Cryptocurrency: ಈ ಕ್ರಿಪ್ಟೋದಲ್ಲಿ 24 ಗಂಟೇಲಿ ಆದ ಏರಿಕೆ ಕಾಣಲು ಬ್ಯಾಂಕ್​ಗಳ ಎಫ್​ಡಿಗೆ ಕನಿಷ್ಠ 25 ಸಾವಿರ ವರ್ಷ ಬೇಕು | Ethereum Meta Gives Return Of 213000 Percent In 24 Hours Here Is The Details


Cryptocurrency: ಈ ಕ್ರಿಪ್ಟೋದಲ್ಲಿ 24 ಗಂಟೇಲಿ ಆದ ಏರಿಕೆ ಕಾಣಲು ಬ್ಯಾಂಕ್​ಗಳ ಎಫ್​ಡಿಗೆ ಕನಿಷ್ಠ 25 ಸಾವಿರ ವರ್ಷ ಬೇಕು

ಪ್ರಾತಿನಿಧಿಕ ಚಿತ್ರ

ಬ್ಯಾಂಕ್​ಗಳಲ್ಲಿ ಎಫ್​.ಡಿ. ಮಾಡಿದರೆ ವರ್ಷಕ್ಕೆ ಏಳ ಪರ್ಸೆಂಟ್ ಬಡ್ಡಿ ಸಿಕ್ಕರೆ ಹೆಚ್ಚು ಎನ್ನುವಂತಾಗಿದೆ. ಯಾರು ನಿಯಮಿತವಾಗಿ ಆದಾಯ ಬೇಕು ಅಂದುಕೊಳ್ಳುತ್ತಾರೋ ಹಾಗೂ ಅಪಾಯ ಮೈ ಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಆಲೋಚನೆ ಇರುತ್ತದೋ ಅಂಥವರಿಗೆ ಇದು ಸರಿ. ಈಗೆಲ್ಲ ಕ್ರಿಪ್ಟೋಕರೆನ್ಸಿಗಳದೇ ಹವಾ. ಇದರಲ್ಲಿ ಭಾರೀ ಅಪಾಯ ಒಳಗೊಂಡಿರುತ್ತದೆ ಎಂಬುದೂ ಸತ್ಯ. ಮೊನ್ನೆ ಮೊನ್ನೆ ಕೋಕೋಸ್ವಾಪ್ ಎಂಬ ಕ್ರಿಪ್ಟೋಕರೆನ್ಸಿ 71,000 ಪರ್ಸೆಂಟ್​​ ರಿಟರ್ನ್ಸ್ ಅನ್ನು 24 ಗಂಟೆಯೊಳಗೆ ಬಂದಿತ್ತು. ಇದೀಗ ಮತ್ತೊಂದು ಕ್ರಿಪ್ಟೋ ಸುದ್ದಿ ಕೇಳಿ. ಕೇವಲ 24 ಗಂಟೆಯೊಳಗೆ 2,13,000 ಪರ್ಸೆಂಟ್ ರಿಟರ್ನ್ಸ್ ನೀಡಿದೆ. ನೀವು ಓದುತ್ತಿರುವುದು ಸರಿಯಿದೆ, 2.13 ಲಕ್ಷ ಪರ್ಸೆಂಟ್​. ಆರಂಭದಲ್ಲಿ ಹೇಳಿದ ಹಾಗೆ ವರ್ಷಕ್ಕೆ ಶೇ 7ರ ಲೆಕ್ಕಾಚಾರದಲ್ಲಿ ಈ ಪ್ರಮಾಣದ ರಿಟರ್ನ್ಸ್​ ಬರಬೇಕೆಂದರೆ ಅಂದಾಜು 25 ಸಾವಿರ ವರ್ಷಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಲೆಕ್ಕ ಎಷ್ಟು ತಮಾಷೆಯಾಗಿ ಇದೆಯಲ್ಲವಾ!

ಕಾಯಿನ್​ಮಾರ್ಕೆಟ್​ಮ್ಯಾಪ್ ಡೇಟಾ ಪ್ರಕಾರ ಇಷ್ಟು ದೊಡ್ಡ ರಿಟರ್ನ್ಸ್​ ನೀಡಿದ್ದು ಎಥೆರಿಯಂ ಮೆಟಾ. 0.00000005604 ಯುಎಸ್​ಡಿಯಿಂದ 0.0001194 ಯುಎಸ್​ಡಿಗೆ ಏರಿಕೆ ಆಗಿದ್ದು, ಭಾರತೀಯ ಕಾಲಮಾನ ಸಂಜೆ 4.40ರ ಸುಮಾರಿಗೆ 0.00006226 ಅಮೆರಿಕನ್ ಡಾಲರ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಇದೀಗ ಭಾರತದ ರೂಪಾಯಿ ಲೆಕ್ಕದಲ್ಲಿ ನಿಮ್ಮೆದುರು ಇಡಲಾಗುತ್ತಿದೆ. 0.0000042ರಲ್ಲಿ ಇದ್ದದ್ದು 0.0089ಕ್ಕೆ ತಲುಪಿತು. ಆ ನಂತರ 0.0046ಕ್ಕೆ ವ್ಯವಹಾರ ನಡೆಸುತ್ತಿತ್ತು. ಕ್ರಿಪ್ಟೋ ವಹಿವಾಟು ತುಂಬ ಆಕರ್ಷಕವಾಗಿ ಕಾಣಿಸುತ್ತದೆ. ಆದರೆ ಅಷ್ಟೇನೂ ಪರಿಚಯವೇ ಇರದ ಕ್ರಿಪ್ಟೋ ಸಾವಿರಾರು ಪರ್ಸೆಂಟ್​ನಷ್ಟು ಕೆಲವೇ ಗಂಟೆಗಳಲ್ಲಿ ಏರಿಕೆ ಕಾಣುತ್ತದೆ. ಅದೇ ಕಾರಣಕ್ಕೆ ಕ್ರಿಪ್ಟೋ ಆಧಾರಿತ ಟ್ರೇಡಿಂಗ್ ಅಪಾಯವೂ ಹೌದು, ವಿಪರೀತ ಏರಿಳಿತದಿಂದ ಕೂಡಿರುವುದು ನಿಜ.

ಈಚೆಗೆ, ಕೋಕೋಸ್ವಾಪ್ 0.01005 ಅಮೆರಿಕನ್ ಡಾಲರ್​ನಿಂದ 7.22 ಯುಎಸ್​ಡಿ ತಲುಪಿತು. ಅದು ಕೇವಲ 24 ಗಂಟೆಯೊಳಗೆ 71,000 ಪರ್ಸೆಂಟ್ ಭಾರೀ ರಿಟರ್ನ್ಸ್ ನೀಡಿವೆ. HUSKYX ಕೂಡ ಕ್ರಿಪ್ಟೋ. ನಿಯಮಿತವಾಗಿ ಹೂಡಿಕೆ ಮಾಡುವವರಿಗೆ ಈ ಕ್ರಿಪ್ಟೋಕರೆನ್ಸಿ ಬಗ್ಗೆ ಪರಿಚಯ ಇರುತ್ತದೆ. ಕೇವಲ 24 ಗಂಟೆಯಲ್ಲಿ ಶೇ 45,000ರಷ್ಟು ಏರಿಕೆ ಕಂಡಿದೆ. 0.000000004089 ಯುಎಸ್​ಡಿಯಿಂದ 0.000001878 ಅಮೆರಿಕನ್ ಡಾಲರ್​ಗೆ ಏರಿದೆ. ಸ್ಕ್ವಿಡ್ ಗೇಮ್ಸ್ ಆಧಾರಿತ SQUID ಟೋಕನ್ ಸಹ ಕೆಲ ದಿನಗಳ ಹಿಂದೆ ಇಂಥದ್ದೇ ಏರಿಕೆಯನ್ನು ದಾಖಲಿಸಿತ್ತು.

ಅಂದಹಾಗೆ ಎಥೆರಂ ಮೆಟಾದ ಮಾರುಕಟ್ಟೆ ಬಂಡವಾಳ ಮೌಲ್ಯ ಇರುವುದು 3.1 ಮಿಲಿಯನ್ ಅಮೆರಿಕನ್ ಡಾಲರ್ ಮಾತ್ರ. ಎಥೆರಮ್​ನ ಪ್ರಮುಖ ದೌರ್ಬಲ್ಯ ಅಂದರೆ ಅದು ಖಾಸಗಿತನದ ಕೊರತೆ. ಅದು ಈ ಟೋಕನ್​ನಲ್ಲಿ ಇಲ್ಲ. ಈ ಟೋಕನ್ ಸ್ಮಾರ್ಟ್​ ಕಾಂಟ್ರಾಕ್ಟ್ ಸಕ್ರಿಯಗೊಳಿಸುತ್ತದೆ. ಸ್ನೇಹಿತರು, ಕುಟುಂಬಸ್ಥರು ಹೀಗೆ ಉಳಿದವರು ಯಾರೂ ಏನು ಖರೀದಿ ಆಗಿದೆ ಅಥವಾ ಮಾರಾಟ ಆಗಿದೆ ಎಂದು ನೋಡಲು ಸಾಧ್ಯವಿಲ್ಲ. ಹೊಸ ಎಥೆರಮ್ ಮೆಟಾದ ಸ್ಮಾರ್ಟ್​ ಕಾಂಟ್ರಾಕ್ಟ್​ಗಳ ಮೂಲಕ ಇಬ್ಬರು ಪಾರ್ಟಿಗಳ ಮಧ್ಯೆ ನೇರವಾದ ಅನಾಮಧೇಯ ಪಾವತಿಗೆ ಅವಕಾಶ ನೀಡುತ್ತದೆ.

ಎಥೆರಮ್ ಮೆಟಾ ವಹಿವಾಟುಗಳು ಸಾಮಾನ್ಯ (ಅನಾಮಧೇಯ) ವಹಿವಾಟುಗಳೊಂದಿಗೆ ಅಸ್ತಿತ್ವದಲ್ಲಿವೆ. ಪ್ರತಿಯೊಬ್ಬ ಬಳಕೆದಾರರು ಅನಾಮಧೇಯ ಕಾಯಿನ್​ಗಳನ್ನು (ಈಥರ್ಸ್) ಅನಾಮಧೇಯ kಆಯಿನ್​ಗಳಾಗಿ ಪರಿವರ್ತಿಸಬಹುದು, ಇದು ಮೂಲತಃ ಎಥೆರಿಯಮ್ ಮೆಟಾ. ಬಳಕೆದಾರರು ನಂತರ ಇತರ ಬಳಕೆದಾರರಿಗೆ ಎಥೆರಮ್ ಮೆಟಾವನ್ನು ಕಳುಹಿಸಬಹುದು ಮತ್ತು ಒಟ್ಟು ಮೌಲ್ಯವನ್ನು ಸಂರಕ್ಷಿಸುವ ಯಾವುದೇ ರೀತಿಯಲ್ಲಿ ಅವರು ಹೊಂದಿರುವ ಎಥೆರಮ್ ಮೆಟಾವನ್ನು ವಿಭಜಿಸಬಹುದು ಅಥವಾ ವಿಲೀನಗೊಳಿಸಬಹುದು. ಬಳಕೆದಾರರು ಎಥೆರಮ್ ಮೆಟಾವನ್ನು ಸಾಮಾನ್ಯ ಈಥರ್ ಆಗಿ ಪರಿವರ್ತಿಸಬಹುದು, ಪತ್ತೆ ಹಚ್ಚಬಹುದಾದ ಯಾವುದೇ ಸಂಭವನೀಯತೆಯನ್ನು ಇಲ್ಲದಂತೆ ಮಾಡಬಹುದು.

ವಿಶೇಷ ಸೂಚನೆ: ಈ ಲೇಖನವು ಯಾವುದೇ ಖರೀದಿಗೆ ಶಿಫಾರಸಲ್ಲ. ಕ್ರಿಪ್ಟೋಕರೆನ್ಸಿಗಳಿಗೆ ಭಾರತದಲ್ಲಿ ಕಾನೂನು ಮಾನ್ಯತೆ ಇಲ್ಲ. ಇದರಲ್ಲಿ ಏರಿಳಿತ ಪ್ರಮಾಣ ಹೆಚ್ಚಿರುತ್ತದೆ. ಆದ್ದರಿಂದ ಬಹಳ ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: Cryptocurrency: ಕೇವಲ 24 ಗಂಟೆಯಲ್ಲಿ 71 ಸಾವಿರ ಪರ್ಸೆಂಟ್​ನಷ್ಟು ಏರಿಕೆ ಕಂಡ ಈ ಕ್ರಿಪ್ಟೋಕರೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

TV9 Kannada


Leave a Reply

Your email address will not be published. Required fields are marked *