
ಮೃತ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿರುವುದು,
ಸಯ್ಯದ್ ಆಕಿಬ್ ಮೃತ ಬಾಲಕ.
ಮಗನನ್ನು ಕಳೆದುಕೊಂಡ ಕುಟುಂಬ ದುಃಖತಪ್ತರಾಗಿದ್ದಾರೆ. ಪೀಣ್ಯಾ ಅಗ್ನಿಶಾಮಕ ದಳದಿಂದ ಕೆರೆಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ: ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಕೆರೆಯಲ್ಲಿ ನಡೆದಿದೆ. ಎಂ.ಎಸ್.ಪಾಳ್ಯದ ಸಯ್ಯದ್ ಆಕಿಬ್ (16) ಮೃತ ಬಾಲಕ. ಅಮೀನ್ ಮಹಮ್ಮದ್, ಅನ್ವರ್ ಮಹಮ್ಮದ್ ಸ್ನೇಹಿತರ ಜೊತೆ ಈಜಲು ತೆರಳಿದ್ದ. ಮೃತ ಬಾಲಕ ಅನ್ಸರ್ ಪಾಶ ಮತ್ತು ಶಿಕ್ಷಕಿ ಅಭೀದಾ ದಂಪತಿಗಳ ಮಗ. ಕೆರಯ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ಯುವಕ ಇವತ್ತು ಫಲಿತಾಂಶ ಬರುವ ದಿನ ಮೊದಲೇ ಬಾಲಕ ಸಾವಿಗೀಡಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬ ದುಃಖತಪ್ತರಾಗಿದ್ದಾರೆ. ಪೀಣ್ಯಾ ಅಗ್ನಿಶಾಮಕ ದಳದಿಂದ ಕೆರೆಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವಿ ಗ್ರಾಮದಲ್ಲಿ ಪ್ರಜ್ವಲ್ ತಿಗಡಿ(15) ಎಂಬ ಬಾಲಕ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಗೆಳೆಯರೊಂದಿಗೆ ಜಮೀನಿಗೆ ಹೋಗಿ ಮರಳುವಾಗ ಘಟನೆ ನಡೆದಿದೆ. ಕೃಷಿ ಹೊಂಡದ ಮೇಲೆ ನಡೆದುಕೊಂಡು ಹೋಗುವಾಗ ಕಾಲು ಜಾರಿ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.