Crime Updates: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಅಯೂಬ್ ಖಾನ್ ಜಾಮೀನು ಅರ್ಜಿ ವಜಾ | Ayub Khan Bail Petition Mysuru Court Death Theft News Karnataka Crime News updates


Crime Updates: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಅಯೂಬ್ ಖಾನ್ ಜಾಮೀನು ಅರ್ಜಿ ವಜಾ

ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಆಯೂಬ್ ಖಾನ್

ಮೈಸೂರು: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಆರೋಪಿ ಅಯೂಬ್ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಜಾಮೀನು ಅರ್ಜಿ ವಜಾ ಹಿನ್ನೆಲೆ ಅಯೂಬ್​ಗೆ ಜೈಲೇಗತಿ ಎಂಬಂತಾಗಿದೆ. ಮೈಸೂರಿನ 2ನೇ ಜೆಎಂಎಫ್​ಸಿ ನ್ಯಾಯಾಲಯ ಇಂದು (ಫೆಬ್ರವರಿ 17) ಈ ಬಗ್ಗೆ ಆದೇಶ ನೀಡಿದೆ. ನ್ಯಾಯಾಧೀಶೆ ಶೈಲಶ್ರೀ ಜಾಮೀನು ಅರ್ಜಿ ವಜಾಗೊಳಿಸಿದ್ದಾರೆ. ನ್ಯೂಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಖಾನ್ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಫೆಬ್ರವರಿ 25ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜಾಮೀನು ಅರ್ಜಿ ವಜಾ ಹಿನ್ನೆಲೆ ಅಯೂಬ್​ಗೆ ಜೈಲೇಗತಿ ಎಂಬಂತಾಗಿದೆ.

ರೋಗಿ ಬಳಿ ಲಂಚ ಕೇಳಿ ಎಸಿಬಿ ಬಲೆಗೆ ಬಿದ್ದಿದ್ದ ವೈದ್ಯ ಅಮಾನತು

ಮಡಿಕೇರಿ: ರೋಗಿ ಬಳಿ ಲಂಚ ಕೇಳಿ ಎಸಿಬಿ ಬಲೆಗೆ ಬಿದ್ದಿದ್ದ ವೈದ್ಯರನ್ನು ಅಮಾನತು ಮಾಡಿದ ಘಟನೆ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಜನರಲ್ ಸರ್ಜನ್ ವಿಶ್ವನಾಥ ಶಿಂಪಿ ಸಸ್ಪೆಂಡ್ ಆಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆ ಸರ್ಜನ್ ಸಸ್ಪೆಂಡ್​ ಮಾಡಿ ಸರ್ಕಾರ ಆದೇಶ ನೀಡಿದೆ.

ಬಂದೂಕಿನಿಂದ ಗುಂಡು ಹಾರಿಸಿಕೊಂಡು ಅನುಮಾನಾಸ್ಪದವಾಗಿ ಸೆಕ್ಯೂರಿಟಿ ಗಾರ್ಡ್ ಸಾವು

ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ಹುಚ್ಚೇಗೌಡನಪಾಳ್ಯದಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಅನುಮಾನಾಸ್ಪದವಾಗಿ ಮಡಿಕೇರಿ ಮೂಲದ ಸೆಕ್ಯೂರಿಟಿ ಗಾರ್ಡ್ ಭೀಮಯ್ಯ (65) ಸಾವನ್ನಪ್ಪಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲದಲ್ಲಿ ಕಳೆದ ರಾತ್ರಿ 2 ಅಂಗಡಿಗಳಲ್ಲಿ ಕಳವು

ನೆಲಮಂಗಲ: ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ಕಳೆದ ರಾತ್ರಿ 2 ಅಂಗಡಿಗಳಲ್ಲಿ ಕಳವು ಆದ ಘಟನೆ ನಡೆದಿದೆ. ಸೋಮಣ್ಣಗೆ ಸೇರಿದ ಅಂಗಡಿ ಶೆಟರ್ ಮುರಿದು 80 ಸಾವಿರ ನಗದು, 1 ಲಕ್ಷ ಮೌಲ್ಯದ ಸಿಗರೇಟ್‌ ಬಾಕ್ಸ್‌, 2 ಮೊಬೈಲ್‌ ಕಳವು ಮಾಡಲಾಗಿದೆ. ಮಧುಸೂದನ್‌ಗೆ ಸೇರಿದ ಅಂಗಡಿಯಲ್ಲಿ 500 ರೂ. ನಗದು, 2,500 ರೂ. ಮೌಲ್ಯದ ಚಾಕೊಲೇಟ್‌ ಬಾಕ್ಸ್‌ ಕಳವಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *