CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್​​ನಲ್ಲಿಂದು ರಣ ರೋಚಕ ಕದನ | Tata IPL 2022 match between Chennai Super Kings and Royal Challengers Bangalore CSK vs RCB Today


CSK vs RCB, IPL 2022: ಬೆಂಗಳೂರು vs ಚೆನ್ನೈ: ಐಪಿಎಲ್​​ನಲ್ಲಿಂದು ರಣ ರೋಚಕ ಕದನ

CSK vs RCB IPL 2022

ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿಂದು ಕುತೂಹಲಕಾರಿ ಕದನ ನಡೆಯಲಿದೆ. ಈ ಬಾರಿ ಒಂದೇ ಒಂದು ಗೆಲುವು ಕಾಣದೆ ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್​ ಫಾಫ್ ಡುಪ್ಲೆಸಿಸ್ (Faf Duplessis) ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (CSK vs RCB) ತಂಡವನ್ನು ಎದುರಿಸಲಿದೆ. ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್​​ ಅಕಾಡೆಮಿಯಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಅಭಿಮಾನಿಗಳಂತು ಕಾದು ಕುಳಿತಿದ್ದಾರೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bangalore) ತಂಡ ಆಡಿರುವ 4 ಪಂದ್ಯಗಳಲ್ಲಿ ಸೋತಿದ್ದು ಒಂದರಲ್ಲಿ ಮಾತ್ರ. ಮೂರು ಪಂದ್ಯಗಳಲ್ಲಿ ಗೆದ್ದಿದ್ದರೂ ರನ್​​ ರೇಟ್​​ ದೊಡ್ಡ ಮಟ್ಟದಲ್ಲಿಲ್ಲ. ಇತ್ತ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡಕ್ಕೆ ಸಾಕಷ್ಟು ತಲೆನೋವಿದೆ. ಬೌಲಿಂಗ್​ ಮತ್ತು ಬ್ಯಾಟಿಂಗ್​​ ತಲೆನೋವು ಒಂದು ಕಡೆಯಾದರೆ ಗೆಲ್ಲುತ್ತಿಲ್ಲ ಅನ್ನುವ ಒತ್ತಡವಿದೆ. 4 ಪಂದ್ಯಗಳಲ್ಲೂ ಸೋತಿರುವ ಚೆನ್ನೈ ಈ ಪಂದ್ಯದಲ್ಲಿ ಕೆಲ ಬದಲಾವಣೆ ಮಾಡುವುದು ಖಚಿತ.

ಇದರ ನಡುವೆ ಡುಪ್ಲೆಸಿಸ್ ತಮ್ಮ ಮಾಜಿ ತಂಡದ ವಿರುದ್ಧ ಆರ್‌ಸಿಬಿ ನಾಯಕರಾಗಿ ಕಣಕ್ಕಿಳಿಯುತ್ತಿರುವುದು ಕೂಡ ಪಂದ್ಯದ ಕುತೂಹಲ ಹೆಚ್ಚಿಸಿದೆ. ಬೆಂಗಳೂರು ತಂಡ ಎಲ್ಲ ವಿಭಾಗಗಳಲ್ಲೂ ಲಯ ಕಂಡುಕೊಂಡಿದೆ. ಚೊಚ್ಚಲ ಅರ್ಧಶತಕ ಗಳಿಸಿರುವ ಆರಂಭಿಕ ಬ್ಯಾಟರ್ ಅನುಜ್ ರಾವತ್ ಮತ್ತು ಲಯಕ್ಕೆ ಮರಳಿರುವ ವಿರಾಟ್ ಕೊಹ್ಲಿ ಮೇಲೆ ತಂಡದ ನಿರೀಕ್ಷೆ ಹೆಚ್ಚಿದೆ. ಯಾವುದೇ ರೀತಿಯ ಬೌಲಿಂಗ್ ದಾಳಿಯನ್ನು ಎದುರಿಸಬಲ್ಲ ಸಾಮರ್ಥ್ಯ ಇರುವ ಡುಪ್ಲೆಸಿ ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಬಲವಿದೆ. ಅನುಭವಿಗಳಾದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ಶಾಬಾಜ್ ಅಹಮದ್ ಕೂಡ ತಂಡಕ್ಕೆ ಆಸರೆಯಾಗಿದ್ದಾರೆ. ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ, ವನಿಂದು ಹಸರಂಗ ಬೌಲಿಂಗ್‌ನಲ್ಲಿ ಗಮನಸೆಳೆಯುತ್ತಿದ್ದರೆ, ಸಹೋದರಿ ನಿಧನದಿಂದಾಗಿ ಹರ್ಷಲ್ ಪಟೇಲ್ ಸೇವೆ ಈ ಪಂದ್ಯಕ್ಕೆ ಸಿಗುತ್ತಿಲ್ಲ.

ಇತ್ತ ರವೀಂದ್ರ ಜಡೇಜ ಮುಂದಾಳತ್ವದ ಚೆನ್ನೈಗೆ ಯಾವ ಪಂದ್ಯದಲ್ಲೂ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ. ಸತತ ಸೋಲಿನಿಂದಾಗಿ ತಂಡದ ಆತ್ಮವಿಶ್ವಾಸ ಕಳೆದುಹೋಗಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೇ ಹೇಳಿಕೊಂಡಿದ್ದಾರೆ. ಆದ್ದರಿಂದ ಭರವಸೆಯಿಂದ ಆಡಲು ತಂಡ ಮುಂದಾಗಲಿದೆ. ರಾಬಿನ್​ ಉತ್ತಪ್ಪ ಮತ್ತು ರುತುರಾಜ್​​ ಗಾಯಕ್ವಾಡ್​​ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತ, ಆದರೆ ರನ್ ಬರುತ್ತಿಲ್ಲ. ಮೊಯಿನ್​ ಅಲಿಯ ಸ್ಥಾನವೂ ಭದ್ರ. ಆದರೆ ಅಂಬಟಿ ರಾಯುಡು ಜಾಗದಲ್ಲಿ ಶುಭ್ರಾಂಶು ಸೇನಾಪತಿಯನ್ನು ಆಡಿಸುವ ಸಾಧ್ಯತೆ ಇದೆ. ಶಿವಂ ದುಬೆ ಸ್ಥಾನವೂ ಗಟ್ಟಿ. ಜಡೇಜಾ, ಧೋನಿ ಮತ್ತು ಬ್ರಾವೋ ಆಡುವುದು ಗ್ಯಾರೆಂಟಿ. ತೀಕ್ಷಣ ಬದಲು ಡ್ವೈನ್​​ ಪ್ರಿಟೋರಿಯಸ್​​ ಮತ್ತೆ ತಂಡ ಸೇರಬಹುದು. ಮಕೇಶ್​ ಚೌಧರಿ ಮತ್ತು ರಾಜ್​​ವರ್ಧನ್​ ಹಂಗರ್ಗೇಕರ್​​ ಆಡುವ ಸಾಧ್ಯತೆ ಇದೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಐಪಿಎಲ್ ಇತಿಹಾಸದಲ್ಲಿ ಒಟ್ಟು 28 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಈ ಪೈಕಿ ಚೆನ್ನೈ 18 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಬೆಂಗಳೂರು 9 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ ಉಳಿದೊಂದು ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಕೊನೆಯದಾಗಿ ನಡೆದಿರುವ 5 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳಲ್ಲಿ ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ಪಂದ್ಯದಲ್ಲಿ ಗೆದ್ದಿದೆ.

ಡಿವೈ ಪಾಟೀಲ್ ಕ್ರೀಡಾಂಗಣ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ನೆರವು ದೊರೆಯಲಿದೆ. ಇಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಶರಣಾಗಿತ್ತು. ಆರಂಭದಲ್ಲಿ ವೇಗಿಗಳು ಉತ್ತಮ ನೆರವು ಪಡೆಯಲಿದ್ದು ನಂತರ ಸ್ಪಿನ್ನರ್‌ಗಳು ಕೂಡ ಮಿಂಚುವ ನಿರೀಕ್ಷೆಯಿದೆ. ಪಂದ್ಯ ಮುಂದುವರಿಯುತ್ತಿದ್ದಂತೆಯೇ ಬ್ಯಾಟರ್‌ಗಳಿಗೆ ನೆರವು ದೊರೆಯಲಿದೆ.

SRH vs GT: ಐಪಿಎಲ್ 2022 ರಲ್ಲಿ ಮೊದಲ ಸೋಲು ಕಂಡ ಹಾರ್ದಿಕ್ ಪಡೆ: ಬಲಿಷ್ಠವಾಗುತ್ತಿದೆ ಎಸ್​ಆರ್​​ಹೆಚ್

TV9 Kannada


Leave a Reply

Your email address will not be published.