Crime Update: ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ, ಬೈಕ್​ಗಳು ಮುಖಾಮುಖಿ ಇಬ್ಬರು ಸಾವು, ಪ್ರಿಯಕರನಿಂದ ಯುವತಿಯ ಹತ್ಯೆ | Crime Update Murder in Vijayanagar Accident in KR Pet


Crime Update: ಊಟ ಖಾಲಿ ಎಂದಿದ್ದಕ್ಕೆ ಚಾಕು ಇರಿತ, ಬೈಕ್​ಗಳು ಮುಖಾಮುಖಿ ಇಬ್ಬರು ಸಾವು, ಪ್ರಿಯಕರನಿಂದ ಯುವತಿಯ ಹತ್ಯೆ

ಸಾಂಕೇತಿಕ ಚಿತ್ರ

ಬೆಂಗಳೂರು: ಊಟ ಖಾಲಿ ಆಗಿದೆ ಎಂದು ಹೇಳಿದ್ದಕ್ಕೆ ಹೊಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ಆರೋಪಿಯನ್ನು ರೌಡಿಶೀಟರ್ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಹೋಟೆಲ್ ಮಾಲೀಕ ಚಂದ್ರಶೇಖರ್‌ ಚಾಕು ಇರಿತಕ್ಕೆ ಒಳಗಾದವರು. ಗಾಯಾಳು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾತ್ರಿ 10 ಗಂಟೆಯ ನಂತರ ಮದ್ಯದ ಬಾಟಲಿ ಹಿಡಿದು ಸಿಗರೇಟು ಸೇದುತ್ತಾ ಬಂದಿದ್ದ ಯಲ್ಲಪ್ಪ, ಊಟ ಖಾಲಿ ಆಗಿದೆ ಎಂದಿದ್ದಕ್ಕೆ ಚಾಕು ಇರಿದು ಅಟ್ಟಹಾಸ ಮೆರೆದಿದ್ದ. ಈತ 2 ತಿಂಗಳಿಂದಷ್ಟೇ ಜೈಲಿನಿಂದ ಹೊರ ಬಂದಿದ್ದ ರೌಡಿಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯ ಕೊಲೆ
ವಿಚ್ಛೇದಿತ ಮಹಿಳೆಯನ್ನು ಆಕೆಯ ಪ್ರಿಯಕರನೇ ಕೊಲೆ ಮಾಡಿರುವ ಘಟನೆ ವಿಜಯನಗರ ಬಳಿ ಪಟ್ಟೇಗಾರಪಾಳ್ಯದ ಬಾಡಿಗೆಮನೆಯಲ್ಲಿ ನಡೆದಿದೆ. ವೇಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಗಾಯತ್ರಿ (26) ಎಂಬಾಕೆಯನ್ನು ಕೊಲೆ ಮಾಡಲಾಗಿದೆ. ಗಾಯತ್ರಿ ಪ್ರಿಯಕರ ಮಂಜುನಾಥ್ ಪ್ರಸಾದ್ ಕೊಲೆ ಆರೋಪಿ. ಆರೋಪಿಯನ್ನು ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮನೆಕೆಲಸ ಮಾಡಿಕೊಂಡು ಗಾಯತ್ರಿ ಜೀವನ ಸಾಗಿಸುತ್ತಿದ್ದರು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಸವಾರರು ಸಾವು
ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ಎರಡು ಬೈಕ್​ ಮುಖಾಮುಖಿಯಾಗಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಸವಾರರಾದ ಮಧು (20), ದರ್ಶನ್ (21) ಮೃತರು. ಬೈಕ್​ನಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಕ್ಕೇರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ. ಮೃತ ಮಧು ಸಾಸಲು ಗ್ರಾಮದವರು ಮತ್ತು ದರ್ಶನ್ ಹಾಲದಹಳ್ಳಿಯವರು. ವೇಗವಾಗಿ ಸಂಚರಿಸುತ್ತಿದ್ದ ಬೈಕ್​ಗಳು ನಿಯಂತ್ರಣ ತಪ್ಪಿ ಮುಖಾಮುಖಿಯಾದವು.

ಇದನ್ನೂ ಓದಿ: Tumakur: ಭೀಮಾನಾಯ್ಕನ ತಾಂಡಾದಲ್ಲಿ ತಡರಾತ್ರಿ ಜೋಡಿ ಕೊಲೆ; ಗ್ರಾ.ಪಂ. ಉಪಾಧ್ಯಕ್ಷರ ಹತ್ಯೆ

ಇದನ್ನೂ ಓದಿ: ಪಟಾಕಿ ತರಲು ಹೋಗಿದ್ದ ವಿದ್ಯಾರ್ಥಿಯ ಅಪಹರಣ ಮತ್ತು ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

TV9 Kannada


Leave a Reply

Your email address will not be published. Required fields are marked *