ಭಾರತದ ಸಂದೀಪ್ ಕುಮಾರ್ ಕಾಮನ್ವೆಲ್ತ್ ಗೇಮ್ಸ್-2022 ರ ಪುರುಷರ 10,000 ಮೀಟರ್ ನಡಿಗೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಭಾರತದ ಸಂದೀಪ್ 38 ನಿಮಿಷ 49 ಸೆಕೆಂಡುಗಳಲ್ಲಿ ಓಟ ಮುಗಿಸಿ ಮೂರನೇ ಸ್ಥಾನ ಪಡೆದರು. ಆಸ್ಟ್ರೇಲಿಯದ ಇವಾನ್ ಡನ್ಫಿ 38 ನಿಮಿಷ 36:37 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದು ಅಗ್ರಸ್ಥಾನ ಪಡೆದರು. ಮತ್ತೊಂದೆಡೆ, ಈ ದೂರವನ್ನು 38 ನಿಮಿಷ 42:33 ಸೆಕೆಂಡುಗಳಲ್ಲಿ ಕ್ರಮಿಸಿದ ಡೆಕ್ಲಾನ್ ಟಿಂಗೆ ಬೆಳ್ಳಿ ಪದಕ ಗೆದ್ದರು. ಈವೆಂಟ್ನಲ್ಲಿನ ಮತ್ತೊಬ್ಬ ಭಾರತೀಯ ಅಮಿತ್ ಖತ್ರಿ, ಸೀಸನ್ನ ಅತ್ಯುತ್ತಮ ಸಮಯ (43:04.97)ದೊಂದಿಗೆ ಒಂಬತ್ತನೇ ಸ್ಥಾನ ಪಡೆದರು.
It’s an #Indian day at the #CommonwealthGames2022 as Sandeep Kumar wins a bronze medal in the men’s 10000m Race Walk with a time of 38:49.21 minutes after the Gold & Silver medal in the men’s Triple Jump by Eldhose Paul (17.03m) and Abdulla Aboobacker (17.02m)#IndianAthletics pic.twitter.com/Ult1LvcPJ6
— Athletics Federation of India (@afiindia) August 7, 2022