CSK vs RCB: ಈ ಬಾರಿ ಆರ್​ಸಿಬಿಯೇ ಫೆವರೆಟ್! ಚೆನ್ನೈ-ಬೆಂಗಳೂರು ಕದನದಲ್ಲಿ ಯಾವ ತಂಡ ಮೇಲುಗೈ ಸಾಧಿಸಿದೆ? | Who will win csk vs rcb IPL Match Today Preview Prediction Chennai super kings vs royal challengers bangalore 12th April In kannada


CSK vs RCB: ಈ ಬಾರಿ ಆರ್​ಸಿಬಿಯೇ ಫೆವರೆಟ್! ಚೆನ್ನೈ-ಬೆಂಗಳೂರು ಕದನದಲ್ಲಿ ಯಾವ ತಂಡ ಮೇಲುಗೈ ಸಾಧಿಸಿದೆ?

CSK vs RCB

ಐಪಿಎಲ್ 2022 (IPL 2022) ರಲ್ಲಿ, ಪ್ರಸ್ತುತ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಂಗಳವಾರ ಇನ್ ಫಾರ್ಮ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವನ್ನು ಎದುರಿಸಲಿದೆ. ಈ ಎರಡೂ ತಂಡಗಳು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಹೊಸ ನಾಯಕರೊಂದಿಗೆ ಈ ಋತುವಿನಲ್ಲಿ ಬಂದಿಳಿದಿವೆ. ಈ ಬಾರಿ ಚೆನ್ನೈ ತಂಡದ ನಾಯಕತ್ವವನ್ನು ಮಹೇಂದ್ರ ಸಿಂಗ್ ಧೋನಿ ಬದಲಿಗೆ ರವೀಂದ್ರ ಜಡೇಜಾ ನಿರ್ವಹಿಸುತ್ತಿದ್ದರೆ, ಆರ್‌ಸಿಬಿಯ ಕಮಾಂಡ್ ವಿರಾಟ್ ಕೊಹ್ಲಿ ಬದಲಿಗೆ ಫಾಫ್ ಡು ಪ್ಲೆಸಿಸ್ ಕೈಯಲ್ಲಿದೆ. ಪ್ರಸಕ್ತ ಋತುವಿನಲ್ಲಿ ಚೆನ್ನೈಗೆ ಉತ್ತಮವಾಗಿಲ್ಲ. ಅವರು ನಾಲ್ಕು ಪಂದ್ಯಗಳನ್ನು ಆಡಿ, ನಾಲ್ಕರಲ್ಲಿ ಸೋತಿದ್ದಾರೆ. ಆದರೆ RCB ಉತ್ತಮ ಸ್ಥಿತಿಯಲ್ಲಿದೆ.

ಪಾಯಿಂಟ್ ಪಟ್ಟಿಯಲ್ಲಿ ಇವರಿಬ್ಬರ ಸ್ಥಾನವನ್ನು ನೋಡಿದರೆ, ಚೆನ್ನೈ 10ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, RCB ಪ್ರಸಕ್ತ ಋತುವಿನಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ ಮತ್ತು ಒಂದರಲ್ಲಿ ಸೋತಿದೆ. ಈ ತಂಡ ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೊಸ ನಾಯಕನ ನಾಯಕತ್ವದಲ್ಲಿ ಈ ಋತುವಿನಲ್ಲಿ, RCB ತುಂಬಾ ಪ್ರಬಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಈಗಿನ ಫಾರ್ಮ್ ನೋಡಿದರೆ ಆರ್‌ಸಿಬಿಯೇ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

ಮುಖಾಮುಖಿ ಅಂಕಿಅಂಶ
ಇವರಿಬ್ಬರ ನಡುವಿನ ಒಟ್ಟು ಪಂದ್ಯಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಚೆನ್ನೈ ತಂಡವೇ ಮೇಲುಗೈ ಸಾಧಿಸಿದೆ. ಈ ಎರಡು ತಂಡಗಳ ನಡುವೆ ಇದುವರೆಗೆ ಒಟ್ಟು 29 ಪಂದ್ಯಗಳು ನಡೆದಿವೆ. ಈ ಪೈಕಿ ಚೆನ್ನೈ ತಂಡ 19 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್‌ಸಿಬಿ ತಂಡ ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಒಂದು ಪಂದ್ಯದ ಫಲಿತಾಂಶ ಕಂಡುಬಂದಿಲ್ಲ. ಹೀಗಿರುವಾಗ ಒಟ್ಟು ಪಂದ್ಯಗಳ ಅಂಕಿ-ಅಂಶದಲ್ಲಿ ಚೆನ್ನೈ ತಂಡ ಬಲಿಷ್ಠವಾಗಿ ಕಾಣುತ್ತದೆ.

ಕಳೆದ ಐದು ಪಂದ್ಯಗಳ ಫಲಿತಾಂಶ ಇಲ್ಲಿದೆ
ಮತ್ತೊಂದೆಡೆ, ಈ ಎರಡು ತಂಡಗಳ ನಡುವಿನ ಕಳೆದ ಐದು ಪಂದ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ, ಇಲ್ಲಿಯೂ ಚೆನ್ನೈ ಪ್ರಾಬಲ್ಯ ತೋರುತ್ತಿದೆ. ಕಳೆದ ಐದು ಪಂದ್ಯಗಳಲ್ಲಿ ಚೆನ್ನೈ ಮೂರರಲ್ಲಿ ಗೆದ್ದಿದ್ದರೆ, ಆರ್‌ಸಿಬಿ ಎರಡು ಪಂದ್ಯಗಳನ್ನು ಗೆದ್ದಿದೆ. ಕಳೆದ ಮೂರು ಪಂದ್ಯಗಳು ಚೆನ್ನೈನ ಅಂಗಳಕ್ಕೆ ಹೋಗಿದ್ದು, ಮೊದಲೆರಡು ಪಂದ್ಯಗಳು ಬೆಂಗಳೂರಿನ ಅಂಗಳಕ್ಕೆ ಹೋಗಿವೆ. 24 ಸೆಪ್ಟೆಂಬರ್ 2021, 25 ಏಪ್ರಿಲ್ 2021 ಮತ್ತು 25 ಅಕ್ಟೋಬರ್ 2021 ರಂದು ಚೆನ್ನೈ ಪಂದ್ಯಗಳನ್ನು ಗೆದ್ದಿತು. ಅದೇ ಸಮಯದಲ್ಲಿ, RCB 10 ಅಕ್ಟೋಬರ್ 2020 ಮತ್ತು 21 ಏಪ್ರಿಲ್ 2019 ರಂದು ಚೆನ್ನೈ ವಿರುದ್ಧ ಜಯಗಳಿಸಿತು.

TV9 Kannada


Leave a Reply

Your email address will not be published. Required fields are marked *