Currency Exchange Rate: ವಿದೇಶೀ ಪ್ರವಾಸ ಹೊರಟರಾ? ಭಾರತದ ರೂಪಾಯಿ ಮೌಲ್ಯ ಯಾವ ದೇಶದ ವಿರುದ್ಧ ಎಷ್ಟಿದೆ ತಿಳಿಯಿರಿ | Are You Planning Foreign Trip Know The Indian Rupee Value Against World’s Major Currency


Currency Exchange Rate: ವಿದೇಶೀ ಪ್ರವಾಸ ಹೊರಟರಾ? ಭಾರತದ ರೂಪಾಯಿ ಮೌಲ್ಯ ಯಾವ ದೇಶದ ವಿರುದ್ಧ ಎಷ್ಟಿದೆ ತಿಳಿಯಿರಿ

ಸಾಂದರ್ಭಿಕ ಚಿತ್ರ

ಭಾರತೀಯರು ಯಾವ ದೇಶಕ್ಕೆ ಪ್ರವಾಸಕ್ಕೆ ಅಂತ ಹೋದರೆ ನಮ್ಮ ದುಡ್ಡಲ್ಲಿ ಸಕತ್ ಆಗಿ ಖರ್ಚು ಮಾಡಿ, ಎಂಜಾಯ್ ಮಾಡಬಹುದು ಅನ್ನೋದು ಕೆಲವರ ಪ್ರಶ್ನೆ ಆಗಿರುತ್ತದೆ. ಇದೆಂಥ ಪ್ರಶ್ನೆ ಅನ್ನುತ್ತೀರಾ? ಭಾರತದ ರೂಪಾಯಿ ಮೌಲ್ಯ ಕೆಲವು ದೇಶಗಳಿಗಿಂತ ಕಡಿಮೆ ಇರಬಹುದು. ಆದರೆ ಕೆಲವು ದೇಶಗಳಲ್ಲಿ ಭಾರತದ ರೂಪಾಯಿ ಮೌಲ್ಯವೇ ಜಾಸ್ತಿ ಉದಾಹರಣೆಗೆ ಶ್ರೀಲಂಕಾ, ಬಾಂಗ್ಲಾದೇಶ್, ನೇಪಾಳ ಹೀಗೆ. ಇದರ ಜತೆಗೆ ಖರೀದಿ, ವ್ಯಾಸಂಗ, ಆಮದು- ರಫ್ತು ಏನೇ ಇರಲಿ ಕರೆನ್ಸಿ ಮೌಲ್ಯ ಮುಖ್ಯ ಪಾತ್ರ ವಹಿಸುತ್ತದೆ. ನಿಮಗೆ ಗೊತ್ತಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ದೇಶದ ಕರೆನ್ಸಿಗೆ (Currency) ಮಾನ್ಯತೆ ಹೆಚ್ಚು? ನಿಮಗೆ ಈ ಉತ್ತರ ಗೊತ್ತಿದ್ದಲ್ಲಿ, ಹೌದು, ಅದು ಅಮೆರಿಕದ ಡಾಲರ್. ಆದರೆ ಮೌಲ್ಯ ಅನ್ನೋ ವಿಚಾರಕ್ಕೆ ಬಂದಾಗ ಇತರ ದೇಶ, ವಲಯದ ಕರೆನ್ಸಿಗಳಿಗೆ ಬೆಲೆ ಜಾಸ್ತಿ. ಈಗ ಭಾರತದ ರೂಪಾಯಿಯಲ್ಲೇ ನೋಡುತ್ತಾ ಕೆಲವು ದೇಶಗಳ ಕರೆನ್ಸಿಗೆ ಎಷ್ಟು ನೀಡಬೇಕಾಗುತ್ತದೆ ಎಂಬುದನ್ನು ಗಮನಿಸೋಣ. ಏಪ್ರಿಲ್ 25ನೇ ತಾರೀಕಿನ ಸೋಮವಾರದ ವಿನಿಮಯ ದರ (Exchange Rate) ಇಲ್ಲಿ ತಿಳಿಸಲಾಗುತ್ತಿದೆ.

ಅಮೆರಿಕ ಯುಎಸ್​ಡಿ 1ಕ್ಕೆ= 76.71900 ಭಾರತದ ರೂಪಾಯಿ

ಬ್ರಿಟಿಷ್​ ಪೌಂಡ್ ಸ್ಟರ್ಲಿಂಗ್​​ಗೆ= 97.70100 ಭಾರತದ ರೂಪಾಯಿ

ಯುರೋಗೆ= 82.23400 ಭಾರತದ ರೂಪಾಯಿ

ಚೀನಾದ ಯುವಾನ್= 11.69290 ಭಾರತದ ರೂಪಾಯಿ

ಜಪಾನ್​ನ ಯೆನ್= 0.68406 (68 ಪೈಸೆ)

ಕುವೈತ್​ ದಿನಾರ್= 249.26800 ಭಾರತದ ರೂಪಾಯಿ

ಇರಾನ್​ನ ರಿಯಾಲ್= 0.00182 ಪೈಸೆ

ಬಾಂಗ್ಲಾದೇಶ್​ ಟಾಕಾ= 0.88934 (88 ಪೈಸೆ)

ಶ್ರೀಲಂಕಾ ರೂಪಾಯಿ= 0.22564 (22 ಪೈಸೆ)

ಪಾಕಿಸ್ತಾನದ ರೂಪಾಯಿ= 0.41004 (41 ಪೈಸೆ)

ನೇಪಾಳದ ರೂಪಾಯಿ= 0.62550 (62 ಪೈಸೆ)

ರಷ್ಯಾದ ರೂಬೆಲ್= 1.03625 (1.03 ಪೈಸೆ)

ಕಚ್ಚಾ ತೈಲ, ಅನಿಲ ಖರೀದಿಯೂ ಸೇರಿ ಅಂತರರಾಷ್ಟ್ರೀಯ ವಹಿವಾಟುಗಳಿಗೆ ಅಮೆರಿಕನ್ ಡಾಲರ್​ ಬಳಸಲಾಗುತ್ತದೆ. ಆದರೆ ಯುನೈಟೆಡ್​ ಕಿಂಗ್​ಡಮ್​ನ ಪೌಂಡ್​ ಸ್ಟರ್ಲಿಂಗ್, ಯುರೋಪ್​ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್​ ದಿನಾರ್​ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ.

(ಮಾಹಿತಿ ಮೂಲ: goodreturns.in)

TV9 Kannada


Leave a Reply

Your email address will not be published.