ತಕೋಟ ರಾಮಪುರಂ ನಿವಾಸಿ ಸುಬ್ಬಮ್ಮ ಎಂಬ ಮಹಿಳೆ ಆಸ್ತಿ ವಿವಾದಕ್ಕೆ (Property Dispute) ಸಂಬಂಧಿಸಿದಂತೆ ತನ್ನ ಸೊಸೆ ವಸುಂಧರಾಳನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಶರಣಾಗಲು ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಅಣ್ಣಮಯ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹರ್ಷವರ್ಧನ್ ರಾಜು ಪ್ರಕಾರ, ಆರೋಪಿಗಳು ಆಸ್ತಿ ವಿವಾದದಿಂದಾಗಿ ಸೊಸೆಯ ತಲೆ ಕತ್ತರಿಸಿ ಕೊಂದಿದ್ದಾರೆ. ಮೃತ ಮಹಿಳೆ 35 ವರ್ಷದವರಾಗಿದ್ದು, ಆಕೆಯ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಮೃತ ಮಹಿಳೆಗೆ ಇಬ್ಬರು ಪುತ್ರಿಯರಿದ್ದು, ಪತಿ ಮೃತಪಟ್ಟಿದ್ದರು. ಆರೋಪಿ ವೃದ್ಧೆ ತನ್ನ ಮಗ ಸಾವನ್ನಪ್ಪಿದ ನಂತರ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಅತ್ತೆ-ಸೊಸೆ ನಡುವೆ ಆಸ್ತಿಯ ವಿಷಯಕ್ಕೆ ಜಗಳ ನಡೆಯುತ್ತಿತ್ತು.